ದೆಹಲಿಯ ರಸ್ತೆಗಳಿಗಿರುವ ಮೊಘಲ್ ಬಾದಶಾಹರ ಹೆಸರುಗಳನ್ನು ಬದಲಾಯಿಸಲು ಭಾಜಪದಿಂದ ಮನವಿ

ನವದೆಹಲಿ – ದೆಹಲಿಯಲ್ಲಿರುವ ತುಘಲಕ ರೋಡ್, ಅಕಬರ ರೋಡ್, ಔರಂಗಜೇಬ ಲೇನ್, ಹುಮಾಯೂನ ರೋಡ್, ಮತ್ತು ಶಹಜಹಾನ ರೋಡ್ ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಭಾಜಪವು ಮಹಾನಗರಪಾಲಿಕೆಯಲ್ಲಿ ಮನವಿ ಮಾಡಿದೆ. ತುಘಲಕ ರೋಡಿನ ಹೆಸರು ಗುರು ಗೋವಿಂದಸಿಂಹ ಮಾರ್ಗ, ಆಕಬರ ರೋಡಿನ ಹೆಸರು ಮಹಾರಾಣಾ ಪ್ರತಾಪ ರೋಡ, ಔರಂಗಜೇಬ ಲೇನಿನ ಹೆಸರು ಅಬ್ದುಲ್ ಕಲಾಂ ಲೆನ್, ಹುಮಾಯೂನ ರೋಡಿನ ಹೆಸರು ಮಹರ್ಷಿ ವಾಲ್ಮೀಕಿ ರೋಡ್, ಬಾಬರ ಲೇನಿನ ಹೆಸರು ಖುದಿರಾಮ ಬೋಸ, ಮತ್ತು ಶಹಜಹಾನ ರೋಡಿನ ಹೆಸರು ಜನರಲ್ ಬಿಪಿನ ಸಿಂಹ ರಾವತ ರೋಡ್ ಎಂದು ಇಡಬೇಕೆಂದು, ಭಾಜಪವು ಹೇಳಿದೆ.

ಸಂಪಾದಕೀಯ ನಿಲುವು

ಕಳೆದ ೭೪ ವರ್ಷಗಳಲ್ಲಿ ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ, ಸಂಪೂರ್ಣ ದೇಶದಲ್ಲಿರುವ ಊರು, ನಗರ, ರಸ್ತೆ ಮುಂತಾದವುಗಳಿಗೆ ಇರುವ ಅಕ್ರಮಣಕಾರರ ಹೆಸರುಗಳು ಏಕೆ ಬದಲಾಯಿಸಲಾಗಲ್ಲಿಲ್ಲ ? ಮತ್ತು ಈಗಲೂ ಇದರ ಬದಲಾವಣೆಗಾಗಿ ಏಕೆ ಮನವಿ ಮಾಡಬೇಕಾಗುತ್ತದೆ ?