ಕೇರಳದಲ್ಲಿ ಸಂಘದ ನಾಯಕನ ಹತ್ಯೆಯ ಪ್ರಕರಣದಲ್ಲಿ ಸರಕಾರಿ ಅಧಿಕಾರಿ ಬಿ. ಜಿಶಾದನ ಬಂಧನ !

ಕಳೆದ ೧೪ ವರ್ಷದಿಂದ ಪಿ.ಎಫ.ಐ ನಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ !

ಪಾಲಕ್ಕಡ್ (ಕೇರಳ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆ ಪ್ರಕರಣದ ವಿಶೇಷ ತನಿಖಾ ದಳವು ಬಿ. ಜೀಶಾದ ಎಂಬಾತ ಅಗ್ನಿಶಾಮಕ ವಿಭಾಗದಲ್ಲಿ ಕಾರ್ಯನಿರತವಾಗಿರುವ ಸರಕಾರಿ ಅಧಿಕಾರಿಯನ್ನು ಬಂಧಿಸಿದೆ. ಜಿಶಾದ ಇವನು ನವಂಬರ್ ೨೦೨೧ ರಲ್ಲಿ ಸಂಭವಿಸಿದ ಸಂಘದ ಕಾರ್ಯಕರ್ತ ಎಸ್. ಸಂಜಿತ್ ಇವರ ಹತ್ಯೆಯಲ್ಲಿ ಸಹ ಭಾಗಿಯಾಗಿದ್ದ, ಎಂಬ ಮಾಹಿತಿ ದಳದಿಂದ ಸಿಕ್ಕಿದೆ. ಜಿಶಾದ ೨೦೦೮ ರಿಂದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಈ ಜಿಹಾದಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತ ಆಗಿರುವದು ಬೆಳಕಿಗೆ ಬಂದಿದೆ. ಕಳೆದ ತಿಂಗಳಿನಲ್ಲಿ ನಡೆದ ಶ್ರೀನಿವಾಸನ್ ಇವರ ಹತ್ಯೆ ಪ್ರಕರಣದಲ್ಲಿ ಇದು ೨೨ ನೇ ಬಂಧನವಾಗಿದೆ. ಎಲ್ಲಾ ಅಪರಾಧಿಗಳು ಪಿ.ಎಫ್.ಐ. ಜೊತೆಗೆ ಸಂಬಂಧ ಇರುವ ಮಾಹಿತಿ ಪೊಲೀಸರು ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳು, ಜಿಶಾದ ಇವನು ಶ್ರೀನಿವಾಸನ್ ಇವರ ಹತ್ಯೆಯ ದಿನದಂದು ಅವರ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ನಿಗಾವಿಟ್ಟಿದ್ದರು. ನವಂಬರ್ ತಿಂಗಳಲ್ಲಿ ಸಂಜಿತ ಇವರ ಹತ್ಯೆಯ ಸಮಯದಲ್ಲಿ ಅವನು ಇದೇ ಪಾತ್ರವನ್ನು ನಿರ್ವಹಿಸಿದ್ದನು. ಅಗ್ನಿಶಾಮಕ ವಿಭಾಗದಿಂದ ಜಿಶಾದನನ್ನು ತಕ್ಷಣ ಅಮಾನತುಗೊಳಿಸಿದೆ.

ಪೊಲೀಸ ಇಲಾಖೆಯಲ್ಲಿ ‘ಪಿ.ಎಫ್.ಐ.’ನ ಕಾರ್ಯಕರ್ತರ ಸೇರ್ಪಡೆ !

ಕಳೆದ ವರ್ಷ ಗುಪ್ತಚರ ಇಲಾಖೆ ಸಲ್ಲಿಸಿದ ವರದಿಯ ಪ್ರಕಾರ ‘ಪಿ.ಎಫ್.ಐ.’ನ ಅನೇಕ ಕಾರ್ಯಕರ್ತರು ಕೇರಳ ರಾಜ್ಯ ಪೊಲೀಸ ಮತ್ತು ಅನ್ಯ ವಿಭಾಗದಲ್ಲಿ ನೌಕರಿ ಮಾಡುತ್ತಿದ್ದಾರೆ. ಫೆಬ್ರವರಿ ೨೦೨೧ ರಲ್ಲಿ ಪೊಲೀಸರು ಪೊಲೀಸ್ ಅಧಿಕಾರಿ ಪಿ.ಕೆ. ಅನಸ ಇವರನ್ನು ಅಮಾನತುಗೊಳಿಸಿದ್ದರು. ಅನಸ ಇವನು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ಕಾರ್ಯನಿರತ ರಾಷ್ಟ್ರೀಯ ಸ್ವಯಂಸೇವಕ ಸಂಘದ ೨೦೦ ಸ್ವಯಂ ಸೇವಕರ ವೈಯಕ್ತಿಕ ಮಾಹಿತಿ ‘ಪಿ.ಎಫ್.ಐ. ಗೆ ನೀಡಿದ್ದ.

ಸಂಪಾದಕೀಯ ನಿಲುವು

‘ಮುಸಲ್ಮಾನರನ್ನು ಮುಖ್ಯವಾಹಿನಿಯಲ್ಲಿದ್ದರೆ ಅವರ ಪ್ರವೃತ್ತಿಯಲ್ಲಿ ಬದಲಾವಣೆಯಾಗುವುದು’, ಎಂದು ಹೇಳುವವರು ಜಾತ್ಯಾತೀತರ ಈಗ ಮೌನವೇಕೆ ?

‘ಪಿ.ಎಫ್.ಐ.’ ಮೇಲೆ ನಿಷೇಧ ಹೇರುವುದಕ್ಕಾಗಿ ಯಾವುದೇ ಸರಕಾರ ಏನು ಮಾಡದೇ ಇರುವುದು ಈಗ ರಾಷ್ಟ್ರದ ಹಿತಕ್ಕಾಗಿ ಜನರು ಕಾನೂನು ಮಾರ್ಗದಿಂದ ರಾಷ್ಟ್ರವ್ಯಾಪಿ ಆಂದೋಲನ ನಡೆಸಿ ಸರಕಾರಕ್ಕೆ ಅದರ ಮೇಲೆ ನಿಷೇಧ ಹೇರಲು ಅನಿವಾರ್ಯ ಪಡಿಸಬೇಕು !