ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಂದ ತುಂಬಿದ ಹಿಂದೂಗಳ ಹೊಸವರ್ಷದ ಆರಂಭದಿನ ಯುಗಾದಿ

ನವಸಂವತ್ಸರ, ಅಂದರೆ ಯುಗಾದಿ ಹಬ್ಬವಾಗಿದೆ. ಈ ಶುಭ ದಿನದ ನಿಮಿತ್ತ  ನಾವು ಈ ವಾರ ಹೊಸ ವರ್ಷದ ಆರಂಭದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಯುಗಾದಿಯ ವಿ ಯದಲ್ಲಿ ಸಾಮಾನ್ಯ ಪ್ರಶ್ನೆಗಳು ಮತ್ತು ಅವುಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ನೀಡಿದ ಉತ್ತರಗಳು ಈ ಕೆಳಗಿನಂತಿವೆ.

ಪ್ರಶ್ನೆ : ವರ್ಷ ಯಾವುದೇ ಇರಲಿ, ಅದು ೧೨ ತಿಂಗಳದ್ದಾಗಿರುತ್ತದೆ. ಇದರ ಹಿಂದಿನ ಕಾರಣವೇನು ?

ಉತ್ತರ : ಯುಗಾದಿಯನ್ನುವರ್ಷ ಪ್ರತಿಪದೆ ಅಥವಾ ವರ್ಷ ದ ಆರಂಭ ಎನ್ನುತ್ತಾರೆ. ಜಾಗತಿಕ ಮಟ್ಟದಲ್ಲಿ ಇದಕ್ಕೆ ವಿವಿಧ ಹೆಸರುಗಳಿವೆ ಮತ್ತು ಅವುಗಳ ಹೊಸ ವರ್ಷದ ಆರಂಭವೂ ವಿಭಿನ್ನವಾಗಿದೆ. ಉದಾಹರಣೆಗೆ ಇಸ್ವಿ ಸನ್‌ ಜನವರಿ ೧ ರಿಂದ ಆರಂಭವಾಗುತ್ತದೆ. ಆರ್ಥಿಕ ವರ್ಷ ಏಪ್ರಿಲ್‌ದಿಂದ ಆರಂಭವಾಗುತ್ತದೆ, ವ್ಯಾಪಾರಿ ವರ್ಷ ವು ಕಾರ್ತಿಕ ಶುಕ್ಲ ಪ್ರತಿಪದೆಯಿಂದ ಆರಂಭ ವಾಗುತ್ತದೆ, ಶೈಕ್ಷಣಿಕ ವರ್ಷ ಜೂನ್‌ ತಿಂಗಳಿಂದ ಆರಂಭವಾಗುತ್ತದೆ, ಅದೇ ರೀತಿ ಹಿಂದೂ ವರ್ಷ ರಂಭವು ಚೈತ್ರ ಶುಕ್ಲ ಪಾಡ್ಯದಿಂದ ಆರಂಭವಾಗುತ್ತದೆ.

ಇವೆಲ್ಲ ವರ್ಷಗಳಲ್ಲಿ ಒಂದು ಸಮಾನ ವೈಶಿಷ್ಟ್ಯವೆಂದರೆ, ಎಲ್ಲ ವರ್ಷಗಳು ೧೨ ತಿಂಗಳುಗಳನ್ನೇ ಹೊಂದಿರುತ್ತವೆ. ವರ್ಷವು ೧೨ ತಿಂಗಳುಗಳನ್ನು ಹೊಂದಿರಬೇಕು ಎಂದು ಮೊದಲು ಯಾರು ಹೇಳಿದರು ? ಅದನ್ನು ವೇದಗಳು ಹೇಳಿವೆ. ವೇದಗಳಲ್ಲಿ ‘ದ್ವಾದಶ ಮಾಸೇಹಿ ಸಂವತ್ಸರಃ’ ಎಂದು ಹೇಳಲಾಗಿದೆ. ವೇದಗಳು ಹೇಳಿದವು ಮತ್ತು ಎಲ್ಲರೂ ಅದನ್ನು ಒಪ್ಪಿಕೊಂಡರು.

ಆಂಗ್ಲ ವರ್ಷರಂಭವನ್ನು ಜನವರಿ ಒಂದಕ್ಕೆ ಏಕೆ ಆಚರಿಸಲಾಗುತ್ತದೆ ? ಇದಕ್ಕೆ ಯಾವುದೇ ಕಾರಣವಿಲ್ಲ; ಆದರೆ ಚೈತ್ರ ಶುಕ್ಲ ಪಾಡ್ಯ ಅಂದರೆ ಯುಗಾದಿಯಂದೇ ಹೊಸ ವರ್ಷದ ಆರಂಭವಿರಲು ಕಾರಣವೇನು ? ಇದಕ್ಕೆ ವಿವಿಧ ಕಾರಣಗಳಿವೆ: ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ. ಯುಗಾದಿಗೆ ಅಂದರೆ ಚೈತ್ರ ಪಾಡ್ಯವು ಹೊಸ ವರ್ಷಾರಂಭವಾಗಿರಲು ಕಾರಣವೇನು ? ಇದನ್ನು ಈಗ ನೋಡೋಣ.

ಪ್ರಶ್ನೆ : ಚೈತ್ರ ಶುಕ್ಲ ಪ್ರತಿಪದೆಗೆ ಹಿಂದೂಗಳ ಹೊಸ ವರ್ಷ ಏಕೆ ಇರುತ್ತದೆ ? ಇದರ ಹಿಂದೆ ಏನಾದರೂ ಕಾರಣವಿದೆಯೇ ?

ಉತ್ತರ : ಭಗವದ್ಗೀತೆಯಲ್ಲಿ ಭಗವಂತನು ಹೇಳಿರುವುದೇನೆಂದರೆ, ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ.’ ಸೂರ್ಯನು ಯುಗಾದಿಯಂದು (ಪಾಡ್ಯ) ಸರಿಸುಮಾರು ವಸಂತ ಸಂಪಾತ ಬಿಂದುವಿಗೆ ಬರುತ್ತಾನೆ. ಅಂದರೆ, ಆಗಿನಿಂದ ವಸಂತ ಋತುವು ಆರಂಭವಾಗುತ್ತದೆ. ಸಂಪಾತ ಬಿಂದುವಿನ ಅರ್ಥವೇನು ? ಕ್ರಾಂತಿ ವೃತ್ತ ಮತ್ತು ವಿಷುವವೃತ್ತ, ಇವೆರಡು ವೃತ್ತಗಳು ಪರಸ್ಪರ ಭೇದಿಸುವ ಬಿಂದುವೇ ‘ಸಂಪಾತ ಬಿಂದು’ ಆಗಿರುತ್ತದೆ.

ಚೈತ್ರ ಶುಕ್ಲ ಪಾಡ್ಯ ಹೊಸ ವರ್ಷಾರಂಭಕ್ಕೆ ಐತಿಹಾಸಿಕ ಕಾರಣವಿದೆ.

ಶ್ರೀ. ರಮೇಶ ಶಿಂದೆ

೧. ಐತಿಹಾಸಿಕ ಕಾರಣಗಳು

ಈ ದಿನದಂದು ಶಕರು ಹೂಣರ ಮೇಲೆ ವಿಜಯ ಸಾಧಿಸಿದರು. ಹೂಣರು ವಿದೇಶಿ ಆಕ್ರಮಣಕಾರರಾಗಿದ್ದು ವಿನಾಶಕಾರಿಗಳಾಗಿದ್ದರು. ಆದ್ದರಿಂದ ಭಾರತ ಭೂಮಿಯಲ್ಲಿ ಈ ಆಕ್ರಮಣಕಾರರನ್ನು ಶಕರು ನಿರ್ನಾಮ ಮಾಡಿದರು. ಚಕ್ರವರ್ತಿ ಶಾಲಿವಾಹನನು ತನ್ನ ಶತ್ರುಗಳ ಮೇಲೆ ಈ ದಿನದಂದು ವಿಜಯ ಸಾಧಿಸಿದನು ಮತ್ತು ಆ ದಿನದಿಂದ ಶಾಲಿವಾಹನ ಶಕೆಯು ಆರಂಭವಾಯಿತು. ಪ್ರಭು ಶ್ರೀರಾಮನು ವಾಲಿಯನ್ನು ಇದೇ ದಿನ ವಧಿಸಿದನು. ಚೈತ್ರ ಶುಕ್ಲಪಾಡ್ಯದಂದು ವರ್ಷರಂಭ ಏಕೆ ಇರಬೇಕು ? ಇದಕ್ಕೆ ಈ ಐತಿಹಾಸಿಕ ಕಾರಣಗಳಿವೆ.

೨. ಆಧ್ಯಾತ್ಮಿಕ ಕಾರಣಗಳು

ಈಗ ನಾವು ಆಧ್ಯಾತ್ಮಿಕ ಕಾರಣಗಳನ್ನು ನೋಡೋಣ. ಇದರಲ್ಲಿ ಮೊದಲ ಆಧ್ಯಾತ್ಮಿಕ ಕಾರಣವೆಂದರೆ, ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು ಮತ್ತು ಈ ದಿನದಂದು ಸತ್ಯಯುಗವು ಆರಂಭವಾಯಿತು. ಈ ರೀತಿಯಾಗಿ, ಯುಗಾದಿಯು ಸಂಪೂರ್ಣ ವರ್ಷ ದಲ್ಲಿ ಬರುವ ಮೂರೂವರೆ ಶುಭ ಮುಹೂರ್ತಗಳಲ್ಲಿ ಒಂದಾಗಿದೆ. ಯುಗಾದಿ, ಅಕ್ಷಯತದಿಗೆ ವಿಜಯದಶಮಿ ಈ ಶುಭ ದಿನಗಳಲ್ಲಿ ತಲಾ ಒಂದು ಮತ್ತು ಕಾರ್ತಿಕ ಶುಕ್ಲ ಪಾಡ್ಯದಂದು ಅರ್ಧ ದಿನ ಈ ರೀತಿಯಾಗಿ ಮೂರೂವರೆ ಶುಭ ಮುಹೂರ್ತಗಳು ಇಡೀ ವರ್ಷದಲ್ಲಿ ಬರುತ್ತವೆ. ಈ ಶುಭ ಮುಹೂರ್ತಗಳ ವೈಶಿಷ್ಟ್ಯವೆಂದರೆ, ಇತರ ಯಾವುದೇ ದಿನದಲ್ಲಿ ಮಂಗಳ ಕಾರ್ಯವನ್ನು ಮಾಡಲು, ಮುಹೂರ್ತ ನೋಡಬೇಕಾಗುತ್ತದೆ; ಆದರೆ ಈ ದಿನದಂದು ಎಲ್ಲಾ ಘಟಿಕಗಳು ‘ಶುಭ ಮುಹೂರ್ತ’ಗಳಾಗಿರುತ್ತವೆ. ಆದ್ದರಿಂದ ಈ ದಿನ ಯಾವುದೇ ಸಮಯದಲ್ಲಿ ಮಂಗಳ ಕಾರ್ಯ ಆರಂಭಿಸಬಹುದು. ಆದ್ದರಿಂದ ಅವುಗಳನ್ನು ‘ಶುಭ ಮುಹೂರ್ತ’ಗಳು ಎಂದು ಹೇಳಲಾಗುತ್ತದೆ.

ಪ್ರಶ್ನೆ : ‘ಪ್ರಜಾಪತಿ ಲಹರಿಗಳು ಪ್ರಕ್ಷೇಪಿಸಲ್ಪಡುತ್ತವೆ’ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಏನು ಹೇಳುವಿರಿ ?

ಉತ್ತರ : ಚೈತ್ರ ಶುಕ್ಲ ಪಾಡ್ಯದಂದು ಹೊಸ ವರ್ಷದ ಆರಂಭವಾಗಲು ಒಂದು ಆಧ್ಯಾತ್ಮಿಕ ಕಾರಣವೆಂದರೆ, ಈ ದಿನದಂದು ಪ್ರಜಾಪತಿ ಲಹರಿಗಳು ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ. ಈಗ ನಾವು ಪ್ರಜಾಪತಿ ಲಹರಿಗಳು ಎಂದರೇನು ಎಂದು ತಿಳಿದು ಕೊಳ್ಳೋಣ. ನಕ್ಷತ್ರ ಲೋಕಗಳಿಂದ ೨೭ ಲಹರಿಗಳು ಪ್ರಕ್ಷೇಪಿಸಲ್ಪಡುತ್ತವೆ. ಅವುಗಳನ್ನು ವಿಭಜಿಸಿ ಒಟ್ಟು ೧೦೮ ಲಹರಿಗಳು ಭೂಮಿಗೆ ಬರುತ್ತವೆ. ಈ ೧೦೮ ಲಹರಿಗಳು ನಾಲ್ಕು ವಿಧಗಳಾಗಿವೆ. ಪ್ರಜಾಪತಿ, ಯಮ, ಸೂರ್ಯ ಮತ್ತು ಸಂಯುಕ್ತ ಲಹರಿಗಳು. ಈ ಲಹರಿಗಳಿಂದ ಭೂಮಿಯ ಮೇಲೆ ವಿವಿಧ ಪರಿಣಾಮಗಳು ಉಂಟಾಗುತ್ತವೆ. ಈ ಪರಿಣಾಮಗಳನ್ನು ನಾವು ಅರ್ಥ ಹೀಗಿದೆ.

೧. ಪ್ರಜಾಪತಿ ಲಹರಿಗಳಿಂದ ವನಸ್ಪತಿ ಸಸ್ಯಗಳಿಗೆ ಮೊಳಕೆಯೊಡೆದು ಭೂಮಿಯ ಸಾಮರ್ಥ್ಯವು ಹೆಚ್ಚಾಗುತ್ತದೆ, ಬುದ್ಧಿಯು ಪ್ರಬುದ್ಧವಾಗುತ್ತದೆ, ಬಾವಿಯಲ್ಲಿ ಹೊಸ ಜಲಮೂಲಗಳು ಸೃಷ್ಟಿಯಾಗುತ್ತವೆ, ದೇಹದಲ್ಲಿ ಕಫಪ್ರಕೋಪವಾಗುತ್ತದೆ ಇತ್ಯಾದಿ.

೨. ಯಮ ಲಹರಿಗಳಿಂದ ಮಳೆಯಾಗುವುದು, ವನಸ್ಪತಿ ಸಸ್ಯಗಳಿಗೆ ಮೊಳಕೆಯೊಡೆಯುವುದು, ಮಹಿಳೆಯರಿಗೆ ಗರ್ಭಧಾರಣೆಯಾಗು ವುದು, ಗರ್ಭವು ಚೆನ್ನಾಗಿ ಬೆಳೆಯುವುದು, ದೇಹದಲ್ಲಿ ವಾಯು ಪ್ರಕೋಪವಾಗುವುದು ಇತ್ಯಾದಿ ಪರಿಣಾಮಗಳು ಉಂಟಾಗುತ್ತವೆ.

೩. ಸೂರ್ಯ ಲಹರಿಗಳಿಂದ ಭೂಮಿಯಲ್ಲಿ ಉಷ್ಣತೆ ಹೆಚ್ಚಾಗಿ ಎಲ್ಲ ಸಸ್ಯಗಳು ಒಣಗಿ ಹೋಗುತ್ತವೆ, ಚರ್ಮರೋಗಗಳು ಬರುತ್ತವೆ, ಭೂಮಿಯ ಉತ್ಪಾದನಾ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಪಿತ್ತಪ್ರಕೋಪವಾಗಲು ಆರಂಭವಾಗುತ್ತದೆ.

೪. ಸಂಯುಕ್ತ ಲಹರಿಗಳು ಅಂದರೆ ಪ್ರಜಾಪತಿ, ಸೂರ್ಯ ಮತ್ತು ಯಮ ಈ ಮೂರೂ ಲಹರಿಗಳ ಮಿಶ್ರಣವಾಗಿದೆ. ಯಾವ ಸಂಯುಕ್ತ ಲಹರಿಗಳಲ್ಲಿ ಪ್ರಜಾಪತಿ ಲಹರಿಗಳ ಪ್ರಮಾಣವು ಹೆಚ್ಚಾಗಿರುತ್ತದೆಯೋ, ಅವುಗಳನ್ನು ಪ್ರಜಾಪತಿ ಸಂಯುಕ್ತ ಲಹರಿಗಳು ಎಂದು ಕರೆಯುತ್ತಾರೆ. ಈ ರೀತಿಯಾಗಿ ಸೂರ್ಯಸಂಯುಕ್ತ ಮತ್ತು ಯಮಸಂಯುಕ್ತ ಲಹರಿಗಳು ಕೂಡ ಇರುತ್ತವೆ.

ಚೈತ್ರ ಮಾಸದ ಚೈತ್ರ ಶುಕ್ಲ ಪಾಡ್ಯದಂದು ಪ್ರಜಾಪತಿ ಸಂಯುಕ್ತ ಲಹರಿಗಳು ಮತ್ತು ಪ್ರಜಾಪತಿ ಲಹರಿಗಳು ಅತ್ಯಧಿಕ ಪ್ರಮಾಣದಲ್ಲಿ ಭೂಮಿಗೆ ಬರುತ್ತವೆ. ಈ ದಿನ ಸತ್ತ್ವಗುಣವು ಅತ್ಯಧಿಕ ಪ್ರಮಾಣದಲ್ಲಿ ಭೂಮಿಗೆ ಬರುವುದರಿಂದ ಚೈತ್ರ ಶುಕ್ಲ ಪಾಡ್ಯವು ಆಧ್ಯಾತ್ಮಿಕ ದೃಷ್ಟಿಯಿಂದ ಹೊಸ ವರ್ಷಾರಂಭಕ್ಕೆ ಯೋಗ್ಯವಾಗಿದೆ.

ಪ್ರಶ್ನೆ : ಯುಗಾದಿಯಿಂದ ಹೆಚ್ಚಿನ ಲಾಭ ಪಡೆಯಲು ಅದನ್ನು ಯಾವ ರೀತಿ ಆಚರಿಸಬೇಕು ?

ಉತ್ತರ : ಈಗ ನಾವು ಯುಗಾದಿಯನ್ನು ಪ್ರತ್ಯಕ್ಷವಾಗಿ ಯಾವ ರೀತಿ ಆಚರಿಸಲಾಗುತ್ತದೆ ಎಂದು ಅರ್ಥಮಾಡಿಕೊಳ್ಳೋಣ.

೧. ಈ ದಿನ ಬೆಳಿಗ್ಗೆ ಬೇಗ ಎದ್ದು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನ ಮತ್ತು ಬ್ರಹ್ಮಧ್ವಜದ ಪೂಜೆ ಮಾಡುವ ಮೊದಲು ದೇಶ-ಕಾಲದ ಕಥನವನ್ನು ಮಾಡಬೇಕು. ದೇಶ-ಕಾಲಕಥನ ಮಾಡುವ ನಮ್ಮ ಪದ್ಧತಿಯು ವಿಶೇಷವಾದುದಾಗಿದೆ. ಇದರಲ್ಲಿ ಬ್ರಹ್ಮದೇವರ ಜನ್ಮವಾದಾಗಿನಿಂದ ಇಂದಿನವರೆಗೆ ಎಷ್ಟು ವರ್ಷಗಳು ? ಎಷ್ಟು ಯುಗಗಳಾಗಿವೆ ? ಎಂಬುದನ್ನು ಹೇಳಲಾಗುತ್ತದೆ. ದೇಶ – ಕಾಲದ ಕಥನ ಮಾಡುವುದರಿಂದ ಈ ಅಗಾಧ ಕಾಲದ ಮುಂದೆ ನಾವು ಎಷ್ಟು ಕ್ಷುದ್ರರು ಎಂದು ನಮಗೆ ಅರಿವಾಗುತ್ತದೆ. ಇದರಿಂದ ಅಹಂಕಾರ ಕಡಿಮೆಯಾಗಲು ಸಹಾಯವಾಗುತ್ತದೆ.

೨. ಈ ದಿನದ ಎರಡನೇ ಕಾರ್ಯವೆಂದರೆ ಬಾಗಿಲಿಗೆ ತೋರಣ ಕಟ್ಟುವುದು. ಬ್ರಹ್ಮಧ್ವಜ ಏರಿಸುವ ಮೊದಲು ಮಾವಿನ ಎಲೆಗಳನ್ನು ಕೆಂಪು ಹೂವುಗಳೊಂದಿಗೆ ದಾರದಲ್ಲಿ ಪೋಣಿಸಿ ತೋರಣ ಮಾಡಿ ಮನೆ ಬಾಗಿಲಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣವು ಶುಭ ಸೂಚಕವಾಗಿದೆ. ಬಾಗಿಲಿಗೆ ತೋರಣ ಕಟ್ಟುವುದರಿಂದ ದೇವತೆಗಳ ಗಂಧಲಹರಿಗಳು ವಾಸ್ತುವಿನಲ್ಲಿ ಆಕರ್ಷಿತಗೊಳ್ಳುತ್ತವೆ. ಈ ದಿನ ಮಾಡಬೇಕಾದ ಇನ್ನೊಂದು ಕಾರ್ಯವೆಂದರೆ ನಿತ್ಯ ಪೂಜೆ ಮಾಡುವುದು. ಮನೆಯ ಸಂಪ್ರದಾಯದಂತೆ ನಿಯಮಿತವಾಗಿ ನಡೆಯುವ ನಿತ್ಯ ದೇವತಾ ಪೂಜೆಯನ್ನು ಮಾಡಬೇಕು. ಕೆಲವರು ಈ ದಿನ ‘ಸಂವತ್ಸರ ಪೂಜೆ’ಯನ್ನು ಸಹ ಮಾಡುತ್ತಾರೆ.

ಇದಾದ ನಂತರ ಈ ದಿನದ ಮುಂದಿನ ಕಾರ್ಯವೆಂದರೆ ಬ್ರಹ್ಮಧ್ವಜ ನಿಲ್ಲಿಸಿ ಪೂಜೆ ಮಾಡುವುದು. ಪಾಡ್ಯದ ದಿನ ಸೂರ್ಯೋದಯದ ಮೊದಲು ಪ್ರವೇಶದ್ವಾರದ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿ ಬಿಡಿಸಬೇಕು. ಪ್ರವೇಶದ್ವಾರದ ಬಲಭಾಗದಲ್ಲಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು. ಎಲ್ಲಿ ಬ್ರಹ್ಮಧ್ವಜವನ್ನು ಸ್ಥಾಪಿಸುತ್ತಾರೋ, ಅದರ ಮುಂದೆ ಸುಂದರವಾದ ರಂಗೋಲಿಯನ್ನು ಬಿಡಿಸಬೇಕು.

ಬ್ರಹ್ಮಧ್ವಜ ಸ್ಥಾಪಿಸಲು ಬಿದಿರಿನ ಕೋಲು, ಸಕ್ಕರೆಯ ಬತ್ತಾಸಿನ ಹಾರ, ಹಸಿರು ಅಥವಾ ಹಳದಿ ಬಣ್ಣದ ಝರಿ ಅಂಚಿನ ವಸ್ತ್ರ, ಮಾವಿನ ಎಲೆಗಳ ಚಿಗುರು, ಬೇವಿನ ಎಲೆಗಳು ಅಥವಾ ಬೇವಿನ ಹೂವಿನ ಚಿಗುರು, ಬ್ರಹ್ಮಧ್ವಜ ಸ್ಥಾಪಿಸಲು ಮಣೆ, ಕಲಶ ಮತ್ತು ನಿತ್ಯ ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು.

ಈಗ ಬ್ರಹ್ಮಧ್ವಜ ಸ್ಥಾಪಿಸುವುದು ಹೇಗೆ ? ಇದರ ವಿಧಾನವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

೧. ಬಿದಿರಿನ ಎತ್ತರದ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಝರಿ ಅಂಚಿನ ವಸ್ತ್ರವನ್ನು ಕಟ್ಟಬೇಕು. ವಸ್ತ್ರ ಕಟ್ಟುವಾಗ ಅದರ ನೆರಿಗೆಗಳನ್ನು ಮಾಡಿ ಕಟ್ಟಬೇಕು.

೨. ವಸ್ತ್ರದ ಮೇಲೆ ಬೇವಿನ ಚಿಗುರು ಅಥವಾ ಹೂವಿನ ಚಿಗುರು ಮತ್ತು ಮಾವಿನ ಎಲೆಗಳ ಚಿಗುರನ್ನು ಕಟ್ಟಬೇಕು. ನಂತರ ಸಕ್ಕರೆಯ ಬತ್ತಾಸಿನ ಹಾರವನ್ನು ಕಟ್ಟಬೇಕು. ಅದರ ಮೇಲೆ ಕೆಂಪು ಹೂವುಗಳ ಹಾರವನ್ನು ಕಟ್ಟಬೇಕು.

೩. ಕಲಶದ ಮೇಲೆ ಬೆರಳಿನಿಂದ ಒದ್ದೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಿ ಕಲಶವನ್ನು ಬಿದಿರಿನ ಕೋಲಿನ ತುದಿಗೆ ಬೋರಲು ಹಾಕಬೇಕು. ಈ ರೀತಿ ಬ್ರಹ್ಮಧ್ವಜವನ್ನು ಅಲಂಕರಿಸಬೇಕು. ನಂತರ ಈ ಬ್ರಹ್ಮಧ್ವಜವನ್ನು ಚಿಕ್ಕ ಮಣೆಯ ಮೇಲೆ ಸ್ಥಾಪಿಸಬೇಕು.

೪. ಈ ಬ್ರಹ್ಮಧ್ವಜವನ್ನು ‘ಬ್ರಹ್ಮಧ್ವಜಾಯ ನಮಃ’ ಎಂದು ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮಧ್ವಜಕ್ಕೆ ಅರಿಶಿನ ವನ್ನು ಅರ್ಪಿಸಬೇಕು. ನಂತರ ಕುಂಕುಮವನ್ನು ಅರ್ಪಿಸಬೇಕು. ಅಕ್ಷತೆ ಮತ್ತು ಹೂಗಳನ್ನು ಅರ್ಪಿಸಿ ಧೂಪವನ್ನು ತೋರಿಸಬೇಕು ಮತ್ತು ನೀಲಾಂಜನದಿಂದ ಆರತಿ ಮಾಡಬೇಕು.

೫. ಪೂಜೆಯ ನಂತರ ಪ್ರಾರ್ಥನೆ ಮಾಡಬೇಕು –

‘ಹೇ ಬ್ರಹ್ಮದೇವಾ, ಹೇ ವಿಷ್ಣು, ಈ ಬ್ರಹ್ಮಧ್ವಜದ ಮೂಲಕ ವಾತಾವರಣದ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸಲು ಸಾಧ್ಯವಾಗಲಿ. ಇದರಿಂದ ದೊರೆಯುವ ಶಕ್ತಿಯಲ್ಲಿರುವ ಚೈತನ್ಯವು ಸದಾ ನನ್ನಲ್ಲಿ ಸ್ಥಿರವಾಗಿರಲಿ. ನನಗೆ ದೊರೆಯುವ ಶಕ್ತಿಯು ನನ್ನಿಂದ ಸಾಧನೆ ಮಾಡಲಿಕ್ಕಾಗಿಯೇ ಉಪಯೋಗವಾಗಲಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ !’

ಇದಾದ ನಂತರ ಬ್ರಹ್ಮಧ್ವಜಕ್ಕೆ ಬೇವಿನ ಎಲೆಗಳ ನೈವೇದ್ಯವನ್ನು ಅರ್ಪಿಸಬೇಕು. ಬ್ರಹ್ಮಧ್ವಜವು ವಿಜಯದ ಸಂಕೇತವಾಗಿದೆ. ರಾವಣನನ್ನು ವಧಿಸಿ ಹಿಂದಿರುಗಿದ ಪ್ರಭು ಶ್ರೀರಾಮನನ್ನು ಅಯೋಧ್ಯೆಯ ನಿವಾಸಿಗಳು ಬ್ರಹ್ಮಧ್ವಜಗಳನ್ನು ಸ್ಥಾಪಿಸಿ ಸ್ವಾಗತಿಸಿದರು. ಯುಗಾದಿಯ ದಿನದಂದು ಮಾಡಬೇಕಾದ ಇನ್ನೊಂದು ಮುಖ್ಯ ಕಾರ್ಯವೆಂದರೆ ಪಂಚಾಂಗ ಶ್ರವಣ ಮಾಡುವುದು. ಈ ದಿನ ಹೊಸ ಪಂಚಾಂಗ ವನ್ನು ತಂದು ಅದನ್ನು ಕೇಳಬೇಕು. ಪಂಚಾಂಗ ಶ್ರವಣ ಮಾಡುವುದರಿಂದ ಗಂಗಾಸ್ನಾನದ ಫಲ ಸಿಗುತ್ತದೆ. ಯುಗಾದಿಯ ದಿನ ಮಾಡಬೇಕಾದ ಇನ್ನೊಂದು ಮುಖ್ಯ ಕಾರ್ಯವೆಂದರೆ ಬೇವಿನ ಪ್ರಸಾದವನ್ನು ಸ್ವೀಕರಿಸುವುದು. ಈ ಬೇವಿನ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ ? ಎಂಬುದನ್ನು ಸಹ ತಿಳಿದುಕೊಳ್ಳೋಣ.

ಪ್ರಸಾದಕ್ಕೆ ಬೇಕಾಗುವ ಸಾಮಗ್ರಿಗಳು

ಬೇವಿನ ಹೂವು ಮತ್ತು ಎಳೆಯ ಎಲೆಗಳು, ನೆನೆಸಿದ ಕಡಲೆ ಬೇಳೆ ಅಥವಾ ನೆನೆಸಿದ ಕಡಲೆ, ಜೇನುತುಪ್ಪ, ಜೀರಿಗೆ ಮತ್ತು ಇಂಗು.

ಪ್ರಸಾದ ತಯಾರಿಸುವ ವಿಧಾನ

ಬೇವಿನ ಹೂವು ಮತ್ತು ೧೦-೧೨ ಎಳೆಯ ಎಲೆಗಳು, ೪ ಚಮಚ ನೆನೆಸಿದ ಬೇಳೆ ಅಥವಾ ನೆನೆಸಿದ ಕಡಲೆ, ಒಂದು ಚಮಚ ಜೇನುತುಪ್ಪ, ಒಂದು ಚಮಚ ಜೀರಿಗೆ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಒಟ್ಟುಗೂಡಿಸಿ ರುಬ್ಬಬೇಕು ಮತ್ತು ಪ್ರಸಾದವನ್ನು ತಯಾರಿಸಬೇಕು. ಆ ಪ್ರಸಾದವನ್ನು ಎಲ್ಲರಿಗೂ ಹಂಚಬೇಕು.

ಬೇವಿನ ಗಿಡದಲ್ಲಿ ಪ್ರಜಾಪತಿ ಲಹರಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಬೇವಿನ ಪ್ರಸಾದವನ್ನು ಸ್ವೀಕರಿಸಲಾಗುತ್ತದೆ. ಈ ದಿನ ಹೊಲದಲ್ಲಿ ನೇಗಿಲು ಉಳಬೇಕು. ಇದರಿಂದ ಭೂಮಿಯ ಕೆಳಗಿನ ಪದರವು ಮೇಲೆ ಬರುತ್ತದೆ. ಪ್ರಜಾಪತಿ ಲಹರಿಗಳ ಸಂಸ್ಕಾರವು ಈ ಮಣ್ಣಿನ ಮೇಲೆ ಆಗುತ್ತದೆ ಮತ್ತು ಮಣ್ಣಿನಲ್ಲಿ ಬೀಜ ಮೊಳಕೆಯೊಡೆಯುವ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಈ ದಿನ ಕೃಷಿ ಉಪಕರಣಗಳು ಮತ್ತು ಎತ್ತುಗಳ ಮೇಲೆ ಮಂತ್ರಿಸಿದ ಅಕ್ಷತೆಯನ್ನು ಅರ್ಪಿಸಬೇಕು. ಕೃಷಿ ಕೆಲಸ ಮಾಡುವವರಿಗೆ ಉತ್ತಮ ವಸ್ತ್ರಗಳನ್ನು ನೀಡಬೇಕು. ಅದರೊಂದಿಗೆ ಇತರ ದಾನ ಧರ್ಮಗಳನ್ನು ಸಹ ಮಾಡಬೇಕು. ಮಂಗಳಕರ ಹಾಡುಗಳನ್ನು ಹಾಡಬೇಕು. ಉದಾಹರಣೆಗೆ, ಅದನ್ನು ಕೇಳಿದ ನಂತರ ಇತರ ಸುಖದಾಯಕ ಕಾರ್ಯಗಳನ್ನು ಸಹ ಮಾಡಬೇಕು. ಸೂರ್ಯಾಸ್ತದ ಸಮಯದಲ್ಲಿ ನಾವು ಗುಡಿಯನ್ನು ಕೆಳಗಿಳಿಸಬೇಕು.

ಸೂರ್ಯಾಸ್ತದ ನಂತರ ತಕ್ಷಣ ಬ್ರಹ್ಮಧ್ವಜವನ್ನು ಕೆಳಗಿಳಿಸಿ

ಇಡಬೇಕು. ಯಾವ ಭಾವದಿಂದ ಬ್ರಹ್ಮಧ್ವಜ ಸ್ಥಾಪಿಸಲಾಗುತ್ತದೆಯೋ, ಅದೇ ಭಾವದಿಂದ ಬ್ರಹ್ಮಧ್ವಜವನ್ನು ಕೆಳಗಿಳಿಸುವುದರಿಂದ ಚೈತನ್ಯ ಸಿಗುತ್ತದೆ. ಬ್ರಹ್ಮಧ್ವಜವನ್ನು ಕೆಳಗಿಳಿಸುವಾಗ ಕುಟುಂಬದ ಮುಖ್ಯಸ್ಥರು ಬ್ರಹ್ಮಧ್ವಜಕ್ಕೆ ಅರಿಶಿನ ಕುಂಕುಮವನ್ನು ಅರ್ಪಿಸಬೇಕು ಮತ್ತು ತದನಂತರ ಬ್ರಹ್ಮಧ್ವಜಕ್ಕೆ ನಮಸ್ಕಾರ ಮಾಡಬೇಕು. ನಂತರ ಬೆಲ್ಲ ಅಥವಾ ಸಿಹಿ ತಿಂಡಿಯ ನೈವೇದ್ಯವನ್ನು ಅರ್ಪಿಸಬೇಕು. ನಂತರ ಎಲ್ಲರೂ ಸೇರಿ ಈ ಕೆಳಗಿನಂತೆ ಪ್ರಾರ್ಥನೆ ಮಾಡಬೇಕು.

‘ಹೇ ಬ್ರಹ್ಮದೇವಾ, ಹೇ ವಿಷ್ಣು , ಇಂದು ಇಡೀ ದಿನ ಈ ಬ್ರಹ್ಮಧ್ವಜದಲ್ಲಿ ಯಾವ ಶಕ್ತಿ ಸಂಗ್ರಹವಾಗಿದೆಯೋ, ಅದು ನನಗೆ ದೊರೆಯಲಿ. ಈ ಶಕ್ತಿಯು ರಾಷ್ಟ್ರ ಮತ್ತು ಧರ್ಮ ಕಾರ್ಯಗಳಿಗೆ ಉಪಯೋಗವಾಗಲಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.’

ಪ್ರಾರ್ಥನೆ ಮಾಡಿದ ನಂತರ ಬ್ರಹ್ಮಧ್ವಜವನ್ನು ಕೆಳಗಿಳಿಸಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಎಲ್ಲಾ ಸಾಮಗ್ರಿಗಳನ್ನು ದಿನನಿತ್ಯದ ವಸ್ತುಗಳ ಬಳಿ ಇಡಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಹೂವುಗಳು ಮತ್ತು ಮಾವಿನ ಎಲೆಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.

ಹೊಸ ವರ್ಷದ ಆರಂಭದ ನಿಮಿತ್ತ ನಾವು ಶುಭಾಶಯ ಪತ್ರವನ್ನು ಕಳುಹಿಸುತ್ತೇವೆ. ಈ ಪತ್ರವನ್ನು ಚೈತ್ರ ಶುಕ್ಲ ಪಾಡ್ಯದಂದು ಕಳುಹಿಸಬೇಕು; ಏಕೆಂದರೆ ಹೊಸ ವರ್ಷ ದ ಆರಂಭಕ್ಕೆ ಇದೇ ಸರಿಯಾದ ದಿನ.

ಪ್ರಶ್ನೆ : ಪಂಚಾಂಗ ಶ್ರವಣದ ಬಗ್ಗೆ ನೀವು ಇನ್ನೂ ಏನು ಹೇಳುವಿರಿ ?

ಉತ್ತರ : ಪಂಚಾಂಗ ಶ್ರವಣ: ಜ್ಯೋತಿಷ್ಯ ಹೇಳುವವರನ್ನು ಸತ್ಕರಿಸಿ ಅವರ ಅಥವಾ ಪುರೋಹಿತರ ಮೂಲಕ ಹೊಸ ವರ್ಷದ ಪಂಚಾಂಗದ ಅಂದರೆ ವರ್ಷದ ಫಲವನ್ನು ಕೇಳುತ್ತಾರೆ.

ಪಂಚಾಂಗ ಶ್ರವಣದ ಫಲವನ್ನು ಈ ರೀತಿ ಹೇಳಲಾಗಿದೆ: ತಿಥಿ ಶ್ರವಣದಿಂದ ಲಕ್ಷ್ಮೀಪ್ರಾಪ್ತಿಯಾಗುತ್ತದೆ. ದಿನದ ಶ್ರವಣದಿಂದ ಆಯಸ್ಸು ಹೆಚ್ಚುತ್ತದೆ, ನಕ್ಷತ್ರ ಶ್ರವಣದಿಂದ ಪಾಪ ನಾಶವಾಗುತ್ತದೆ, ಯೋಗ ಶ್ರವಣದಿಂದ ರೋಗ ನಾಶವಾಗುತ್ತದೆ, ಕರಣ ಶ್ರವಣದಿಂದ ನಿಯೋಜಿತ ಕಾರ್ಯ ಸಿದ್ಧಿಯಾಗುತ್ತದೆ. ಈ ರೀತಿ ಪಂಚಾಂಗ ಶ್ರವಣದ ಉತ್ತಮ ಫಲವಿದೆ. ಅದರ ನಿತ್ಯ ಶ್ರವಣದಿಂದ ಗಂಗಾ ಸ್ನಾನದ ಫಲ ಸಿಗುತ್ತದೆ.

ಪ್ರಶ್ನೆ : ಹೊಸ ವರ್ಷದ ನಿಮಿತ್ತ ನೀವು ಏನು ಕರೆ ನೀಡುವಿರಿ ?

ಚೈತ್ರ ಪಾಡ್ಯ – ಯುಗಾದಿಯು ೩೦ ಮಾರ್ಚ್ ೨೦೨೫ ರಂದು ಇದೆ. ತನ್ನಿಮಿತ್ತ, ನೀವು ಈ ರೀತಿಯ ಪ್ರಯತ್ನಗಳನ್ನು ಮಾಡಬಹುದು.

೧. ನಿಮ್ಮ ಮನೆಯಲ್ಲಿ ಈ ಹಬ್ಬವನ್ನು ಆಚರಿಸಿ, ಮೊಬೈಲ್‌ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಹಬ್ಬದ ಶಾಸ್ತ್ರವನ್ನು ವಿವರಿಸಬಹುದು.

೨. ನೀವು ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಇತರರಿಗೂ ಇದರ ಬಗ್ಗೆ ಹೇಳಬಹುದು.

೩. ಹೊಸ ವರ್ಷ ಚೈತ್ರ ಶುಕ್ಲ ಪಾಡ್ಯ, ಅಂದರೆ ಯುಗಾದಿಯನ್ನು ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ಅವರಿಗೆ ತಿಳಿಸಬಹುದು. ಅವರಿಗೆ ಹಿಂದೂ ಸಂಸ್ಕ್ರತಿಯ ಮಹತ್ವವನ್ನು ಹೇಳಬಹುದು.

೪. ಸಾಮಾಜಿಕ ಮಾಧ್ಯಮಗಳ ಮೂಲಕ, ಅಂದರೆ ಫೇಸ್ಬುಕ್, ಟ್ವಿಟರ್, ವಾಟ್ಸಪ್‌ ಮೂಲಕ ನಿಮ್ಮ ಮಾತೃಭಾμÉಯಲ್ಲಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಬಹುದು.

೫. ಯುಗಾದಿಯ ನಿಮಿತ್ತ ಎಲ್ಲೆಡೆ ಹಿಂದೂ ಹೊಸ ವರ್ಷದ ಮಹತ್ವವನ್ನು ವಿವರಿಸುವ ‘ಆನ್‌ಲೈನ್’ ಉಪನ್ಯಾಸಗಳನ್ನು ಆಯೋಜಿಸಬೇಕು.

೬ ‘ಆದರ್ಶ ಬ್ರಹ್ಮಧ್ವಜ ಸ್ಥಾಪಿಸುವುದು ಹೇಗೆ ?’, ಯುಗಾದಿಯ ಮಹತ್ವವನ್ನು ತಿಳಿಸುವ ವೀಡಿಯೊ ‘ಆನ್‌ಲೈನ್‌’ನಲ್ಲಿ ತೋರಿಸಲು ನಿಯೋಜನೆ ಮಾಡಬೇಕು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.