ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯಾತೀತ’ ಮತ್ತು ‘ಸಮಾಜವಾದ’ ಶಬ್ದವನ್ನು ತೆಗೆಯಲು ರಾಜ್ಯಸಭೆಯಲ್ಲಿ ಖಾಸಗಿ ವಿಧೇಯಕ ಮಂಡನೆ !

ಸಂವಿಧಾನದಿಂದ ಈ ಶಬ್ದಗಳನ್ನು ತೆಗೆದುಹಾಕಲು ಭಾಜಪದ ಸಂಸತ್ತಿನ ಸದಸ್ಯರಾದ ಡಾ. ಸುಬ್ರಹ್ಮಣ್ಯಮ ಸ್ವಾಮಿಯವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ನವದೆಹಲಿ – ತುರ್ತುಪರಿಸ್ಥಿತಿಯ ಕಾಲದಲ್ಲಿ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿರುವ ‘ಧರ್ಮನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆಗೆದುಹಾಕುವ ಬಗ್ಗೆ ಖಾಸಗಿ ವಿಧೇಯಕವನ್ನು ಭಾಜಪದ ರಾಜ್ಯಸಭೆಯಲ್ಲಿನ ಸಂಸದರಾದ ಕೆ. ಜೆ. ಅಲ್ಫೊಂಸರವರು ಸಾದರಪಡಿಸಿದ್ದಾರೆ. ಹೀಗಿರುವಾಗಲೂ ರಾಷ್ಟ್ರಪತಿಗಳ ಒಪ್ಪಿಗೆಯ ಹೊರತು ಈ ಪ್ರಸ್ತಾವನೆಯ ಮೇಲೆ ರಾಜ್ಯಸಭೆಯಲ್ಲಿ ಚರ್ಚೆಯಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾ ಉಪಸಭಾಪತಿ ಹರಿವಂಶ ರವರು ಈ ಪ್ರಸ್ತಾವನೆಯನ್ನು ಕಾಯ್ದಿರಿಸಿದ್ದಾರೆ. ಭಾಜಪದ ರಾಜ್ಯಸಭೆಯ ಸಂಸದರಾದ ಸುಬ್ರಹ್ಮಣ್ಯ ಸ್ವಾಮಿಯವರು ಸಂವಿಧಾನದಿಂದ ಈ ಎರಡು ಶಬ್ದಗಳನ್ನು ತೆಗೆದುಹಾಕುವ ಬಗ್ಗೆ ಅರ್ಜಿಯನ್ನು ದಾಖಲಿಸಿದ್ದಾರೆ. ಮೇಲಿನ ಎರಡು ಶಬ್ದಗಳನ್ನು ಪ್ರಸ್ತಾವನೆಯಲ್ಲಿ ಜೋಡಿಸಲಾಗಿದ್ದು ಅದರಲ್ಲಿ ಅವುಗಳ ವ್ಯಾಪ್ತಿಯನ್ನು ನೀಡಿಲ್ಲ.

ಭಾರತದ ಹೆಸರು ‘ಆಧ್ಯಾತ್ಮಿಕ ಪ್ರಜಾತಾಂತ್ರಿಕ ಭಾರತ’ ಎಂದು ಇರಬೇಕಾಗಿತ್ತು – ಜಮ್ಮು-ಕಾಶ್ಮೀರ ಮತ್ತು ಲಡಾಖ ಉಚ್ಚನ್ಯಾಯಾಲಯದ ನ್ಯಾಯಾಧೀಶ ಪಂಕಜ ಮಿತ್ತಲ

ಸಂಸದ ಡಾ. ಸುಬ್ರಹ್ಮಣ್ಯಮ ಸ್ವಾಮಿಯವರು ತಮ್ಮ ಅರ್ಜಿಯಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಮಿತ್ತಲರವರ ಹೇಳಿಕೆಯನ್ನು ಸೇರಿಸಿದ್ದಾರೆ. ನ್ಯಾಯಾಧೀಶರಾದ ಮಿತ್ತಲ ರವರು ಒಂದು ಕಾರ್ಯಕ್ರಮದಲ್ಲಿ ‘ಭಾರತವು ಯುಗಯುಗಗಳಿಂದ ಅಧ್ಯಾತ್ಮಿಕ ದೇಶವಾಗಿದೆ; ಆದರೆ ಸಂವಿಧಾನದಲ್ಲಿ ಜಾತ್ಯಾತೀತ ಎಂಬ ಶಬ್ದವನ್ನು ಹಾಕಿ ಭಾರತದ ವಿರಾಟ ಆಧ್ಯಾತ್ಮಿಕ ಚಿತ್ರಣವನ್ನು ಸಂಕುಚಿತಗೊಳಿಸಲಾಗಿದೆ ನಮ್ಮ ದೇಶದ ಸಂವಿಧಾನಾತ್ಮಕ ಹೆಸರು ‘ಆಧ್ಯಾತ್ಮಿಕ ಪ್ರಜಾತಾಂತ್ರಿಕ ಭಾರತ’ ಎಂದು ಇರಬೇಕಾಗಿತ್ತು’ಎಂದು ಹೇಳಿದ್ದರು.