ವರ್ಷಾರಂಭದಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿ ಸ್ವಭಾಷಾಭಿಮಾನವನ್ನು ಕಾಪಾಡಿರಿ !

ಭಾಷಾಶುದ್ಧಿಯ ವ್ರತವನ್ನು ಅಂಗೀಕರಿಸುವುದು ಎಂದರೆ ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ.

ಯುಗಾದಿಯ ಪ್ರಾಚೀನತೆಯನ್ನು ಹೇಳುವ ಕೆಲವು ಕಥೆಗಳು

ಮಹಾಭಾರತದ ಖಿಲಪರ್ವದಲ್ಲಿ ಕೃಷ್ಣನು ಇಂದ್ರನ ಕ್ರೋಧವನ್ನು ಪರಿಗಣಿಸದೇ ವಾರ್ಷಿಕ ಶಕ್ರೋತ್ಸವ (ಇಂದ್ರೋತ್ಸವ)ವನ್ನು ಸ್ಥಗಿತಗೊಳಿಸುವಂತೆ ಉಪದೇಶಿಸುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಈ ಉತ್ಸವವನ್ನು ವರ್ಷದ ಪಾಡ್ಯದಂದು ಆಚರಿಸುವಂತೆ ತಿಳಿಸಲಾಗಿದೆ.