ಜ್ಞಾನವಾಪಿ ಮಸೀದಿಯ ಗೋಡೆಯ ಮೇಲೆ ಗಂಟೆಗಳು ಮತ್ತು ಸ್ವಸ್ತಿಕ ಅಸ್ತಿತ್ವದಲ್ಲಿವೆ ! – ಚಿತ್ರಿಕರಣ ಮಾಡುವವನ ದಾವೆ

ವಾರಣಾಸಿ (ಉತ್ತರ ಪ್ರದೇಶ) – ಸಿವಿಲ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ದೇವಸ್ಥಾನದ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ಕೈಗೊಳ್ಳಲಾಗುವುದು. ಇಲ್ಲಿಯ ಕೆಲವು ಭಾಗಗಳ ಸಮೀಕ್ಷೆ ಮಾಡಿ ಚಿತ್ರಿಕರಿಸಲಾಗಿದೆ. ನ್ಯಾಯಾಲಯದ ಆಯುಕ್ತರ ಸಮ್ಮುಖದಲ್ಲಿ ಚಿತ್ರೀಕರಿಸಿದ ವಿಭಾಷ ದುಬೆ ಅವರು ‘ಆಜ ತಕ’ಈ ವಾರ್ತಾವಾಹಿನಿಯೊಮದಿಗೆ ಮಾತನಾಡುವಾಗ ತಿಳಿಸಿದ್ದಾರೆ, ಜ್ಞಾನವಾಪಿ ಮಸೀದಿಯ ಗೋಡೆಗಳ ಮೆಲೆ ಪುರಾತನ ಗಂಟೆಗಳು ಮತ್ತು ಹೂವಿನ ಮಾಲೆಗಳು ಮತ್ತು ಎರಡು ಸ್ವಸ್ತಿಕಗಳು ಕಂಡುಬಂದವು ಎಂದು ಹೇಳಿದರು. ಶೃಂಗಾರಗೌರಿ ದೇವಸ್ಥಾನದ ಕೆಳಗೆ ಶೇಷನಾಗ ಮತ್ತು ಕಮಲವೂ ಕಾಣಿಸಿಕೊಂಡಿದೆ ಎಂದು ಹೇಳಿದರು.

ದುಬೆ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಉಗುರುಗಳಿಂದ ಗೋಡೆಯ ಮೇಲೆ ಗಿರುಗಳಿವೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಚಿತ್ರೀಕರಣಕ್ಕಾಗಿ ಗೋಡೆಯ ಮೇಲಿನ ಧೂಳನ್ನು ತೆಗೆಯಲಾಗಿತ್ತು. ಮೇ ೬ ರಂದು ನಮಗೆ ವಿರೋಧಿಸಲಿಲ್ಲ; ಆದರೆ ಮರುದಿನ ನಾವೂ ಅಲ್ಲಿಗೆ ಹೋದಾಗ ಘೋಷಣೆ ಮಾಡಲಾಯಿತು. ೧೦೦ ಕ್ಕೂ ಹೆಚ್ಚು ಜನ ನಮ್ಮನ್ನು ವಿರೋಧಿಸಿದರು. ನ್ಯಾಯಾಲಯದ ಆಯುಕ್ತರನ್ನು ಒಳಗೆ ಹೋಗಲು ಹೇಳಿದರು; ಆದರೆ ಮುಸ್ಲಿಂ ಪಕ್ಷದ ವಕೀಲರು ಮೌನ ವಹಿಸಿದ್ದರು ಎಂದು ಹೇಳಿದರು.