ಹಿಂದೂಗಳೇ, ಜಾತ್ಯತೀತ ಭಾರತದಲ್ಲಿ ಹಿಂದೂ ರಾಷ್ಟ್ರದ ಬ್ರಹ್ಮಧ್ವಜವನ್ನು ಏರಿಸಲು ಬದ್ಧರಾಗಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಯುಗಾದಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಂದೇಶ

‘ಪ್ರಸ್ತುತ, ಸನಾತನ ಧರ್ಮದ ಜಾಗೃತಿಯ ವಿಷಯದಲ್ಲಿ ಹಿಂದೆಂದಿಗಿಂತಲೂ ಅನುಕೂಲಕರ ಕಾಲವಾಗಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಈ ವರ್ಷ ೧೪೪ ವರ್ಷಗಳ ನಂತರ ಪ್ರಯಾಗರಾಜ (ಉತ್ತರಪ್ರದೇಶ) ದಲ್ಲಾದ ಮಹಾಕುಂಭಮೇಳದಲ್ಲಿ ೬೬ ಕೋಟಿ ಹಿಂದೂಗಳು ಗಂಗಾಸ್ನಾನವನ್ನು ಮಾಡುವುದು. ಇದರ ಅರ್ಥ ಸನಾತನ ಧರ್ಮದ

ಬಗ್ಗೆ ಹೆಮ್ಮೆ ಪಡುವ ಭಾರತದ ಸುಮಾರು ಶೇಕಡಾ ೫೦ ರಷ್ಟು ಹಿಂದೂಗಳು ಗಂಗಾಸ್ನಾನವನ್ನು ಮಾಡಿದ್ದಾರೆ. ಇದು ಸನಾತನಿ ಹಿಂದೂಗಳಲ್ಲಿನ ಜಾಗೃತಿಯ ಪರಮೋಚ್ಚ ಕಾಲವಾಗಿದೆ.

‘ಪ್ರಸ್ತುತ, ಸನಾತನ ಧರ್ಮ, ಸಂಸ್ಕೃತಿ, ಧರ್ಮಗ್ರಂಥಗಳು, ಕಾಲಗಣನೆ, ಸಂಸ್ಕೃತ, ಗೋಮಾತೆ, ಗಂಗೆ, ದೇವಾಲಯಗಳು ಇತ್ಯಾದಿ ಹಿಂದೂ ಧರ್ಮದ ಹೆಗ್ಗುರುತುಗಳು ಸಂಕಟದಲ್ಲಿವೆ. ಭಾರತದಲ್ಲಿ ನಿಜವಾದ ಧರ್ಮಗ್ಲಾನಿಯನ್ನು ಹೋಗಲಾಡಿಸಬೇಕಾದರೆ, ಸದ್ಯದ ‘ಜಾತ್ಯತೀತ ಭಾರತದಲ್ಲಿ ಸನಾತನ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ನಿರ್ಮಿಸುವುದೇ’ ಚಿರಂತನ ಪರಿಹಾರೋಪಾಯವಾಗಿದೆ.

ಆದ್ದರಿಂದ, ಜಾಗೃತಗೊಂಡಿರುವ ಹಿಂದೂಗಳಲ್ಲಿ ಸಾಂವಿಧಾನಿಕ ಧರ್ಮನಿರಪೇಕ್ಷತೆಯಿಂದ ಭಾರತದ ಮತ್ತು ಸನಾತನ ಧರ್ಮದ ಪರಮ ಅಧೋಗತಿ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಸ್ತಕದ ಜಾತ್ಯತೀತ ಭಾರತದಲ್ಲಿ ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಲು ಪ್ರೇರೇಪಿಸುವುದು ಅತ್ಯಗತ್ಯವಾಗಿದೆ; ಆದ್ದರಿಂದಲೇ, ಹಿಂದೂಗಳೇ, ಸನಾತನ ಧರ್ಮಶಾಸ್ತ್ರದ ಪ್ರಕಾರ ಮೂರೂವರೆ ಮುಹೂರ್ತಗಳಲ್ಲಿ ಒಂದು ಮುಹೂರ್ತವಾದ ಯುಗಾದಿಯ ತಿಥಿಯಂದು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕಟಿಬದ್ಧರಾಗಿ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ