ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸಿದ ಪಾಕಿಸ್ತಾನಿ ಪ್ರಧಾನಿ; ಬಳಿಕ ಚಳಿ ಬಿಡಿಸಿದ ಭಾರತ !

ಸೇನಾಯಿಂದಲೇ ನಡೆಯುತ್ತಿರುವ ದೇಶವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಧೈರ್ಯ ಮಾಡುತ್ತದೆ !

ನ್ಯೂಯಾರ್ಕ್ (ಅಮೆರಿಕ) – ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಭಾರತದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಾರೆ. ಅದಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ. ಭಾರತದ ರಾಜತಾಂತ್ರಿಕ ಅಧಿಕಾರಿ ಭಾವಿಕಾ ಮಂಗಳಾನಂದನ್ ಅವರು ಪಾಕಿಸ್ತಾನವನ್ನು ‘ಬೂಟಾಟಿಕೆಯ ದೇಶ’ ಎಂದು ಹೇಳುತ್ತಾ, ಟೀಕಿಸಿದ್ದಾರೆ. `ಯಾವ ದೇಶ ಸೇನಾಡಳಿತದಿಂದ ನಡೆಯುತ್ತಿದೆಯೋ, ಯಾವ ದೇಶವು ಜಾಗತಿಕವಾಗಿ ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಅಂತರರಾಷ್ಟ್ರೀಯ ಅಪರಾಧಗಳಿಗೆ ಹೆಸರುವಾಸಿಯಾಗಿದೆಯೋ; ಆ ದೇಶವು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶದ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದೆ’ ಎನ್ನುವ ಶಬ್ದಗಳಲ್ಲಿ ಪಾಕಿಸ್ತಾನದ ಬೆವರು ಇಳಿಸಿದ್ದಾರೆ.
ಭಾವಿಕಾ ಮಂಗಳನಂದನ ಇವರು ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಾ ಮಂಡಿಸಿದ ಅಂಶಗಳು !

1. ಪಾಕಿಸ್ತಾನವು ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ಭಯೋತ್ಪಾದನೆಯನ್ನು ಬಳಸುತ್ತದೆ, ಎಂಬುದು ಜಗತ್ತಿಗೆ ತಿಳಿದಿದೆ. ಅವರು ನಮ್ಮ ಸಂಸತ್ತು, ಆರ್ಥಿಕ ರಾಜಧಾನಿ ಮುಂಬಯಿ ಮೇಲೆ, ಮಾರುಕಟ್ಟೆಗಳು ಮತ್ತು ತೀರ್ಥಕ್ಷೇತ್ರಗಳ ಮಾರ್ಗಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಪಟ್ಟಿ ಬಹಳ ಉದ್ದವಾಗಿದೆ. ಇಂತಹ ದೇಶವು ಹಿಂಸಾಚಾರದ ಬಗ್ಗೆ ಮಾತನಾಡುತ್ತದೆ. ಇದಕ್ಕಿಂತ ದೊಡ್ಡ ಡಾಂಭಿಕತೆಯ ಬೇರೆ ಉದಾಹರಣೆ ಇರಲು ಸಾಧ್ಯವಿಲ್ಲ.

2. ನೆರೆಯ ದೇಶವು, ಭಾರತದ ವಿರುದ್ಧ ಗಡಿಯಾಚೆಯಿಂದ ನಡೆಸುವ ಭಯೋತ್ಪಾದನೆಯು ಅನಿವಾರ್ಯ ಪರಿಣಾಮಗಳನ್ನು ಆಹ್ವಾನಿಸುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

3. ಒಸಾಮಾ ಬಿನ್ ಲಾಡೆನ್‌ಗೆ ದೀರ್ಘಕಾಲ ಆಶ್ರಯ ನೀಡಿದ್ದ ದೇಶದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇಂತಹ ಒಂದು ದೇಶದ, ಪ್ರಪಂಚದಾದ್ಯಂತ ಅನೇಕ ಭಯೋತ್ಪಾದಕ ಘಟನೆಗಳ ಅಭಯಹಸ್ತ ಇದೆ. ಅದರ ನೀತಿಗಳಿಂದಾಗಿ, ಅನೇಕ ಭಯೋತ್ಪಾದಕ ಗುಂಪುಗಳು ಮತ್ತು ಸಮಾಜದಲ್ಲಿನ ಅತ್ಯಂತ ಕೆಟ್ಟ ಗುಂಪೊಂದು ಪಾಕಿಸ್ತಾನದಲ್ಲಿ ತನ್ನ ಸ್ವಂತ ನೆಲೆಯನ್ನು ಸ್ಥಾಪಿಸಲು ಆಕರ್ಷಿತಗೊಂಡಿದೆ. ಇಂತಹ ದೇಶವು ಎಲ್ಲಿ ಬೇಕಾದರೂ ಹಿಂಸೆಯ ಬಗ್ಗೆ ಮಾತನಾಡುವುದು ಎಲ್ಲಕ್ಕಿಂತ ದೊಡ್ಡ ಬೂಟಾಟಿಕೆಯಾಗಿದೆ.

4. 1971ರಲ್ಲಿ ಬಾಂಗ್ಲಾದೇಶದಲ್ಲಿ ಹತ್ಯಾಕಾಂಡ ನಡೆಸಿರುವವರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿದ ದೇಶವು ಇಂದು ಜಗತ್ತಿನಲ್ಲಿ ಅಸಹಿಷ್ಣುತೆ ಮತ್ತು ಭಯದ ವಿಷಯದಲ್ಲಿ ಮಾತನಾಡುತ್ತದೆ ಇದು ಹಾಸ್ಯಾಸ್ಪದವಾಗಿದೆ.

5. ನಿಜ ಹೇಳುವುದಾದರೆ, ಪಾಕಿಸ್ತಾನಕ್ಕೆ ಭಾರತದ ಭೂ ಪ್ರದೇಶವನ್ನು ಕಬಳಿಸಬೇಕಾಗಿದೆ. ಆದ್ದರಿಂದಲೇ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಅದು ಭಯೋತ್ಪಾದನೆಯನ್ನು ಬಳಸಿಕೊಂಡು ಚುನಾವಣೆಗಳನ್ನು ಅಡ್ಡಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

6. ಚುನಾವಣೆಯಲ್ಲಿ ವಂಚನೆಯ ಇತಿಹಾಸ ಹೊಂದಿರುವ ದೇಶವು ಪ್ರಜಾಸತ್ತಾತ್ಮಕ ರಾಜಕೀಯ ಚುನಾವಣೆಗಳ ಬಗ್ಗೆ ಮಾತನಾಡುತ್ತಿರುವುದು ಹೆಚ್ಚು ವಿಪರ್ಯಾಸವಾಗಿದೆ ಎಂದು ಹೇಳಿದರು.

ಪ್ರಧಾನಿ ಶಹಬಾಜ್ ಷರೀಫ್ ಏನು ಹೇಳಿದ್ದರು ?

1. ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ ಮತ್ತು ‘ಇಸ್ಲಾಮೋಫೋಬಿಯಾ’ (ಮುಸ್ಲಿಂದ್ವೇಷದ ಮಧ್ಯದಲ್ಲಿಯೂ) ಹೆಚ್ಚುತ್ತಿದ್ದು, ಈ ಜಗತ್ತಿಗೆ ಒಂದು ತೊಂದರೆದಾಯಕ ವಿಷಯವಾಗಿದೆ. ಭಾರತದಲ್ಲಿ ಹಿಂದೂ ಪ್ರಾಬಲ್ಯದ ನೀತಿಗಳನ್ನು ಅನುಸರಿಸಲಾಗುತ್ತಿದ್ದು, ಇಸ್ಲಾಮೋಫೋಬಿಯಾದ ಅತ್ಯಂತ ಭಯಾನಕ ಉದಾಹರಣೆಯಾಗಿದೆ. ಭಾರತದಲ್ಲಿರುವ 20 ಕೋಟಿ ಮುಸ್ಲಿಮರನ್ನು ದಮನಿಸಲಾಗುತ್ತಿದೆ ಮತ್ತು ಇಸ್ಲಾಮಿಕ್ ಪರಂಪರೆಯನ್ನು ನಾಶಮಾಡಲು ಆಕ್ರಮಣಕಾರಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

2. ಜಮ್ಮೂ-ಕಾಶ್ಮೀರದಲ್ಲಿ ಪುನಃ ಕಲಂ 370 ಅನ್ನು ಜಾರಿಗೊಳಿಸಿ ಶಾಂತಿಯನ್ನು ಸ್ಥಾಪಿಸಬೇಕು.
ಕಾಶ್ಮೀರಿ ಜನರ ಇಚ್ಛೆಯನುಸಾರ ಮತ್ತು ವಿಶ್ವಸಂಸ್ಥೆಯ ಭದ್ರತಾ ಠರಾವಿನ ಪ್ರಕಾರ, ಭಾರತವು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯ ಬಗ್ಗೆ ಶಾಂತಿಯುತ ಚರ್ಚೆಗೆ ಮುಂದಾಗಬೇಕು.

3. ಪ್ಯಾಲೆಸ್ಟೀನಿಯನ್ನರು ಮತ್ತು ಕಾಶ್ಮೀರಿ ಜನರು ಒಂದೇ ರೀತಿಯಾಗಿದ್ದಾರೆ. ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಕಡೆಯ ನಾಗರಿಕರು ಅನೇಕ ವರ್ಷಗಳಿಂದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದ್ದರು.