ಯಾರು ಸ್ವಭಾವದಿಂದ ಕೆಟ್ಟವರಾಗಿದ್ದಾರೆ. ಅವರ ವಿರುದ್ಧ ಶಸ್ತ್ರ ಎತ್ತುವುದು ಅಪರಾಧವಲ್ಲ ! – ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪುರಿ ಪೀಠದ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಹೇಳಿಕೆ

ಅಂಬಿಕಾಪುರ (ಛತ್ತೀಸಗಡ) – ನಮ್ರತೆಯ ಹೆಸರಿನಲ್ಲಿ ಅನ್ಯಾಯ ಸಹಿಸುವುದು ಎಂದರೆ ಸಹಿಷ್ಣುತೆ ಅಲ್ಲ. ಯಾರು ಸ್ವಭಾವದಿಂದ ಕೆಟ್ಟವರಾಗಿದ್ದಾರೆ. ಅವರ ವಿರುದ್ಧ ಶಸ್ತ್ರ ಎತ್ತುವುದು ಅಪರಾಧವಲ್ಲ. ದೇಶದ ಸೈನ್ಯ ಮತ್ತು ಪೊಲೀಸ್ ಜನರ ರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಹಿಡಿಯುತ್ತಾರೆ. ಸನಾತನ ಧರ್ಮದ ತತ್ವ ಕೂಡ ಇದೆ ಹೇಳುತ್ತದೆ. ನಾವು ಅಹಿಂಸೆಯ ಪರವಾಗಿಯೇ ಇದ್ದೇವೆ; ಆದರೆ ಹಿಂಸೆ ಮಾಡುವವರ ವಿರುದ್ಧ ಶಸ್ತ್ರ ಉಪಯೋಗಿಸುದು ತಪ್ಪೇಂದು ತಿಳಿಯಬೇಡಿ, ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಹೇಳಿಕೆ ನೀಡಿದರು.

ಶಂಕರಾಚಾರ್ಯರು ಮಂಡಿಸಿರುವ ಇತರ ಅಂಶಗಳು !

1. ಪ್ರಧಾನಿ ಗೋಹತ್ಯೆ ನಿಲ್ಲಿಸುವುದು ಅವಶ್ಯಕ !

ಶಂಕರಾಚಾರ್ಯರು ಮಾತು ಮುಂದುವರೆಸಿ, ಪ್ರಧಾನಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕಾಂಗ್ರೆಸ್ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ‘ಪ್ರಧಾನಿ ಗೋಹತ್ಯೆ ನಿಲ್ಲಿಸಬೇಕು’, ಎಂದು ಹೇಳಿದ್ದರು. ಈಗ ಅವರೇ ಪ್ರಧಾನಿಯಾಗಿದ್ದಾರೆ. ಈಗ ಅವರು, ಗೋರಕ್ಷಕರು ಗೂಂಡಾಗಳಾಗಿದ್ದಾರೆ ಎಂದು ಹೇಳುತ್ತಾರೆ. ಯಾರು ಪ್ರಧಾನಿಯಾಗುತ್ತಾರೋ ಅವರು ಕ್ರೈಸ್ತ ಮತ್ತು ಮುಸ್ಲಿಂ ಸಮಾಜದ ಗುಲಾಮರಾಗುತ್ತಾರೆ ಎಂದು ಹೇಳಿದರು.

2. ಮತಾಂತರಕ್ಕೆ ಸರಕಾರವೇ ಹೊಣೆ !

ಮುಸಲ್ಮಾನರನ್ನು ಕ್ರೈಸ್ತನನ್ನಾಗಿ ಮತಾಂತರಗೊಳಿಸುವ ೪ ಕ್ರೈಸ್ತರಿಗೆ ತಾಲಿಬಾನ ಸರಕಾರ ಗಲ್ಲು ಶಿಕ್ಷೆ ವಿಧಿಸಿತ್ತು. ಸನಾತನ ಧರ್ಮ ತತ್ವ ಜ್ಞಾನ, ವಿಜ್ಞಾನ ಮತ್ತು ವರ್ತನೆಯಿಂದ ಪರಿಪೂರ್ಣವಾಗಿದೆ. ಸೇವೆಯ ಹೆಸರಿನಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಅಪರಾಧ ಮಾಡಲಾಗುತ್ತದೆ. ಮತಾಂತರಕ್ಕೆ ಸರಕಾರವೇ ಹೊಣೆಗಾರರಾಗಿದೆ.

3. ನಾಯಕರ ವೈಚಾರಿಕ ಪತನ !

ದೇಶದಲ್ಲಿನ ನಾಯಕರಲ್ಲಿ ವೈಚಾರಿಕ ಅಧೋಗತಿ ಆಗುತ್ತಿದೆ. ದೇಶದಲ್ಲಿನ ರಾಜಕಾರಣದ ಮಟ್ಟ ಕುಸಿದಿದೆ. ದೇಶದಲ್ಲಿನ ಯಾವುದೇ ಪಕ್ಷದ ಅಧಿಕಾರವಿದ್ದರೂ, ಅದರ ತತ್ವದ ಪ್ರಕಾರ ದೇವಸ್ಥಾನಗಳು ನಡೆಸಲಾಗುತ್ತದೆ. ಜಾತ್ಯತೀತ ಸರಕಾರಕ್ಕೆ ಧಾರ್ಮಿಕ ಅಂಶಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ ಎಂದು ಹೇಳಿದರು.