ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮುಸ್ಲಿಮರು ದೊಡ್ಡ ಮನಸ್ಸು ಮಾಡಿ ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಭೂಮಿಯ ಮೇಲೆ ನಿರ್ಮಿಸಲಾಗಿರುವ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಏಕೆಂದರೆ ಈ ಸ್ಥಾನದ ಮೇಲೆ ಹಿಂದೂಗಳ ಅಗಾಧವಾದ ಶ್ರದ್ಧೆಯಿದೆ ಎಂದು ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮಹಮದ ಹೇಳಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ‘ಮುಸ್ಲಿಮರಿಗೆ ಈ ಸ್ಥಳದಲ್ಲಿರುವ ಮಸೀದಿಯ ಬಗ್ಗೆ ಯಾವುದೇ ಭಾವನಾತ್ಮಕ ಸೆಳೆತವಿಲ್ಲ ಮತ್ತು ಐತಿಹಾಸಿಕ ತಪ್ಪನ್ನು ಸುಧಾರಿಸಲು ಮುಸಲ್ಮಾನರು ಸ್ವತಃ ಮುಂದೆ ಬರಬೇಕು’, ಎಂದೂ ಸಹ ಅವರು ಹೇಳಿದರು. ಕೆ.ಕೆ. ಮಹಮದ ಇವರು ಬಾಬ್ರಿ ಸ್ಥಳದಲ್ಲಿ ಉತ್ಖನನ ಮಾಡಿ ಶ್ರೀರಾಮಜನ್ಮಭೂಮಿ ಮಂದಿರದ ವಿಷಯದಲ್ಲಿ ಮಹತ್ವದ ತೀರ್ಮಾನ ನೀಡಿದ್ದರು ಮತ್ತು ಆ ಸ್ಥಳದಲ್ಲಿ ಪ್ರಾಚೀನ ಮಂದಿರವಿತ್ತು ಎಂದು ಅವರು ಹೇಳಿದ್ದರು.
ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಭಾರತದ ಜಾತ್ಯತೀತತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು !
ಕೆ.ಕೆ. ಮಹಮದ ಮಾತು ಮುಂದುವರಿಸಿ, ಭಾರತವು ಇಂದು ಹಿಂದೂಗಳಿಂದಲೇ ಜಾತ್ಯತೀತವಾಗಿದೆ. ಇಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ, ಹಾಗಾಗಿ ದೇಶವು ಜಾತ್ಯತೀತವಾಗಿದೆ. ಇದಕ್ಕಾಗಿ ಮುಸ್ಲಿಮರು ಕೃತಜ್ಞರಾಗಿರಬೇಕು. ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಭಾರತದ ಜಾತ್ಯತೀತತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. (ಭವಿಷ್ಯದಲ್ಲಿ ಭಾರತದಲ್ಲಿ ಇದೇ ಪರಿಸ್ಥಿತಿ ಎದುರಾಗಲಿದೆ. ಭಾರತದಲ್ಲಿ ಮುಸ್ಲಿಮರು ಶೇ. 14ರಷ್ಟಿದ್ದಾರೆ, ಹಲವೆಡೆ ಹಿಂದೂಗಳಿಗೆ ಕೊಲ್ಲುತ್ತಿದ್ದಾರೆ. ನಾಳೆ ಶೇ.30 ರಷ್ಟಾದರೇ ಭಾರತವು ಇಸ್ಲಾಮಿಕ್ ರಾಷ್ಟ್ರವಾಗದೇ ಉಳಿಯುವುದಿಲ್ಲ. ಇದು ವಸ್ತುಸ್ಥಿತಿಯಾಗಿದೆ ! – ಸಂಪಾದಕರು) ಸ್ವಾತಂತ್ರ್ಯದ ನಂತರ ಮುಸಲ್ಮಾನರಿಗಾಗಿ ಪಾಕಿಸ್ತಾನವನ್ನು ನಿರ್ಮಿಸಲಾಯಿತು. ಮತ್ತು ಭಾರತವನ್ನು ಹಿಂದೂಗಳಿಗೆ ನೀಡಲಾಯಿತು. ಆದರೂ ಹಿಂದೂಗಳು ಅದನ್ನು ಹಿಂದೂ ದೇಶವೆಂದು ನಿರ್ಮಿಸಿಲ್ಲ. ಅದು ಜಾತ್ಯತೀತವಾಗಿ ಉಳಿಯಿತು ಮತ್ತು ಇದಕ್ಕೆ ಮುಸ್ಲಿಮರು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಎಂದು ಅವರು ಹೇಳಿದರು.