FIR Against Afzal Ansari : ‘ಸಾಧು-ಸಂತರು ಮಠಗಳಲ್ಲಿ ಗಾಂಜಾ ಸೇದುತ್ತಾರೆ’ ಎಂದಿದ್ದ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲು

ಗಾಜಿಪುರ (ಉತ್ತರ ಪ್ರದೇಶ) – ಸಾಧು-ಸಂತರು ಮಠಗಳಲ್ಲಿ ಗಾಂಜಾ ಸೇದುತ್ತಾರೆ. ಲಕ್ಷ್ಮಣಪುರಿಯಲ್ಲಿ ಅವರು ಧೂಮಪಾನ ಮಾಡುತ್ತಿದ್ದರು. ಮಹಾಕುಂಭಕ್ಕಾಗಿ ಗಾಂಜಾದ ಸರಕು ವಾಹನವನ್ನು ಕಳುಹಿಸಿದರೆ ಅದೂ ಕೂಡ ಖಾಲಿಯಾಗುತ್ತದೆ ಎಂದು ಹಿಂದೂದ್ವೇಷಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ಮತ್ತು ಹತ್ಯೆಗೀಡಾದ ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಸಹೋದರ, ಅಫ್ಜಲ್ ಅನ್ಸಾರಿ ವಿರುದ್ಧ ಪೊಲೀಸರು ಖುದ್ದಾಗಿ ಕೇಸು ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆ ಅಫ್ಜಲ್ ಈ ಹೇಳಿಕೆ ನೀಡಿದ್ದರು.

ಗಾಂಜಾದ ಬಳಕೆಯನ್ನು ಕಾನೂನುಬದ್ಧಗೊಳಿಸಲು ಆಗ್ರಹ

ಅಫ್ಜಲ್ ಅನ್ಸಾರಿಯವರು ಸಂದರ್ಶನವೊಂದರಲ್ಲಿ ಮಾತನಾಡಿ ಗಾಂಜಾ ಬಳಕೆ ಕಾನೂನುಬದ್ಧಗೊಳಿಸಬೇಕು. ಕೋಟ್ಯಾಂತರ ಜನರು ಬಹಿರಂಗವಾಗಿ ಗಾಂಜಾ ಸೇದುತ್ತಾರೆ. ಅದನ್ನು ಅವರು `ದೇವರ ಪ್ರಸಾದ’ ವೆನ್ನುತ್ತಾರೆ ಮತ್ತು ದೇವರ ಔಷಧಿಯೆಂದು ಸೇದುತ್ತಾರೆ. ಒಂದು ವೇಳೆ ಅದು ದೇವರ ಔಷಧಿ ವನಸ್ಪತಿಯಾಗಿದ್ದರೆ, ಅದು ಕಾನೂನಿಗೆ ಹೇಗೆ ವಿರುದ್ಧವಾಗುತ್ತದೆ? ನಿಮ್ಮ ಯೋಗಿ ಬಾಬಾರಿಗೆ (ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ) ಗಾಂಜಾವನ್ನು ಕಾನೂನುಬದ್ಧಗೊಳಿಸುವಂತೆ ಹೇಳಿ. ಒಂದು ವೇಳೆ ಗಾಂಜಾ ಕಾನೂನಿನ ವಿರುದ್ಧವಾಗಿದ್ದರೆ, ಧೂಮ್ರಪಾನ ಮಾಡಲು ಏಕೆ ಅನುಮತಿ ನೀಡಲಾಗಿದೆ? ಈ ದ್ವಂದ್ವ ನಿಲುವು ನಡೆಯುವುದಿಲ್ಲ. ಕುಂಭ ಮಹೋತ್ಸವದ ಕಾಲಾವಧಿಯಲ್ಲಿ ಗಾಂಜಾದ ಸಂಪೂರ್ಣ ಸರಕು ವಾಹನವನ್ನು ಕಳುಹಿಸಿದರೂ ಕೂಡ ಅದು ಖಾಲಿಯಾಗುತ್ತದೆ. ಸಾಧು, ಸಂತರು, ಮಹಾತ್ಮರು ಮತ್ತು ಸಮಾಜದ ಅನೇಕ ಜನರು ಬಹಳ ಆಸಕ್ತಿಯಿಂದ ಗಾಂಜಾ ಸೇವಿಸುತ್ತಾರೆ. ನನ್ನ ಮಾತಲ್ಲಿ ವಿಶ್ವಾಸವಿಲ್ಲದಿದ್ದರೆ ನನ್ನೊಂದಿಗೆ ಗಾಝಿಪೂರದ ಮಠಕ್ಕೆ ಹೋಗಿ ನೋಡಬಹುದು. ಗಾಂಜಾಗೆ ಕಾನೂನಿನ ಸ್ಥಾನಮಾನ ನೀಡಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದವರು ಹೇಳಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಅನ್ಸಾರಿ ಮಾತನಾಡಿ, ನಿಮ್ಮ ಯೋಗಿ ಬಾಬಾರಿಗೆ ಬಿಹಾರ ಗಡಿಯಲ್ಲಿರುವ ಹೊಸ ಮದ್ಯದಂಗಡಿಯನ್ನು ಮುಚ್ಚುವಣತೆ ಹೇಳಿರಿ. `ಮದ್ಯದಂಗಡಿಗಳನ್ನು ಹೆಚ್ಚಿಸಿ’ ಎಂದು ಯಾವ ಧರ್ಮದಲ್ಲಿ ಹೇಳಲಾಗಿದೆ? ಎಂದು ಅನ್ಸಾರಿ ಪ್ರಶ್ನಿಸಿದರು. (ಇತರೆ ಧರ್ಮದವರಿಗೆ ಪೂಜನೀಯವಾಗಿರುವ ಮೂರ್ತಿಗಳನ್ನು ಧ್ವಂಸಗೊಳಿಸಿ, ಇತರೆ ಧರ್ಮದ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿ, ಅವರಿಗೆ ಪೂಜ್ಯವಾಗಿರುವ ಹಸುಗಳ ಹತ್ಯೆ ಮಾಡಿ, ಇತರೆ ಧರ್ಮದವರನ್ನು ಧರ್ಮಾಂತರಗೊಳಿಸಿ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸಗೊಳಿಸಿ ಅಲ್ಲಿ ತಮ್ಮ ಧರ್ಮದ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಿ, ಆಹಾರ ಪದಾರ್ಥಗಳಲ್ಲಿ ಉಗುಳಿ ಅಥವಾ ಮೂತ್ರ ಮಾಡಿ ಎಂದು ಯಾವ ಧರ್ಮದಲ್ಲಿ ಹೇಳಲಾಗಿದೆ? ಎಂದು ಅನ್ಸಾರಿ ಉತ್ತರಿಸುವರೇ?- ಸಂಪಾದಕರು).

ಸಂಪಾದಕೀಯ ನಿಲುವು

ಮಸೀದಿ ಮತ್ತು ಮದರಸಾಗಳಲ್ಲಿ ಜಿಹಾದಿ ಭಯೋತ್ಪಾದಕರು ತಯಾರಾಗುತ್ತಾರೆ, ಶಸ್ತ್ರಾಸ್ತ್ರಗಳು ಜಪ್ತಿಯಾಗುತ್ತವೆ, ಅತ್ಯಾಚಾರಗಳು ನಡೆಯುತ್ತವೆ, ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಅಫ್ಜಲ್ ಅನ್ಸಾರಿ ಏಕೆ ಮಾತನಾಡುವುದಿಲ್ಲ?