ದೇವಸ್ಥಾನ ಪರಿಸರದಲ್ಲಿ ಪೊಲ್ಟ್ರಿ ಫಾರಂನಲ್ಲಿ ತಯಾರಾದ ಪ್ರಸಾದಗಳ ಮಾರಾಟ !

  • ಪ್ರಸಿದ್ಧ ಶಕ್ತಿ ಪೀಠ ಮಾತೆ ಬಮಲೇಶ್ವರಿ ದೇವಿಯ ದೇವಸ್ಥಾನದ ಪರಿಸರದಲ್ಲಿನ ಘಟನೆ !

  • ಬೃಹತ್ಪ್ರಮಾಣದಲ್ಲಿ ಪ್ರಸಾದದ ಪ್ಯಾಕೆಟ್ ವಶ

  • ಪೋಲ್ಟ್ರಿ ಫಾರಂ ಮಾಲಿಕ ಮಝಹರ್ ಖಾನ್

ರಾಜನಾಂದಗಾವ (ಛತ್ತಿಸ್ಗಢ) – ಆಹಾರ ಇಲಾಖೆಯ ತಂಡವು ಸಪ್ಟೆಂಬರ್ ೨೬ ರಂದು ಇಲ್ಲಿಯ ರಾಕಾ ಗ್ರಾಮದ ‘ಎವಾನ್ ಟ್ರೇಡರ್ಸ್’ನ ಪೋಲ್ಟ್ರಿ ಫಾರಂ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಬೃಹತ್ಪ್ರಮಾಣದಲ್ಲಿ ಪ್ರಸಾದದ ಪ್ಯಾಕೆಟ್ ಗಳು ದೊರೆತವು. ಡೊಂಗರಗಡ ಇಲ್ಲಿಯ ಪ್ರಸಿದ್ಧ ಶಕ್ತಿ ಪೀಠ ಮಾತೆ ಬಮಲೇಶ್ವರಿ ದೇವಿಯ ದೇವಸ್ಥಾನದ ಪರಿಸರದಲ್ಲಿರುವ ಅಂಗಡಿಗಳಲ್ಲಿ ಈ ಪ್ರಸಾದ ಪೂರೈಕೆ ಆಗುತ್ತದೆ. ಪೋಲ್ಟ್ರಿ ಫಾರಂ (ಕುಕ್ಕುಟ ಪಾಲನ ಕೇಂದ್ರ) ಚಾಲಕರಿಂದ ಏಲಕ್ಕಿ ಬೀಜದ ಪ್ರಸಾದ ತಯಾರಿಸಲಾಗುತ್ತದೆ. ಪೋಲ್ಟ್ರಿ ಫಾರಂ ಸಹಿತ ಸುಮಾರು ೫ ಸಾವಿರ ಸ್ಕ್ವೇರ್ ಫುಟ್ ಪರಿಸರದಲ್ಲಿ ಪ್ರಸಾದ ತಯಾರಿಕೆಯ ಕಾರ್ಯ ನಡೆಯುತ್ತಿರುವುದು ಕಂಡು ಬಂದಿದೆ. ಇಲ್ಲಿ ‘ಶ್ರೀ ಭೋಗ ಪ್ರಸಾದ’ ಈ ಹೆಸರಿನಿಂದ ಪ್ರಸಾದ ತಯಾರಿಸಲಾಗುತ್ತಿತ್ತು. ಈ ಪೋಲ್ಟರಿ ಫಾರಂನ ಮಾಲಿಕ ಮಝಹಾರ್ ಖಾನ್ ಎಂದು ಹೇಳಲಾಗುತ್ತಿದೆ.

೧. ಯಾವ ಪ್ಯಾಕೆಟ್ ನಲ್ಲಿ ಏಲಕ್ಕಿ ಬೀಜಗಳು ಮಾರಲಾಗುತ್ತಿದ್ದವು, ಆ ಪ್ಯಾಕೇಟಿನ ಮೇಲೆ ‘ಸ್ವಚ್ಛ ಮತ್ತು ಶುದ್ಧ ವಾತಾವರಣದಲ್ಲಿ ಉತ್ಪಾದನೆ ಮಾಡಿದೆ’, ಎಂದು ಬರೆಯಲಾಗಿತ್ತು. ಎಲ್ಲಿ ಪ್ರಸಾದ ತಯಾರವಾಗುತ್ತಿತ್ತೋ, ಅಲ್ಲೇ ಕುಕ್ಕುಟ ಪಾಲನ ಕೂಡ ಇತ್ತು. ಆಹಾರ ಇಲಾಖೆಯ ತಂಡವು ಏಲಕ್ಕಿಯ ಬೀಜಗಳ ನಮೂನೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ಏಲಕ್ಕಿ ಬೀಜಗಳ ಉತ್ಪಾದನೆಗೆ ಸಂಬಂಧಿತ ಯಾವುದೇ ಅನುಮತಿ ಇರುವ ದಾಖಲೆಗಳು ದೊರೆತಿಲ್ಲ.

೨. ಡೊಂಗರಗಡ ಜಿಲ್ಲೆ ಆಹಾರ ಸುರಕ್ಷಾ ಅಧಿಕಾರಿ ಡೊಮಿನ ಧೂರ್ವೆ ಇವರು ಪೋಲ್ಟ್ರಿ ಫಾರಂನಲ್ಲಿ ಏಲಕ್ಕಿ ಬೀಜ ತಯಾರಿಸುತ್ತಿರುವುದು ಖಚಿತಪಡಿಸಿದ್ದಾರೆ ಹಾಗೂ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಪ್ರಸಾದದ ಪ್ಯಾಕೆಟ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅವರು, ಕಾರ್ಯನಿರತ ಕಾರ್ಖಾನೆಯ ನೋಂದಣಿ ಕೂಡ ಆಗಿಲ್ಲ ಹಾಗೂ ‘ಪ್ಯಾಕೇಜಿಂಗ್’ ನಲ್ಲಿ ದೊಡ್ಡ ಪ್ರಮಾಣದಲ್ಲಿ ಅನಿಯಮಿತತೆ ಕಂಡು ಬಂದಿದೆ ಎಂದು ಹೇಳಿದರು. ಅದರಲ್ಲಿ ಮಾನದಂಡ, ದಿನಾಂಕ, ಬ್ಯಾಚ್ ಕ್ರಮಾಂಕ ನಮೂದಿಸಲಾಗಿರಲಿಲ್ಲ.

೩. ಆಂಧ್ರಪ್ರದೇಶದಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕಲಬೆರಿಕೆ ಪ್ರಸಾದ ಕಂಡು ಬಂದ ನಂತರ ಛತ್ತೀಸ್ಗಡ್ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ರಾಜ್ಯ ಸರಕಾರವು ಒಂದು ಮಾರ್ಗ ಸೂಚಿಯನ್ನು ಪ್ರಸಾರಗೊಳಿಸುತ್ತಾ ಪ್ರಸಾದ ತಯಾರಿಸುವಾಗ ಕೇವಲ ಶುದ್ಧ ತುಪ್ಪ ಬಳಸುವುದು ಅನಿವಾರ್ಯಗೊಳಿಸಿದೆ.

ಯಾವುದೇ ಸಂಸ್ಥೆಗೆ ಪ್ರಸಾದ ತಯಾರಿಕೆಯ ಕಾಂಟ್ರಾಕ್ಟ್ ನೀಡಿಲ್ಲ ! – ದೇವಸ್ಥಾನದ ಟ್ರಸ್ಟಿ

ಬಮಲೇಶ್ವರಿ ದೇವಸ್ಥಾನ ಟ್ರಸ್ಟಿ ಸಮಿತಿ ಡೋಂಗರಗಡದ ಅಧ್ಯಕ್ಷ ಮನೋಜ ಅಗ್ರವಾಲ್ ಇವರು ಮಾತನಾಡಿ, ಮಾತೇ ಬಮಲೇಶ್ವರಿ ದೇವಸ್ಥಾನದ ಪ್ರಸಾದಕ್ಕಾಗಿ ಯಾವುದೇ ಟೆಂಡರ್ ನೀಡಿಲ್ಲ. ಕೇವಲ ಒಂದೇ ಸಂಸ್ಥೆಯಿಂದ ಅಥವಾ ಕಾರ್ಖಾನೆಯಿಂದ ತಯಾರಿಸಿರುವ ಪ್ರಸಾದ ಬರುವುದು ಮತ್ತು ಅದೇ ಪ್ರಸಾದ ದೊರೆಯುವುದು, ಹೇಗೆ ಇಲ್ಲಿ ನಿಯಮವಿಲ್ಲ. ಇಲ್ಲಿ ವರ್ಷ ಇಡೀ ಭಕ್ತರು ಅರ್ಪಿಸಿರುವ ತೆಂಗಿನ ಕಾಯಿ ಪ್ರಸಾದ ಎಂದು ಹಂಚುಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ದೇವಸ್ಥಾನ ಪರಿಸರದಲ್ಲಿ ತೆಂಗಿನಕಾಯಿ ಒಡೆಯಲು ನಿಷೇಧ ಇರುವುದರಿಂದ ಪ್ರಸಾದ ಎಂದು ಸಕ್ಕರೆಯನ್ನು ಹಂಚಲಾಗುತ್ತದೆ.

ಸಂಪಾದಕೀಯ ನಿಲುವು

ಹಿಂದುಗಳ ದೇವಸ್ಥಾನದಲ್ಲಿ ಪ್ರಸಾದ ಎಂದು ಹಂಚುವ ಪದಾರ್ಥದ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಪರಿಶೀಲಿಸುವುದಕ್ಕಾಗಿ ಈಗ ಸರಕಾರವು ಸ್ವತಂತ್ರ ವ್ಯವಸ್ಥೆ ನಿರ್ಮಾಣ ಮಾಡುವುದು ಆವಶ್ಯಕವಾಗಿದೆ !