ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕನ ಬಂಧನ

ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ.

ಕೇರಳದಲ್ಲಿ ಸಂಘದ ನಾಯಕನ ಹತ್ಯೆಯ ಪ್ರಕರಣದಲ್ಲಿ ಸರಕಾರಿ ಅಧಿಕಾರಿ ಬಿ. ಜಿಶಾದನ ಬಂಧನ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆ ಪ್ರಕರಣದ ವಿಶೇಷ ತನಿಖಾ ದಳವು ಬಿ. ಜೀಶಾದ ಎಂಬಾತ ಅಗ್ನಿಶಾಮಕ ವಿಭಾಗದಲ್ಲಿ ಕಾರ್ಯನಿರತವಾಗಿರುವ ಸರಕಾರಿ ಅಧಿಕಾರಿಯನ್ನು ಬಂಧಿಸಿದೆ.

ದೆಹಲಿಯ ರಸ್ತೆಗಳಿಗಿರುವ ಮೊಘಲ್ ಬಾದಶಾಹರ ಹೆಸರುಗಳನ್ನು ಬದಲಾಯಿಸಲು ಭಾಜಪದಿಂದ ಮನವಿ

ದೆಹಲಿಯಲ್ಲಿರುವ ತುಘಲಕ ರೋಡ್, ಅಕಬರ ರೋಡ್, ಔರಂಗಜೇಬ ಲೇನ್, ಹುಮಾಯೂನ ರೋಡ್, ಮತ್ತು ಶಹಜಹಾನ ರೋಡ್ ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಭಾಜಪವು ಮಹಾನಗರಪಾಲಿಕೆಯಲ್ಲಿ ಮನವಿ ಮಾಡಿದೆ.

ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಪ್ರಕರಣದಲ್ಲಿ ಯುಕ್ತಿವಾದ ಮುಗಿದಿದೆ : ಇಂದು ತೀರ್ಪು!

ಇಲ್ಲಿನ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಿ ದೇವಸ್ಥಾನಗಳ ಸಮೀಕ್ಷೆಯ ಸಂದರ್ಭದಲ್ಲಿ ದಿವಾನಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಯುಕ್ತಿವಾದವು ಪೂರ್ಣವಾಗಿದ್ದು, ಅದರ ಮೇಲೆ ಮೇ ೧೨ ರಂದು ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು.

ಜ್ಞಾನವಾಪಿ ಮಸೀದಿಯ ಗೋಡೆಯ ಮೇಲೆ ಗಂಟೆಗಳು ಮತ್ತು ಸ್ವಸ್ತಿಕ ಅಸ್ತಿತ್ವದಲ್ಲಿವೆ ! – ಚಿತ್ರಿಕರಣ ಮಾಡುವವನ ದಾವೆ

ಸಿವಿಲ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ದೇವಸ್ಥಾನದ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ಕೈಗೊಳ್ಳಲಾಗುವುದು. ಇಲ್ಲಿಯ ಕೆಲವು ಭಾಗಗಳ ಸಮೀಕ್ಷೆ ಮಾಡಿ ಚಿತ್ರಿಕರಿಸಲಾಗಿದೆ. ನ್ಯಾಯಾಲಯದ ಆಯುಕ್ತರ ಸಮ್ಮುಖದಲ್ಲಿ ಚಿತ್ರೀಕರಿಸಿದ ವಿಭಾಷ ದುಬೆ ಅವರು ‘ಆಜ ತಕ’ಈ ವಾರ್ತಾವಾಹಿನಿಯೊಮದಿಗೆ ಮಾತನಾಡುವಾಗ ತಿಳಿಸಿದ್ದಾರೆ

ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !

ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿಷಯವಾಗಿ ನ್ಯಾಯಾಲಯದ ಆದೇಶದ ಕಾರ್ಯಾಚರಣೆ ನಡೆಸಲಾಗುವುದು ! – ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ

ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ನೀಡಲಾಗುವ ಅಜಾನಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲವು ಆದೇಶಗಳಿದ್ದು ಅದು ಎಲ್ಲರಿಗೂ ಅನ್ವಯವಾಗುತ್ತದೆ. ಅವುಗಳ ಕಾರ್ಯಾಚರಣೆಯನ್ನು ಸೌಹಾರ್ದಪೂರ್ಣ ವಾತಾವರಣದಲ್ಲಿ ಮಾಡಬೇಕು.

ಮಥುರೆಯ ಶ್ರೀಕೃಷ್ಣಜನ್ಮಭೂಮಿಯಲ್ಲಿಯೂ ಸಮೀಕ್ಷೆ ಮತ್ತು ಚಿತ್ರೀಕರಣಕ್ಕೆ ನ್ಯಾಯಾಲಯದಲ್ಲಿ ಬೇಡಿಕೆ

ಕಾಶಿಯ ಜ್ಞಾನವಾಪಿ ಮಸೀದಿಯಂತೆಯೇ ಮಥುರೆಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣವನ್ನೂ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಸಮಯದಲ್ಲಿ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಕುರಿತು ಎಲ್ಲಾ ದಾಖಲೆಗಳನ್ನು ಸಾದರಪಡಿಸಲಾಗಿದೆ. ಈ ಅರ್ಜಿಯನ್ನು ನ್ಯಾಯವಾದಿ ಮಹೇಂದ್ರ ಪ್ರತಾಪರವರು ಸಲ್ಲಿಸಿದ್ದಾರೆ.

ಜೈಷೆ-ಏ-ಮೋಹಮ್ಮದ್ ನಿಂದ ಹರಿದ್ವಾರದ ಧಾರ್ಮಿಕ ಸ್ಥಳಗಳ ಸಹಿತ ೯ ರೈಲ್ವೆ ಸ್ಟೇಷನ್ ಗಳಿಗೆ ಬಾಂಬ್ ಬೆದರಿಕೆ

ರಾಜ್ಯದ ರೂಡಕೀ ರೈಲ್ವೆ ಸ್ಟೇಷನ್ ಅಧಿಕಾರಿಗಳಿಗೆ ಬೆದರಿಕೆಯ ಪತ್ರ ದೊರೆತಿದ್ದು ಅದರಲ್ಲಿ ಮೆ ೨೧ ರ ನಂತರ ಹರಿದ್ವಾರದ ಮಂಶಾದೇವಿ ಮತ್ತು ಚಂಡಿದೇವಿ ಇವುಗಳ ಜೊತೆಗೆ ಅನ್ಯ ಧಾರ್ಮಿಕ ಸ್ಥಳ, ಹಾಗೂ ಲಕ್ಷರ್, ನಜರಾಬಾದ್, ಡೆಹರಾಡೂನ್, ರೂಡಕೀ, ರಿಷಿಕೇಶ್ ಮತ್ತು ಹರಿದ್ವಾರದ ರೈಲ್ವೆ ಸ್ಟೇಷನಗಳ ಮೇಲೆ ಬಾಂಬು ದಾಳಿ ನಡೆಸಲಾಗುವ ಬೆದರಿಕೆ ಒಡ್ಡಲಾಗಿದೆ.