ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!

ಮುಳಗುಂದ – ಇಲ್ಲಿನ ಬಾಸಾಪುರ ಗ್ರಾಮದಲ್ಲಿ ಒಬ್ಬನೇ ಒಬ್ಬ ಮುಸ್ಲಿಮರಿಲ್ಲ, ಆದರೂ ಕೂಡ ನೂರಾರು ವರ್ಷಗಳಿಂದ ಹಿಂದೂಗಳು ಶಿಯಾ ಮುಸ್ಲಿಮರ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಮೊಹರಂ ಹತ್ತಿರ ಬರುತ್ತಿದ್ದಂತೆ ಗ್ರಾಮದ ಪ್ರತಿಯೊಂದು ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಹಬ್ಬ ಆಚರಿಸಲಾಗುತ್ತದೆ. ಗ್ರಾಮದಲ್ಲಿ ‘ಪಂಜಾ’ (ಅಲಾಯಿ ದೇವರು) ವನ್ನು ಪ್ರತಿಷ್ಠಾಪಿಸಿ ಸತತ 5 ದಿನಗಳ ಕಾಲ ಪೂಜೆ ಮಾಡಲಾಗುತ್ತದೆ. ಮೊಹರಂನ ಕೊನೆಯ ದಿನದಂದು ಪಂಜಾದ ಮೆರವಣಿಗೆ ನಡೆಸಿ ಅದನ್ನು ವಿಸರ್ಜನೆ ಮಾಡಲಾಗುತ್ತದೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದಿರುವುದರಿಂದ ಅವರ ಧಾರ್ಮಿಕ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದಕ್ಕೆ ಇದು ಅತ್ಯಂತ ದೊಡ್ಡ ಉದಾಹರಣೆಯಾಗಿದೆ! ಹಿಂದೂ ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಇಂತಹ ಹಿಂದೂಗಳಿಗೆ ತಕ್ಷಣ ಪ್ರಬೋಧನೆ (ಜಾಗೃತಿ) ಮಾಡಿ, ಈ ಮಾನಸಿಕತೆಯಿಂದ ಹೊರತರಬೇಕು!