೪ ಮುಸಲ್ಮಾನ ಆರೋಪಿಗಳನ್ನು ಬಂಧಿಸಿ ದೌರ್ಜನ್ಯ ನಡೆಸಿದ್ದರಿಂದ ಅವರಿಗೆ ಪ್ರತಿಯೊಬ್ಬರಿಗೂ ೧ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಬೇಕು ! – ತಮಿಳುನಾಡು ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶ

ರಾ.ಸ್ವ. ಸಂಘದ ಕಾರ್ಯಾಲಯದಲ್ಲಿ ಹಸುವಿನ ತಲೆ ಎಸೆದ ಪ್ರಕರಣ

ಅನೇಕ ಪ್ರಕರಣಗಳಲ್ಲಿ ಹಿಂದೂಗಳನ್ನು ಬಂಧಿಸಿ ಅವರ ಮೇಲೆ ದೌರ್ಜನ್ಯ ಎಸಲಾಗುತ್ತದೆ ಮತ್ತು ನಂತರ ಅವರು ನ್ಯಾಯಾಲಯದಿಂದ ನಿರ್ದೋಷಿಗಳೆಂದು ಖುಲಾಸೆಗೊಳಿಸಲಾಗುತ್ತದೆ. ಇಂತಹ ಎಷ್ಟು ಜನರಿಗೆ ಮಾನವ ಹಕ್ಕುಗಳ ಆಯೋಗ ಅಥವಾ ಸಂಬಂಧಿತ ರಾಜ್ಯ ಸರಕಾರವು ನಷ್ಟ ಪರಿಹಾರ ನೀಡಿದೆಯೇ ? ಮತಾಂಧರ ಬಗ್ಗೆ ಮಾತ್ರ ಶೀಘ್ರವಾಗಿ ಇಂತಹ ನಷ್ಟ ಪರಿಹಾರ ನೀಡಲಾಗುತ್ತದೆ, ಇದು ತಾರತಮ್ಯ ಅಲ್ಲವೇ ?

ಮದುರೈ (ತಮಿಳುನಾಡು) – ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯದಲ್ಲಿ ಹಸುವಿನ ತಲೆ ಎಸೆದಿರುವ ಪ್ರಕರಣದಲ್ಲಿ ಬಂಧಿಸಲಾಗಿರುವ ೪ ಮುಸಲ್ಮಾನ ಯುವಕರಿಗೆ ತಲಾ ೧ ಲಕ್ಷ ನಷ್ಟ ಪರಿಹಾರ ನೀಡಬೇಕೆಂದು, ಎಂದು ತಮಿಳುನಾಡು ರಾಜ್ಯ ಮಾನವ ಹಕ್ಕುಗಳ ಆಯೋಗವು ಆದೇಶ ನೀಡಿದೆ. ತಲೆ ಎಸೆದಿರುವ ಘಟನೆ ೨೦೧೧ ರಲ್ಲಿ ನಡೆದಿತ್ತು. ಆರೋಪಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಕಾನೂನಿನ ಸಹಾಯ ನೀಡಲಾಗಿತ್ತು.

೧. ಆಯೋಗವು, ಮಧುರೈ ಪೊಲೀಸರು ಈ ಯುವಕರನ್ನು ಕಾನೂನುಬಾಹಿರ ವಶಕ್ಕೆ ಪಡೆದು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಯುವಕರು ನಿರಪರಾಧಿಗಳೆಂದು ಹೇಳಲು ಪ್ರಯತ್ನಿಸಿದ ನಂತರವೂ ಅವರ ಮೇಲೆ ದೌರ್ಜನ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಕ್ರಮಕೈ ಗೊಳ್ಳಬೇಕು, ಎಂದು ಸಹ ಆಯೋಗವು ಆದೇಶದಲ್ಲಿ ಹೇಳಿದೆ.

೨. ಈ ಪ್ರಕರಣದ ವಿಚಾರಣೆಗಾಗಿ ಒಂದು ಸಮಿತಿಯನ್ನು ಸ್ಥಾಪಿಸಲಾಗಿತ್ತು. ಆ ಸಮಿತಿಯ ವರದಿಯಲ್ಲಿ ಆರೋಪಿಯ ಮೇಲೆ ದೌರ್ಜನ್ಯ ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಆಯೋಗವು ಆದೇಶ ನೀಡುವಾಗ ಈ ವರದಿಯ ಸಂದರ್ಭವನ್ನು ನೀಡಿದೆ.