ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿಷಯವಾಗಿ ನ್ಯಾಯಾಲಯದ ಆದೇಶದ ಕಾರ್ಯಾಚರಣೆ ನಡೆಸಲಾಗುವುದು ! – ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು – ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ನೀಡಲಾಗುವ ಅಜಾನಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲವು ಆದೇಶಗಳಿದ್ದು ಅದು ಎಲ್ಲರಿಗೂ ಅನ್ವಯವಾಗುತ್ತದೆ. ಅವುಗಳ ಕಾರ್ಯಾಚರಣೆಯನ್ನು ಸೌಹಾರ್ದಪೂರ್ಣ ವಾತಾವರಣದಲ್ಲಿ ಮಾಡಬೇಕು. ಬೇರೆ ರಾಜ್ಯಗಳಲ್ಲಿ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ, ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ಸಿನ ಮುಸಲ್ಮಾನ ನೇತಾರರ ಎದುರು ಪ್ರತಿಪಾದಿಸಿದರು. ಮಸೀದಿಗಳ ಮೇಲಿನ ಧ್ವನಿವರ್ಧಕದ ಕಾನೂನುಬಾಹಿರ ಉಪಯೋಗದ ವಿರುದ್ಧ ಕರ್ನಾಟಕದಲ್ಲಿ ಕೆಲವು ಹಿಂದೂ ಸಂಘಟನೆಗಳು ಅಭಿಯಾನವನ್ನು ಆರಂಭಿಸಿವೆ. ಇದನ್ನು ವಿರೋಧಿಸಿ ಈ ಮುಸಲ್ಮಾನ ನೇತಾರರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು.

(ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಈ ಮುಸಲ್ಮಾನ ನಾಯಕರು ಮಸೀದಿಗಳಿಗೆ ಹೋಗಿ ಅದರ ಪಾಲನೆಗಾಗಿ ಏಕೆ ಪ್ರಯತ್ನಿಸಲಿಲ್ಲ ? ಎಂಬುದರ ಉತ್ತರವನ್ನು ಅವರು ನೀಡಬೇಕು. ಈಗ ಈ ಆದೇಶದ ಪಾಲನೆಗಾಗಿ ಜನತೆಯು ಆಂದೋಲನ ನಡೆಸಿರುವಾಗ ಅದನ್ನು ವಿರೋಧಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ಸಿನ ಮುಸಲ್ಮಾನ ನೇತಾರರು ಮುಂಚೂಣಿಯಲ್ಲಿದ್ದಾರೆ. ಇದರಿಂದ ಅವರಿಗೆ ನ್ಯಾಯಾಲಯದ ಬಗ್ಗೆ ಎಷ್ಟು ಗೌರವವಿದೆ ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು) ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಪೊಲೀಸ್, ಗೃಹ ಇಲಾಖೆ ಮತ್ತು ಕಾನೂನು ಸಚಿವಾಲಯದ ಉಚ್ಚ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಸಂಪಾದಕೀಯ ನಿಲುವು

ಈ ಕಾರ್ಯಾಚರಣೆಯನ್ನು ಯಾರಾದರೂ ಆಂದೋಲನ ಮಾಡಿದ ನಂತರ ಮಾಡದೇ ಅದು ನ್ಯಾಯಾಲಯದ ಆದೇಶದ ನಂತರ ತತ್ಪರತೆಯಿಂದ ನಡೆಯಬೇಕು, ಎಂದು ಜನರಿಗೆ ಅನಿಸುತ್ತದೆ !