ಇರಾನ್‌ಗೆ ಬೆದರಿಕೆ ಹಾಕಿದ ಟ್ರಂಪ್
ಕದನ ವಿರಾಮದ ನಂತರವೂ ಇರಾನ್‌ನ 10 ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ
ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ

ವಾಷಿಂಗ್ಟನ್ (ಅಮೆರಿಕ) – ಇರಾನ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅಮೆರಿಕ ಮತ್ತೊಮ್ಮೆ ಇರಾನ್‌ನ 10 ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ. ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನಲ್ಲಿ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಕರಾವಳಿ ರಾಡಾರ್ ವ್ಯವಸ್ಥೆಗಳನ್ನು ನಿಯೋಜಿಸಲಾಗಿದ್ದ 10 ಸ್ಥಳಗಳನ್ನು ಗುರಿಯಾಗಿಸಿವೆ ಎಂದು ಟ್ರಂಪ್ ಬರೆದಿದ್ದಾರೆ. ಕದನ ವಿರಾಮವನ್ನು ಇರಾನ್ ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಳ್ಳಬೇಕಾಯಿತು. ನಾವು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದೆವು; ಆದರೆ ಸುಧಾರಣೆಯಾಗದಿದ್ದರೆ, ಅಮೆರಿಕ ಭಾರೀ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಒಂದು ವೇಳೆ ಹಾಗೇನಾದರೂ ಸಂಭವಿಸಿದರೆ, ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್’ನ ಅಸ್ತಿತ್ವವನ್ನು ಶಾಶ್ವತವಾಗಿ ಅಳಿಸಿಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ನೀಡಿದ ಯುಎಸ್ ಸೆಂಟ್ರಲ್ ಕಮಾಂಡ್, ಜೂನ್ 27 ರ ಬೆಳಗ್ಗೆ ಇರಾನ್‌ನ ಡ್ರೋನ್ ಒಂದು ಪನಾಮ ಧ್ವಜವಿರುವ ವಾಣಿಜ್ಯ ನೌಕೆಯ ಮೇಲೆ ದಾಳಿ ನಡೆಸಿತ್ತು ಎಂದು ತಿಳಿಸಿದೆ. ಈ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಇರಾನ್‌ನ ಮಿಲಿಟರಿ ಕಣ್ಗಾವಲು, ಸಂವಹನ, ವಾಯು ರಕ್ಷಣೆ ಮತ್ತು ಡ್ರೋನ್ ಸಂಗ್ರಹಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದೆ.
ನರಕಯಾತನೆ ಅನುಭವಿಸಬೇಕಾಗುತ್ತದೆ! – ಇರಾನ್ ಎಚ್ಚರಿಕೆ
ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (‘ಐ.ಆರ್.ಜಿ.ಸಿ.’) ಜೂನ್ 28 ರ ಮುಂಜಾನೆ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಭೀಕರ ದಾಳಿ ನಡೆಸಿದೆ. ಅಮೆರಿಕ ಸೇರಿದಂತೆ ಇಡೀ ಗಲ್ಫ್ ದೇಶಗಳಿಗೆ ‘ಮುಂಬರುವ ದಿನಗಳಲ್ಲಿ ನರಕಯಾತನೆ ಅನುಭವಿಸಬೇಕಾಗುತ್ತದೆ’ ಎಂದು ಇರಾನ್ ನೇರ ಎಚ್ಚರಿಕೆ ನೀಡಿದೆ. ಅಲ್ಲದೆ, ‘ಸಿರಿಕ್ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣ ಕಡಿಮೆಯಾಗುವುದಿಲ್ಲ. ಕಡಲ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸುರಕ್ಷಿತ ಸಾರಿಗೆಯ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲಾಗುವುದು’ ಎಂದು ಐ.ಆರ್.ಜಿ.ಸಿ. ಹೇಳಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ
ಫ್ರಾನ್ಸ್ನಲ್ಲಿ ತೀವ್ರ ಬಿಸಿಲಿನಿಂದಾಗಿ ಎಸಿ(ಎರ್ ಕಂಡಿಶನ್)ಗಳನ್ನು (ಎಸಿ, ಏರ್ ಕಂಡೀಶನರ್) ಖರೀದಿಸಲು ಅಂಗಡಿಗಳಲ್ಲಿ ಭಾರಿ ಜನಸಂದಣಿ
ಗೋಪಾಲಗಂಜ್ ಜಿಲ್ಲೆಯ ಒಂದೇ ಹಿಂದೂ ಕುಟುಂಬದ ೪ ಸದಸ್ಯರ ಮೇಲೆ ದಾಳಿ
ಚೀನಾ ದೇಶವು ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಬಾಂಗ್ಲಾದೇಶದ ಬಂದರುಗಳ ಮೂಲಕ ಸುತ್ತುವರಿದಿದೆ!
ಮಾಜಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು!
US-Iran Ceasefire : ಇರಾನ್ ವ್ಯಾಪಾರಿ ನೌಕೆಯ ಮೇಲೆ ನಡೆಸಿದ ದಾಳಿಯ ನಂತರ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾದಿಂದ ದಾಳಿ