ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಡಾ.ಎಸ್.ಜೈಶಂಕರ್
ನ್ಯೂಯಾರ್ಕ್ (ಅಮೇರಿಕಾ) – ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದೇ ಒಂದು ಸಮಸ್ಯೆ ಬಾಕಿ ಉಳಿದಿದೆ. ಪಾಕಿಸ್ತಾನವು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಅದು ತೆರವುಗೊಳಿಸುವಂತೆ ಮಾಡಬೇಕಾಗಿದೆ. ಅದು ಭಾರತದ ಭೂಭಾಗವಾಗಿದೆ. ಹಾಗೆಯೇ ಗಡಿಯಾಚೆಗಿನ ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಖಾಯಂ ಆಗಿ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದರು.
ಪಾಕಿಸ್ತಾನಕ್ಕೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ !
ನಿನ್ನೆ ನಾವು ಇದೇ ವೇದಿಕೆಯಿಂದ ಕೆಲವು ತಪ್ಪು ವಿಷಯಗಳನ್ನು ಕೇಳಿದೆವು. ಆದ್ದರಿಂದ ನನಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಗಡಿಯಾಚೆಗಿನ ಪಾಕಿಸ್ತಾನದ ಭಯೋತ್ಪಾದನೆಯ ನೀತಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಅದಕ್ಕೆ ತಕ್ಕ ಶಿಕ್ಷೆ ಸಿಗುವುದು. ಆ ಶಿಕ್ಷೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪಾಕಿಸ್ತಾನದ ಕೃತ್ಯಗಳ ಪರಿಣಾಮವನ್ನು ಅದು ಅನುಭವಿಸಲೇ ಬೇಕಾಗುವುದು ಎಂದು ಜೈಶಂಕರ್ ಎಚ್ಚರಿಸಿದರು.
ಪಾಕಿಸ್ತಾನ ತನ್ನ ಕರ್ಮದ ಫಲವನ್ನು ಅನುಭವಿಸುತ್ತಿದೆ !
ಎಸ್. ಜೈಶಂಕರ್ ಅವರು ತಮ್ಮ ಮಾತನ್ನು ಮುಂದುವರಿಸಿ, ಗಡಿಯಾಚೆಗೆ ಪಾಕಿಸ್ತಾನವು ಭಯೋತ್ಪಾದಕ ನೀತಿಗಳನ್ನು ಅನುಸರಿಸುತ್ತಿದೆ; ಆದರೆ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ. ಅದರ ಪ್ರತಿಯೊಂದು ಕೃತಿಯ ಪರಿಣಾಮವನ್ನು ಅನುಭವಿಸಬೇಕಾಗುವುದು. ಇಂದಿಗೂ ಸಹ ಪಾಕ್ ತನ್ನ ಕರ್ಮದ ಫಲವನ್ನು ಅನುಭವಿಸುತ್ತಿದೆ. ಅದರ `ಕರ್ಮ’ ವು ಅದರ ಸಮಾಜವನ್ನೇ ನುಂಗುತ್ತಿದೆ.
ತನ್ನ ಸ್ವಂತ ತಪ್ಪುಗಳಿಂದಾಗಿ ಪಾಕಿಸ್ತಾನ ಹಿಂದೆ ಉಳಿದಿದೆ
ಡಾ. ಜೈಶಂಕರ್ ಮಾತನಾಡಿ, ಕೆಲವು ದೇಶಗಳು ತಮ್ಮ ನಿಯಂತ್ರಣಕ್ಕೆ ಮೀರಿದ ಶಕ್ತಿಗಳು ಅಥವಾ ಪರಿಸ್ಥಿತಿಗಳಿಂದ ಹಿಂದೆ ಉಳಿದಿವೆ. ಆದರೆ ಕೆಲವು ದೇಶಗಳು ತಮ್ಮ ಸ್ವಂತ ತಪ್ಪುಗಳಿಂದಾಗಿ ಹಿಂದೆ ಉಳಿದಿವೆ. ಉದ್ದೇಶಪೂರ್ವಕವಾಗಿ ತಮ್ಮ ದೇಶಕ್ಕೆ ಹಾನಿಕರವಾದ ನಿರ್ಧಾರಗಳನ್ನು ತೆಗೆದುಕೊಂಡವರಲ್ಲಿ ಅತಿದೊಡ್ಡ ಉದಾಹರಣೆಯೆಂದರೆ ನಮ್ಮ ನೆರೆಯ ಪಾಕಿಸ್ತಾನ.
ಪಾಕಿಸ್ತಾನವು ಭಯೋತ್ಪಾದಕತೆಯನ್ನು ಅಂತ್ಯಗೊಳಿಸಬೇಕು
ಪಾಕಿಸ್ತಾನವು ಭಯೋತ್ಪಾದನೆ ಮತ್ತು ಅವುಗಳ ಸಂಘಟನೆಯೊಂದಿಗಿರುವ ಸಂಬಂಧವನ್ನು ಕೊನೆಗೊಳಿಸಬೇಕು. ಭಯೋತ್ಪಾದನೆ ವಿಶ್ವದ ಯಾವುದೇ ಸಮಾಜದ, ಧರ್ಮದ ಬೋಧನೆಗಳಿಗೆ ವಿರುದ್ಧವಾಗಿದೆ ಎಂದು ಡಾ.ಜೈಶಂಕರ್ ನುಡಿದರು.
ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನವೆಂದರೆ ಭಯೋತ್ಪಾದನೆ !
ಪಾಕಿಸ್ತಾನದ ಭಯೋತ್ಪಾದಕತೆಯ ರಾಜಕಾರಣದಿಂದಾಗಿ ಅಲ್ಲಿನ ಜನರಲ್ಲಿ ಇಂತಹ ತೀವ್ರಗಾಮಿತನ ನಿರ್ಮಾಣವಾಗುತ್ತಿದ್ದರೆ, ಅದರ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು (ಜಿಡಿಪಿ) ಕೇವಲ ತೀವ್ರಗಾಮಿತ್ವ ಮತ್ತು ಭಯೋತ್ಪಾದನೆಯ ಪರಿಭಾಷೆಯಲ್ಲಿ ಅಳೆಯಬಹುದಾಗಿದೆಯೆಂದು ಜೈಶಂಕರ್ ಟೀಕಿಸಿದರು.
ಸಂಪಾದಕೀಯ ನಿಲುವುಭಾರತ ಕೇವಲ ಬಾಯಿ ಮಾತಿನಲ್ಲಿ ಹೇಳದೆ ಕೃತಿಯಲ್ಲಿ ತರಬೇಕು. |