ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

  • ರಾಕೆಟ ಲಾಂಚರ ಸಹ ವಶ

  • ದಾಳಿಯ ಹಿಂದೆ ಪಾಕಿಸ್ತಾನದ ಖಲಿಸ್ತಾನದ ಕೈವಾಡ

ಮೊಹಾಲಿ (ಪಂಜಾಬ) – ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ. ನಿಶಾನ ಸಿಂಗ ಪಂಜಾಬನ ತರಣತಾರಣದಲ್ಲಿರುವ ಭಿಖಿವಿಂಡ ಗ್ರಾಮದ ನಿವಾಸಿಯಾಗಿದ್ದಾನೆ. ಈ ಗ್ರಾಮ ಪಾಕಿಸ್ತಾನದ ಗಡಿಯ ಸಮೀಪದಲ್ಲಿದೆ. ಮೊಹಾಲಿ ಮತ್ತು ಫರಿದಕೋಟನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಫರಿದಕೋಟನಿಂದ ಬಂಧಿಸಿದ್ದಾರೆ.

ಕುಖ್ಯಾತ ಗೂಂಡಾ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಗ ಅಲಿಯಾಸ್ ರಿಂದಾ ಇವನ ಕೈವಾಡವಿದೆಯೆಂದು ಹೇಳಲಾಗುತ್ತಿದೆ. ರಿಂದಾ ಈ ‘ರಾಕೆಟ ಲಾಂಚರ’ ನ್ನು ಡ್ರೋನ ಮೂಲಕ ಪಂಜಾಬಗೆ ಕಳುಹಿಸಿದ್ದ ಎಂದು ಹೇಳಲಾಗುತ್ತಿದೆ. ಈ ‘ರಾಕೆಟ ಲಾಂಚರ’ನ್ನು ರಷ್ಯಾದಲ್ಲಿ ತಯಾರಿಸಲಾಗುತ್ತಿದೆ. ರಕ್ಷಣಾ ತಜ್ಞರ ಪ್ರಕಾರ ರಷ್ಯಾ ಇಂತಹ ಶಸ್ತ್ರಾಸ್ತ್ರಗಳನ್ನು ಅಫಘಾನಿಸ್ತಾನ ಸೇನೆಗೆ ಮಾರಾಟ ಮಾಡಿತ್ತು. ಮೊಹಾಲಿಯಲ್ಲಿ ದಾಳಿ ಮಾಡಿದ ‘ರಾಕೆಟ ಗ್ರೆನೇಡ್’ಅನ್ನು ಅಮೇರಿಕಾವು ಅಫಘಾನಿಸ್ತಾನಕ್ಕೆ ಮತ್ತು ನಂತರ ತಾಲಿಬಾನ ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು.

ಸಂಪಾದಕೀಯ ನಿಲುವು

ಪಂಜಾಬನಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು, ಕೇಂದ್ರ ಸರಕಾರವು ಇನ್ನು ಮುಂದೆ ಅಂತಹ ಭಯೋತ್ಪಾಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು !