ಕ್ರೈಸ್ತ ಚರ್ಚ್‌ಸಂಸ್ಥೆಯಿಂದ ವಿರೋಧ
ಕೊಚ್ಚಿ (ಕೇರಳ) – ಇಲ್ಲಿನ ಮುನಾಂಬಮ ಮತ್ತು ಚೆರಾಯಿ ಗ್ರಾಮಗಳಲ್ಲಿ 400 ಎಕರೆ ಭೂಮಿ ವಕ್ಫ್ ಬೋರ್ಡ್ ತನ್ನದೆಂದು ದಾವೆ ಮಾಡಿದೆ. ಪ್ರಸ್ತುತ ಇಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ.
1. 2019 ರಲ್ಲಿ, ವಕ್ಫ್ ಬೋರ್ಡ್, ಮುನಂಬಮ್, ಚೆರೈ ಮತ್ತು ಪಲ್ಲಿಕಲ್ ಪ್ರದೇಶಗಳು ತಮ್ಮ ಆಸ್ತಿಯಾಗಿದೆ ಎಂದು ದಾವೆ ಮಾಡಿದೆ. ಈ ಪ್ರದೇಶದಲ್ಲಿ 1989 ರಿಂದ ಭೂಮಿಯ ಸಕ್ರಮ ದಾಖಲೆಗಳು ಹೊಂದಿರುವ ವಿವಿಧ ಧರ್ಮಗಳ ನಿವಾಸಿಗಳು ವಾಸಿಸುತ್ತಾರೆ. ಹೀಗಿರುವಾಗ ವಕ್ಫ್ ಬೋರ್ಡ್ ಈ ಪ್ರದೇಶದ ಮೇಲೆ ತನ್ನ ಹಕ್ಕು ಇದೆಯೆಂದು ಹೇಳಿದೆ. ಈ ಕುಟುಂಬದವರು ತಮ್ಮ ಭೂಮಿಗಳನ್ನು ಕಾನೂನುಬದ್ಧವಾಗಿ ಖರೀದಿಸಿದ್ದರು; ಆದರೆ ಈಗ ಅವರಿಗೆ ಬಲವಂತವಾಗಿ ಭೂಮಿಯನ್ನು ಖಾಲಿ ಮಾಡುವಂತೆ ಆದೇಶಿಸಲಾಗುತ್ತದೆ.
2. ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಮತ್ತು ಸಾಯರೊ-ಮಲಬಾರ್ ಪಬ್ಲಿಕ್ ಅಫೆರ್ಸ್ ಕಮಿಶನ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರದ ಮುಂದೆ ಮಂಡಿಸಿದೆ. ಭವಿಷ್ಯದಲ್ಲಿ ಇಂತಹ ಕಾನೂನುಬಾಹಿರ ದಾವೆಗಳು ನಡೆಯದಂತೆ ಎರಡೂ ಸಂಘಟನೆಗಳು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವಂತೆ ಸರಕಾರವನ್ನು ಒತ್ತಾಯಿಸಿವೆ. ಈ ಸಂಸ್ಥೆಯ ಮುಖ್ಯಸ್ಥ ಕಾರ್ಡಿನಲ್ (ಹಿರಿಯ ಪಾದ್ರಿ) ಬೆಸಿಲಿಯೊಸ್ ಕ್ಲೆಮಿಸ್ ಮತ್ತು ಮುಖ್ಯ ಬಿಷಪ್ (ಜಿಲ್ಲಾ ಮಟ್ಟದ ಪಾದ್ರಿ) ಮಾರ್ ಆಂಡ್ರ್ಯೂಸ್ ಥಾಝಾತ ಅವರು ತಮ್ಮ ಪತ್ರಗಳಲ್ಲಿ, ಯಾವುದೇ ನಾಗರಿಕರ ಆಸ್ತಿ ಹಕ್ಕು ಮತ್ತು ಘನತೆಗೆ ಧಕ್ಕೆ ತರಬಾರದು ಎಂದು ತಿಳಿಸಿದ್ದಾರೆ. ಕಾನೂನನ್ನು ಕುಲಂಕುಶವಾಗಿ ಮತ್ತು ನ್ಯಾಯಯುತವಾಗಿ ಜಾರಿಗೊಳಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇದರ ಹಿಂದೆ ಅತಿರೇಕಿ ಗುಂಪಿನ ಕೈವಾಡದ ಸಾಧ್ಯತೆ ! – ಭಾಜಪ
ಭಾಜಪ ಈ ವಿಷಯದ ಬಗ್ಗೆ, ಈ ಪ್ರಕರಣ ಕೇವಲ ಭೂಮಿಯ ಹಕ್ಕುಗಳ ಬಗ್ಗೆ ಮಾತ್ರವಲ್ಲ, ಬದಲಾಗಿ ದೊಡ್ಡ ಸಂಚಿನ ಒಂದು ಭಾಗವಾಗಿದೆ ಎಂದು ಹೇಳಿದೆ, ಇದರಲ್ಲಿ ‘ಅತಿರೇಕಿ’ ಗುಂಪಿನ ಕೈವಾಡವಿರಬಹುದು. ವಕ್ಫ್ ಬೋರ್ಡ್ ಮಾಡಿರುವ ದಾವೆಯ ತನಿಖೆ ನಡೆಸಬೇಕು. ಇದರಿಂದ ಯಾವ ಅತಿರೇಕಿ ಗುಂಪುಗಳು ಸಹಭಾಗಿಯಾಗಿವೆಯೆಂದು ಎಂಬುದನ್ನು ತಿಳಿಯಬಹುದು. ಈ ಅಂಶವನ್ನು ಕೇವಲ ಕ್ರೈಸ್ತ ಸಮುದಾಯದವರು ಮಾತ್ರವಲ್ಲದೆ ಇತರ ಧರ್ಮದವರಿಗೂ ಪೆಟ್ಟು ಬೀಳುತ್ತದೆ. ವಕ್ಫ್ ಕಾಯಿದೆಗೆ ಸೂಕ್ತ ತಿದ್ದುಪಡಿ ತರದಿದ್ದರೆ ಭವಿಷ್ಯದಲ್ಲಿ ಇಂತಹ ಹಲವು ಪ್ರಕರಣಗಳು ಎದುರಾಗಬಹುದು ಎಂದು ಹೇಳಿದೆ.
ಸಂಪಾದಕೀಯ ನಿಲುವುಕ್ರೈಸ್ತರ ಮತಗಳಿಗಾದರೂ ಮುಸ್ಲಿಂ ಪ್ರೇಮಿ ರಾಜಕೀಯ ಪಕ್ಷಗಳು ವಕ್ಫ್ ಕಾಯ್ದೆಯನ್ನು ವಿರೋಧಿಸುತ್ತವೆಯೇ ? ಚರ್ಚ್‌ಸಂಸ್ಥೆ ವಕ್ಫ್ ಕಾನೂನು ರದ್ದುಗೊಳಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವರೇ ? |