ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು

ಇಸ್ಲಾಮಾಬಾದ್ (ಪಾಕಿಸ್ತಾನ) – ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದ ಮೂವರು ಉಗ್ರರು ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬೇರೆ ಬೇರೆ ಘಟನೆಗಳಲ್ಲಿ ನಡೆದಿರುವ ಈ ಮೂವರ ಸಾವಿಗೆ ಸದ್ಯಕ್ಕೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

1. ಮೊದಲನೆಯ ಉಗ್ರನ ಹೆಸರು ಗಾಜಿ ಮುಮ್ತಾಜ್. ಈತನನ್ನು ಲಷ್ಕರ್-ಎ-ತೊಯ್ಬಾದ ಹಿರಿಯ ಮತ್ತು ಅನುಭವಿ ಉಗ್ರ ಎಂದು ಪರಿಗಣಿಸಲಾಗಿತ್ತು. ಗಾಜಿ ಮುಮ್ತಾಜ್ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮುಮ್ತಾಜ್ ಭಾರತದಲ್ಲಿ ಲಷ್ಕರ್-ಎ-ತೊಯ್ಬಾದ ಉಗ್ರನಾಗಿ ಕೆಲಸ ಮಾಡಿದ್ದನು. ಆದ್ದರಿಂದ ಆತನಿಗೆ ‘ಗಾಜಿ’ ಎಂಬ ಪದವಿ ನೀಡಲಾಗಿತ್ತು. ಆತ ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ಅಪ್ಪರ್ ದೀರ್‌ನ ಬಾರಾಹವಾಲ್ ನಿವಾಸಿಯಾಗಿದ್ದನು. ಆತ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ಸಹಚರ ಎಂದು ಪರಿಗಣಿಸಲಾಗಿತ್ತು.

2.ಮತ್ತೊಂದು ಪ್ರಕರಣದಲ್ಲಿ, ಉಗ್ರ ಮಹಮ್ಮದ್ ಖುಜೈಮಾ ಕಾಸಿಮ್ ಎಂಬಾತ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಬಹಾವಲ್ಪುರದಲ್ಲಿ ವಾಹನ ಡಿಕ್ಕಿ ಹೊಡೆದ ಅಪಘಾತದಲ್ಲಿ ಆತ ಮೃತಪಟ್ಟಿದ್ದಾನೆ. ಕಾಸಿಮ್ ಲಷ್ಕರ್‌ನ ಹಿರಿಯ ನಾಯಕ ಮಹಮ್ಮದ್ ಯಾಕೂಬ್‌ನ ಸಹೋದರ ಎಂದು ಹೇಳಲಾಗುತ್ತಿದೆ.

3. ಮೂರನೆಯ ಉಗ್ರನ ಸಂಶಯಾಸ್ಪದ ಮೃತ್ಯುವಿನ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಬೆಳಕಿಗೆ ಬಂದಿಲ್ಲ.

4.ಮೂರನೆಯ ಉಗ್ರನ ಹೆಸರು ಖಾಲಿದ್ ಬಶೀರ್. ಈತನೂ ಕೂಡ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.