ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !

ಜಯಪುರ (ರಾಜಸ್ಥಾನ) – ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಹಲವು ಗ್ರಾಮಗಳಲ್ಲಿ ವಿವಿಧ ಜಾತಿಯ ಜನರು ವಾಸಿಸುತ್ತಿದ್ದಾರೆ. ಹಾಗಾದರೆ ಬೇರೆ ಜಾತಿಯ ರೋಗಿಗಳು ಶಿಬಿರಕ್ಕೆ ಬಂದರೆ ಚಿಕಿತ್ಸೆ ನೀಡದೆ ವಾಪಸ ಕಳುಹಿಸುತ್ತಾರೆಯೇ ? ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು ‘ರಾಷ್ಟ್ರೀಯ ಆಯುರ್ವೇದ ಸಂಸ್ಥೆ’ಯ ನಿರ್ದೇಶಕ ಸಂಜೀವ ವರ್ಮಾ ಮಾತನಾಡಿ, ಇಂತಹ ಶಿಬಿರಗಳಿಗೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ನೀಡಲಾಗುತ್ತದೆ. ಅದಕ್ಕಾಗಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರಿಗಾಗಿ ರಾಜ್ಯ ಸರಕಾರದಿಂದ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಇತರ ಜಾತಿಗಳ ಜನರಿಗೆ ಸಾಮಾನ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿರುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಶಿಬಿರಗಳು ಎಲ್ಲರಿಗೂ ಉಪಯೋಗವಾಗುವುದರಿಂದ ಎಲ್ಲರಿಗೂ ಏಕೆ ಆಯೋಜಿಸುತ್ತಿಲ್ಲ ?