ಷಡ್ಯಂತ್ರ ಮಾಡಿ ಕಳ್ಳತನ; ಮುಂದುವರಿದ ಪೊಲೀಸರ ತನಿಖೆ

ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮ ಮಂದಿರದಲ್ಲಿನ ಕಾಣಿಕೆಯ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಜನರ ವಿರುದ್ಧ ದೂರು ದಾಖಲಿಸಿ ಬಂಧಿಸಿದ್ದಾರೆ. ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ 8 ಆರೋಪಿಗಳ ಪೈಕಿ 5 ಆರೋಪಿಗಳು ಪರಸ್ಪರ ಅತ್ಯಂತ ಹತ್ತಿರದಲ್ಲಿ ವಾಸಿಸುತ್ತಿದ್ದಾರೆ ಅಥವಾ ಸಂಬಂಧಿಕರಾಗಿದ್ದಾರೆ. ಇವರ ಮನೆಗಳು ಕೇವಲ 100 ರಿಂದ 200 ಮೀಟರ್ ಅಂತರದಲ್ಲಿವೆ ಎಂಬ ಮಾಹಿತಿ ಮುನ್ನೆಲೆಗೆ ಬಂದಿದೆ. ಈ ಎಲ್ಲಾ ಆರೋಪಿಗಳು ಮೊದಲಿನಿಂದಲೇ ಪರಿಚಿತರಾಗಿದ್ದರೇ? ಮತ್ತು ಕಳ್ಳತನದ ನೆಪದಲ್ಲಿ ಏನಾದರೂ ಸಂಚು ಮಾಡಲಾಗಿದೆಯೇ ?, ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
1. ಆರೋಪಿ ಲವಕುಶ ಮಿಶ್ರಾ ಅವರ ಮನೆಯ ಬೆನ್ನಿಗೇ ಆರೋಪಿ ಅವಿನಾಶ್ ಶುಕ್ಲಾ ಅವರ ಮನೆಯಿದೆ. ಅಂದರೆ ಇಬ್ಬರ ಮನೆಗಳು ಒಂದಕ್ಕೊಂದು ಕೇವಲ ಕೆಲವು ಹೆಜ್ಜೆಗಳ ಅಂತರದಲ್ಲಿವೆ.
2. ಆರೋಪಿ ಅನುಕಲ್ಪ ಮಿಶ್ರಾ ಅವರ ಮನೆಯೂ ಇಲ್ಲಿಂದ ಸುಮಾರು 200 ಮೀಟರ್ ಅಂತರದಲ್ಲಿದೆ. ವಿಶೇಷವೆಂದರೆ ಅನುಕಲ್ಪ ಮಿಶ್ರಾ ಸರಿಸುಮಾರು ಎರಡು ವರ್ಷಗಳ ಹಿಂದೆ ಈ ಮನೆ ಖರೀದಿಸಿದ್ದರು. ಈ ಮೂರೂ ಮನೆಗಳು ಕೌಶಲಪುರಿ ಕಾಲೋನಿಯಲ್ಲಿವೆ.
3. ಅಷ್ಟೇ ಅಲ್ಲದೇ, ಈ ಪ್ರಕರಣದ ಆರೋಪಿಗಳಾದ ಮನೀಷ್ ಯಾದವ್ ಮತ್ತು ಟಿನ್ನೂ ಯಾದವ್ ಅವರ ಮನೆಗಳೂ ಒಂದಕ್ಕೊಂದು ಹೊಂದಿಕೊಂಡಿವೆ.
4. ಇದರಿಂದ ಈ ಸಂಶಯ ಇನ್ನಷ್ಟು ಬಲಗೊಳ್ಳುತ್ತದೆ ಏನೆಂದರೆ, ಕಳ್ಳತನದ ಘಟನೆಯು ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಿಗೆ ಮೊದಲೇ ಯೋಜನೆಯನ್ನು ರೂಪಿಸಿ ಮಾಡಿದ ಕಳ್ಳತನವಾಗಿರಬಹುದು. ಈ 5 ಆರೋಪಿಗಳ ಮಧ್ಯೆ ಮೊದಲಿನಿಂದಲೂ ಏನಾದರೂ ಸಂಭಾಷಣೆ ನಡೆಯುತ್ತಿತ್ತೇ? ಯಾವುದಾದರೂ ವಿಶಿಷ್ಟ ಗುಂಪಿನ ಭಾಗವಾಗಿದ್ದರೇ? ಮತ್ತು ಮಂದಿರದ ಕಾಣಿಕೆಯ ಹಣವನ್ನು ಕಳ್ಳತನ ಮಾಡುವ ಈ ವಿಧಾನವನ್ನೂ ಅವರೇ ಒಟ್ಟಾಗಿ ಸೇರಿ ನಿರ್ಧರಿಸಿದ್ದರೇ? ಈ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
೫. ಪೂರ್ಣ ಷಡ್ಯಂತ್ರದ ಚಿತ್ರಣವು ಸ್ಪಷ್ಟವಾಗಲು, ಪೊಲೀಸರು ಈಗ ಅವರ ಮೊಬೈಲ್ ಲೊಕೇಶನ್, ಪರಸ್ಪರರ ನಡುವಿನ ಸಂಭಾಷಣೆ ಮತ್ತು ಹಳೆಯ ಸಂಬಂಧಗಳ ಕುರಿತಾಗಿಯೂ ತನಿಖೆ ನಡೆಸುತ್ತಿದ್ದಾರೆ.
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!