ಯುಗಾದಿ ನಿಮಿತ್ತ ಬ್ರಹ್ಮಧ್ವಜಾರೋಹಣದೊಂದಿಗೆ ರಾಮರಾಜ್ಯದ ಸ್ಥಾಪನೆಗೆ ಸಂಕಲ್ಪ !

ಸದ್ಯ ರಾಜ್ಯದಾದ್ಯಂತ ಬೆಲೆ ಏರಿಕೆ, ಭ್ರಷ್ಟಚಾರ, ಓಲೈಕೆ, ಅಪರಾಧ ಮತ್ತು ಅತ್ಯಾಚಾರ, ಹಿಂದೂ ಸಮಾಜದ ಮೇಲೆ ಆಘಾತದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಹೇಗೆ ಪ್ರಭು ಶ್ರೀರಾಮನ ಸಮಯದಲ್ಲಿ ಆದರ್ಶ ರಾಜ್ಯಾಡಳಿತವಿತ್ತು, ಅದೇ ರೀತಿಯ ರಾಮರಾಜ್ಯವು ಶೀಘ್ರದಲ್ಲಿ ಸ್ಥಾಪನೆಯಾಗಬೇಕು.

ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

ಹಬ್ಬವನ್ನು ಶಾಸ್ತ್ರಕ್ಕನುಸಾರ ಏಕೆ ಆಚರಿಸಬೇಕು ? , ನವರಾತ್ರಿ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳ ಮಹತ್ವವೇನು ? 

ಯುಗಾದಿಯ ನಿಮಿತ್ತ ಭಾರತೀಯರು ‘ವಸುಧೈವ ಕುಟುಂಬಕಮ್’ (ಸಂಪೂರ್ಣ ಪೃಥ್ವಿ ಒಂದು ಕುಟುಂಬ) ಎಂಬ ಸಂಕಲ್ಪವನ್ನು ಮಾಡಬೇಕು !

ಚೈತ್ರ ಶುಕ್ಲ ಪಾಡ್ಯವನ್ನು ‘ಯುಗಾದಿ’ ಎಂದು ಕರೆಯಲಾಗುತ್ತದೆ. ಮನೆಮನೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಬೆಳಗ್ಗಿನಿಂದಲೇ  ಮಂಗಳವಾದ್ಯಗಳ ಸ್ವರಗಳು ಮೊಳಗುತ್ತಿರುತ್ತವೆ. ಮಹಿಳೆಯರು ಮನೆಯ ಮುಂದೆ ಸುಂದರ ರಂಗೋಲಿಗಳನ್ನು ಹಾಕುತ್ತಿದ್ದರೆ, ಪುರುಷರು ವಿಜಯ ಮತ್ತು ಮಂಗಲದ ಸಂಕೇತವಾದ ಬ್ರಹ್ಮಧ್ವಜವನ್ನು ನಿಲ್ಲಿಸುವಲ್ಲಿ ಮಗ್ನರಾಗಿರುತ್ತಾರೆ.

ಯುಗಾದಿ ಹಬ್ಬದಂದು ವರ್ಷಫಲ ಶ್ರವಣ ಮಾಡುವುದರ ಲಾಭ !

ಬರಗಾಲ ಬೀಳುವುದಿದ್ದರೆ, ಧಾನ್ಯ ಮತ್ತು ಮೇವುಗಳ ಮಿತವ್ಯಯ ಮಾಡಿ ಅಥವಾ ಯಾವ ದೇಶಗಳಲ್ಲಿ ಸಮೃದ್ಧಿ ಆಗುವುದಿದ್ದರೆ ಅಥವಾ ಆಗಿದ್ದರೆ ಅಲ್ಲಿಂದ ಧಾನ್ಯ, ಮೇವು ತಂದು ಸಂಗ್ರಹಿಸಿಡಬಹುದು ಮತ್ತು ಅಡಚಣೆಯ ಸಮಯಕ್ಕಾಗಿ ವ್ಯವಸ್ಥೆ ಮಾಡಿ ಇಡಬಹುದು.

ಯುಗಾದಿ ಆಚರಣೆಯ ಬಗ್ಗೆ ನಿಮಗಿದು ತಿಳಿದಿದೆಯೇ ?

ಯುಗಾದಿ ಹಬ್ಬದ ದಿನದಂದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ (ಪಾನಕ) ಮಾಡುವುದು ಮತ್ತು ನೀರಿನಿಂದ ತುಂಬಿದ ಮಡಕೆಯನ್ನು ದಾನ ಮಾಡುವುದು ಒಂದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಈ ಶುಭ ದಿನದಂದು ವಿವಿಧೆಡೆ ಮುಂಜಾನೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಗುತ್ತದೆ.

ಯುಗಾದಿಯ ಮಹತ್ವ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ನಂಬಿಕೆಗಳು

ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದ ದಿನದಿಂದ ಜೀವನಮಾನವು ಪ್ರಾರಂಭವಾಯಿತು. ಆದ್ದರಿಂದ ಚೈತ್ರದಿಂದ ಹೊಸ ವರ್ಷವನ್ನು ಪರಿಗಣಿಸಲಾಗುತ್ತದೆ. ಚೈತ್ರ ಪಾಡ್ಯದಂದು ದುರ್ಗಾದೇವಿಯು ಪ್ರಕಟಗೊಂಡಳು ಮತ್ತು ದುರ್ಗಾದೇವಿಯ ಸೂಚನೆಯ ಮೇರೆಗೆ ಬ್ರಹ್ಮದೇವನು ಈ ದಿನದಂದು ಸೃಷ್ಟಿಯ ರಚನೆಯನ್ನು ಮಾಡಿದನು.

ಹಿಂದೂ ಕಾಲಗಣನೆಗನುಸಾರ ಯುಗಾದಿಯಿಂದಆರಂಭವಾಗಲಿರುವ ಕಲಿಯುಗ ವರ್ಷ ೫೧೨೮ ರ (ವರ್ಷ ೨೦೨೬ ರ) ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅದರ ವಿವಿಧ ಮಹತ್ವಗಳು !

ಕಾಲದ ಸಾಮರ್ಥ್ಯವು ಅಪಾರವಾಗಿದೆ. ಪ್ರತಿಕೂಲ ಕಾಲದಲ್ಲಿ ಅತ್ಯಂತ ಬುದ್ಧಿಶಕ್ತಿ, ಸಾಮರ್ಥ್ಯ ಮತ್ತು ಕೀರ್ತಿ ಹೊಂದಿರುವ ವ್ಯಕ್ತಿಗಳೂ ಸೋಲನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧ, ಗುರುಕೃಪೆ ಇದ್ದರೆ ಶಿಷ್ಯನು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು

ಯುಗಾದಿ

ಬ್ರಹ್ಮದೇವನು ಇದೇ ದಿನ ವಿಶ್ವವನ್ನು ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಶಾಲಿವಾಹನ ಎಂಬ ಹೆಸರಿನ ಕುಂಬಾರನ ಮಗನು ಶಕರನ್ನು ಸೋಲಿಸಲು ೬ ಸಾವಿರ ಮಣ್ಣಿನ ಸೈನಿಕರ ವಿಗ್ರಹಗಳನ್ನು ಸಿದ್ಧಮಾಡಿ ಅವುಗಳಲ್ಲಿ ಜೀವ ತುಂಬಿ ಅವರ ಸಹಾಯದಿಂದ ಇದೇ ದಿನ ಶಕರನ್ನು ಸೋಲಿಸಿದನು, ಎಂದು ಹೇಳಲಾಗುತ್ತದೆ.

ಹಿಂದೂ ರಾಷ್ಟ್ರದ ವಿಜಯದ ಧ್ವಜವನ್ನು ಏರಿಸೋಣ !

ಯುಗಾದಿ ಹಬ್ಬವೆಂದರೆ ಮಂಗಲಮಯ, ನವಚೈತನ್ಯ, ಉತ್ಸಾಹ ಮತ್ತು ಆನಂದದ ದಿನವಾಗಿದೆ. ಶ್ರೀಮಂತರಿರಲಿ ಅಥವಾ ಬಡವರಿರಲಿ, ಸಂಪೂರ್ಣ ಹಿಂದೂ ಸಮಾಜವು ತಮ್ಮ ಮನೆಯ ಮುಂದೆ ಹೊಸ ವರ್ಷದ ಬ್ರಹ್ಮಧ್ವಜವನ್ನು ನಿಲ್ಲಿಸಿ ಈ ಹಬ್ಬವನ್ನು ಆಚರಿಸುತ್ತದೆ.

ಭಾರತದಲ್ಲಿ ಮತ್ತೊಮ್ಮೆ ‘ರಾಮರಾಜ್ಯ’ದ ಬ್ರಹ್ಮಧ್ವಜವನ್ನು ಏರಿಸಲು ಕಟಿಬದ್ಧರಾಗೋಣ !

ರಾಮರಾಜ್ಯ ಎಂದರೆ ಆಧ್ಯಾತ್ಮಿಕ ಶ್ರದ್ಧೆಯು ಉತ್ತಮ ಆಡಳಿತದಲ್ಲಿ ಪ್ರತಿಫಲಿಸುವಂತಹ ರಾಜ್ಯ. ಭಾರತದಲ್ಲಿ ಆದರ್ಶ ರಾಜ, ಸಾತ್ತ್ವಿಕ ಪ್ರಜೆಗಳು, ಉತ್ತಮ ಆಡಳಿತ ಮತ್ತು ಸುರಕ್ಷಿತ ರಾಮರಾಜ್ಯವನ್ನು ತರುವುದೇ ನಿಜವಾದ ಕಾಲಾನುಸಾರ ಧರ್ಮಸಂಸ್ಥಾಪನೆಯಾಗಿದೆ.