ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಸ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದ ಕಾಂಗಡಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೆಲವು ಹಿಂದೂ ದ್ವೇಷಿಗಳು ಇಲ್ಲಿನ ದೇವಸ್ಥಾನದಲ್ಲಿನ ಶಿವಲಿಂಗವನ್ನು ಧ್ವಂಸ ಮಾಡಿ ಚರಂಡಿಗೆ ಎಸೆದರು. ಈ ಘಟನೆ ಬೆಳಕಿಗೆ ಬಂದ ನಂತರ, ಸ್ಥಳೀಯರು ಕೋಪಗೊಂಡರು ಮತ್ತು ಅವರು ಈ ಘಟನೆಯನ್ನು ನಿಷೇಧಿಸಿದರು. ಹಿಂದೂ ಸಂಘಟನೆಯ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿದರು. ದೇವಸ್ಥಾನಕ್ಕೆ ಹಾನಿ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಹಿಂದೂ ಸಂಘಟನೆಗಳು ಪೊಲೀಸರು ಮತ್ತು ಆಡಳಿತಕ್ಕೆ ಆಗ್ರಹಿಸಿವೆ.
ಪೊಲೀಸರು ಘಟನಾಸ್ಥಳಕ್ಕೆ ತಲುಪಿ ಧ್ವಂಸಗೊಳಿಸಿದ ಶಿವಲಿಂಗವನ್ನು ತೆಗೆದುಕೊಂಡರು. ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಹಿಂದೂ ಸಂಘಟನೆಗಳೊಂದಿಗೆ ಅಲ್ಲಿನ ವ್ಯಾಪಾರಿ ವರ್ಗವೂ ಈ ಘಟನೆಯನ್ನು ನಿಷೇಧಿಸಿದೆ. ಈ ಘಟನೆಯನ್ನು ನಿಷೇಧಿಸಿ ನಗರೊಟಾ ಮಾರುಕಟ್ಟೆಯನ್ನು ಮುಚ್ಚಲಾಯಿತು.
ಸಂಪಾದಕೀಯ ನಿಲುವುಹಿಮಾಚಲ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ಹೇಗೆ ಸಂಭವಿಸುತ್ತದೆ? ಎಂದು ಪ್ರಶ್ನೆ ಉದ್ಭವಿಸುತ್ತದೆ ! |