ಶಾಲೆಯ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಮತಾಂಧ ಶಿಕ್ಷಕನ ಬಂಧನ

ಇಂತಹ ವಾಸನಾಂಧನಿಗೆ ‘ಶಿಕ್ಷಕ’ ಎನಿಸಿಕೊಳ್ಳುವ ಅರ್ಹತೆ ಇದೆಯೇ ? ಸರಕಾರವು ಇಂತಹವರನ್ನು ಜೀವಾವಧಿ ಕಾರಾಗೃಹಕ್ಕೆ ತಳ್ಳಬೇಕು !

ಕನ್ನೂರ್ (ಕೇರಳ) – ಇಲ್ಲಿಯ ಶಾಲೆಯ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವುದರ ಮೂಲಕ ಮಕ್ಕಳ ವಿಡಿಯೋ ಮಾಡಿದ ಪ್ರಕರಣದಲ್ಲಿ ನೌಶಾದ್ ಎಂಬ ಶಿಕ್ಷಕನನ್ನು ಬಂಧಿಸಲಾಗಿದೆ. ಅತನ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

೩೬ ವಯಸ್ಸಿನ ನೌಶಾದ್ ಇಲ್ಲಿಯ ‘ಆರ.ಸಿ. ಅಮಲಾ ಬೇಸಿಕ್ ಅಪ್ಪರ ಪ್ರೈಮರಿ ಶಾಲೆಯಲ್ಲಿ ಅರಬಿ ಕಲಿಸುತ್ತಾನೆ. ಅವನ ಸಂಚಾರವಾಣಿಯಲ್ಲಿ ಅನೇಕ ಆಕ್ಷೇಪಾರ್ಹ ದೃಶ್ಯಗಳು ಸಂಗ್ರಹವಾಗಿರುವುದು ಕಂಡುಬಂದಿದೆ. ಓರ್ವ ವಿದ್ಯಾರ್ಥಿನಿಗೆ ಶಾಲೆಯ ಶೌಚಾಲಯದಲ್ಲಿ ಒಂದು ಸಂಚಾರವಾಣಿ ಕಂಡುಬಂದಿತು. ಈ ವಿಷಯವಾಗಿ ಆಕೆ ತನ್ನ ತಾಯಿ ತಂದೆಗೆ ಮಾಹಿತಿ ನೀಡಿದಳು. ಆಕೆಯ ತಾಯಿ-ತಂದೆ ಶಾಲೆಯ ವ್ಯವಸ್ಥಾಪಕರಿಗೆ ತಿಳಿಸಿದರು. ತದನಂತರ ಮುಖ್ಯೋಪಾಧ್ಯಾಯರು ಈ ಘಟನೆಯ ಸೂಚನೆಯನ್ನು ಪೊಲೀಸರಿಗೆ ನೀಡಿದರು. ಪೊಲೀಸರ ನೌಶಾದ್‌ನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ತದನಂತರ ಅವನನ್ನು ಕಾರಾಗೃಹಕ್ಕೆ ಅಟ್ಟಿದರು.