ಕುನ್ನೂರ್ (ತಮಿಳುನಾಡು) ಇಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ‘ಸಿ.ಡಿ.ಎಸ್.’ ಜನರಲ್ ಬಿಪಿನ್ ರಾವತ್ ಸೇರಿದಂತೆ ೧೩ ಜನರ ಮೃತ್ಯು

(‘ಸಿ.ಡಿ.ಎಸ್.’ ಎಂದರೆ ಮೂರೂ ಸೇನೆಗಳ ಮುಖ್ಯಸ್ಥ)

  • ಸಂಪತ್ಕಾಲದಲ್ಲಿ ಸೈನ್ಯದಳದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಈ ರೀತಿ ಪತನಕ್ಕೀಡಾದರೆ ಯುದ್ಧದ ಸಮಯದಲ್ಲಿ ಭಾರತವು ಶತ್ರುಗಳೊಂದಿಗೆ ಹೇಗೆ ಹೋರಾಡಬಹುದು ?
  • ಇಂತಹ ಅಪಘಾತದಲ್ಲಿ ಹಿರಿಯ ಸೇನಾಧಿಕಾರಿ ಹಾಗೂ ಪೈಲಟ್ ಸಾವನ್ನಪ್ಪಿರುವುದು ಸೇನೆಗಾದ ಬಹುದೊಡ್ಡ ನಷ್ಟ. ಇದನ್ನು ಗಂಭೀರವಾಗಿ ಪರಿಗಣಿಸದ ಇಂದಿನ ವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ !

ಕುನ್ನೂರ್ (ತಮಿಳುನಾಡು) – ಭಾರತದ ಮೂರೂ ಸೇನಾ ದಳದ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಇವರನ್ನು ಕರೆದೊಯ್ಯುತ್ತಿದ್ದ ಸೇನೆಯ ‘ಎಂ.ಐ. ೧೭ ವಿ ೫’ ಈ ಅತ್ಯಾಧುನಿಕ ಹೆಲಿಕಾಪ್ಟರ್ ಇಲ್ಲಿಯ ನೀಲಗಿರಿ ಬೆಟ್ಟದಲ್ಲಿ ಪತನಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ರಾವತ್ ಸೇರಿದಂತೆ ೧೩ ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ರಾವತ್ ಅವರ ಪತ್ನಿಯೂ ಸೇರಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ನಂತರ ಈ ಘಟನಾಸ್ಥಳದಿಂದ ೯ ಕಿಲೋಮೀಟರ್ ದೂರದಲ್ಲಿರುವ ವೆಲ್ಲಿಂಗ್ಟನ್ ಸೇನಾ ನೆಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾಗ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಪಿನ್ ರಾವತ್ ಇವರು ವೆಲ್ಲಿಂಗ್ಟನ್‌ನಲ್ಲಿರುವ ‘ಡಿಫೆನ್ಸ್ ಸ್ಟಾಫ್ ಕಾಲೇಜಿ’ಗೆ ಹೋಗುತ್ತಿದ್ದರು. ಬೆಂಕಿಯ ಕೆನ್ನಾಲಿಗೆಗೆ ಮೃತರ ದೇಹಗಳು ಶೇ.೮೦ ರಷ್ಟು ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯುವುದು ಕಷ್ಟಕರವಾಗಿದೆ. ಆದ್ದರಿಂದ ಅವರ ‘ಡಿ.ಎನ್.ಎ.’ ಪರೀಕ್ಷೆ ಮಾಡಿ ಗುರುತಿಸಲಿದ್ದಾರೆ.

(ಸೌಜನ್ಯ : News 18)

 

ಜನರಲ್ ಬಿಪಿನ್ ರಾವತ್ ಇವರು ದೇಶದ ಮೊದಲ ‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ ಆಗಿದ್ದರು. ಅವರು ೧ ಜನವರಿ ೨೦೨೦ ರಂದು ಈ ಪದವಿಯನ್ನು ಸ್ವೀಕರಿಸಿದ್ದರು. ಜನರಲ್ ರಾವತ್ ಇವರು ೩೧ ಡಿಸೆಂಬರ್ ೨೦೧೬ ರಿಂದ ೩೧ ಡಿಸೆಂಬರ್ ೨೦೧೯ ಈ ಕಾಲಾವಧಿಯಲ್ಲಿ ಸೈನ್ಯದಳದ ಮುಖ್ಯಸ್ಥರ ಪದವಿಯನ್ನು ಅಲಂಕರಿಸಿದ್ದರು. ಅವರ ಸೈನ್ಯದಳದ ಪದವಿಗೆ ಏರುತ್ತಿದ್ದಂತೆ ಪಾಕಿಸ್ತಾನದಲ್ಲಿ ‘ಸರ್ಜಿಕಲ್ ಸ್ಟ್ರೈಕ್’ ಮಾಡಲಾಗಿತ್ತು.