ಡೆಹರಾಡೂನ್ (ಉತ್ತರಾಖಂಡ) – ರಾಜ್ಯದ ರೂಡಕೀ ರೈಲ್ವೆ ಸ್ಟೇಷನ್ ಅಧಿಕಾರಿಗಳಿಗೆ ಬೆದರಿಕೆಯ ಪತ್ರ ದೊರೆತಿದ್ದು ಅದರಲ್ಲಿ ಮೆ ೨೧ ರ ನಂತರ ಹರಿದ್ವಾರದ ಮಂಶಾದೇವಿ ಮತ್ತು ಚಂಡಿದೇವಿ ಇವುಗಳ ಜೊತೆಗೆ ಅನ್ಯ ಧಾರ್ಮಿಕ ಸ್ಥಳ, ಹಾಗೂ ಲಕ್ಷರ್, ನಜರಾಬಾದ್, ಡೆಹರಾಡೂನ್, ರೂಡಕೀ, ರಿಷಿಕೇಶ್ ಮತ್ತು ಹರಿದ್ವಾರದ ರೈಲ್ವೆ ಸ್ಟೇಷನಗಳ ಮೇಲೆ ಬಾಂಬು ದಾಳಿ ನಡೆಸಲಾಗುವ ಬೆದರಿಕೆ ಒಡ್ಡಲಾಗಿದೆ. ಪತ್ರ ಕಳಿಸುವನು ತನ್ನನ್ನು ಸಲೀಮ್ ಅನ್ಸಾರಿಯೆಂದು ಹೇಳಿ ಜೈಶ್-ಏ-ಮೊಹಮ್ಮದ್ ಉಗ್ರರ ಸಂಘಟನೆಯ ಏರ್ ಕಮಾಂಡರ್ ಆಗಿರುವುದಾಗಿ ನಮೂದಿಸಿದ್ದಾನೆ.
ಪತ್ರದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರನ್ನು ಗುರಿಯಾಗಿಸಬಹುದು ಎಂಬುವುದರ ಉಲ್ಲೇಖವಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ರೈಲ್ವೆ ಸ್ಟೇಷನ್ ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಧಾರ್ಮಿಕ ಸ್ಥಳಗಳು ಇವು ಯಾವಾಗಲೂ ಉಗ್ರರ ಗುರಿಯಾಗಿರುತ್ತವೆ. ಇದು ಸತ್ಯವಾಗಿದ್ದರು ‘ಉಗ್ರರಿಗೆ ಧರ್ಮ ಇರುವುದಿಲ್ಲ’ ಎಂದು ಹೇಳುವುದು ಶುದ್ಧ ಬೂಟಾಟಿಕೆ ಎಂದು ಅರಿಯಬೇಕು ! |