ಹಿಂದೂಗಳೇ, ಧರ್ಮಾಚರಣೆಯಿಂದ ಯುಗಾದಿ ಆಚರಿಸಿ ಧರ್ಮತೇಜವನ್ನು ಜಾಗೃತಗೊಳಿಸಿ ಮಾಡೋಣ !

ಸುಶ್ರೀ (ಕು.) ಮಧುರಾ ಭೋಸಲೆ

‘ಸಾಕ್ಷಾತ್‌ ಈಶ್ವರನೇ ಸನಾತನ ಹಿಂದೂ ಧರ್ಮವನ್ನು ನಿರ್ಮಿಸಿದ್ದಾನೆ. ಆದ್ದರಿಂದ ಧರ್ಮದಲ್ಲಿ ಪ್ರತಿಯೊಂದು ಅಂಶವು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಶೇಕಡ ೧೦೦ ರಷ್ಟು ಯೋಗ್ಯ, ಲಾಭದಾಯಕ ಮತ್ತು ಪರಿಪೂರ್ಣವಾಗಿದೆ.

೧. ಹತ್ತಿ ಅಥವಾ ರೇಷ್ಮೆಯ ೯ ಗಜದ ಸೀರೆ ಮತ್ತು ಧೋತರ ಇದರಲ್ಲಿ ಬಹಳಷ್ಟು ಸಾತ್ತ್ವಿಕತೆ ಮತ್ತು ಚೈತನ್ಯ ಇರುವುದರಿಂದ ಈ ವಸ್ತ್ರಗಳನ್ನು ಧರಿಸುವವರಿಗೂ ಸಾತ್ತ್ವಿಕತೆ ಹಾಗೂ ಚೈತನ್ಯದ ಲಾಭವಾಗಲು ಸಹಾಯವಾಗುತ್ತದೆ.

೨. ಸ್ತ್ರೀಯರು ನತ್ತು, ಓಲೆ, ಕಾಲುಂಗುರ, ಕಾಲ್ಗೆಜ್ಜೆ, ಸೊಂಟದ ಪಟ್ಟಿ ಮುಂತಾದ ಬಂಗಾರ-ಬೆಳ್ಳಿಯ ಸಾತ್ತ್ವಿಕ ಆಭರಣ ಧರಿಸುವುದರಿಂದ ದೇವತೆಯ ತೇಜತತ್ತ್ವದಿಂದ ಕೂಡಿರುವ ಚೈತನ್ಯಲಹರಿಗಳು ಆಭರಣದ ಕಡೆಗೆ ಆಕರ್ಷಿತಗೊಳ್ಳುತ್ತದೆ.

೩. ಜಡೆ, ತುರುಬು ಇವುಗಳಂತಹ ಸಾತ್ತ್ವಿಕ ಕೇಶರಚನೆ ಮಾಡುವುದರಿಂದ ಅವರ ಸಾತ್ತ್ವಿಕತೆ ಹೆಚ್ಚಾಗಿ ಸಾಧನೆಗೆ ಪೂರಕವಾಗಿರುವಂತಹ ಸುಷಿಮ್ನಾ ನಾಡಿ ಸಕ್ರಿಯವಾಗುತ್ತದೆ.

೪. ಸಾಂಪ್ರದಾಯಿಕ ಸಾತ್ತ್ವಿಕ ಉಡುಪು, ಆಭರಣ ಧರಿಸಿದರೆ ಮತ್ತು ಕೇಶರಚನೆ ಮಾಡುವುದರಿಂದ ನಮ್ಮಿಂದ ಧರ್ಮಾಚರಣೆಯಾಗಿ ನಮ್ಮ ಮೇಲೆ ಭಗವಂತನ ಕೃಪೆ ಆಗುತ್ತದೆ.

೫. ಸಾಂಪ್ರದಾಯಿಕ ಸಾತ್ತ್ವಿಕ ಹಿಂದೂ ವಸ್ತ್ರಗಳು, ಆಭರಣಗಳು ಮತ್ತು ಕೇಶರಚನೆ ಇವುಗಳ ತ್ರಿವೇಣಿ ಸಂಗಮದಿಂದ ಹಬ್ಬದ ದಿನದಂದು ವಾಯುಮಂಡಲದಲ್ಲಿನ ದೊಡ್ಡ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವ ದೇವತೆಗಳ ಚೈತನ್ಯಲಹರಿಗಳನ್ನು ನಾವು ಹೆಚ್ಚೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.

೬. ಸಾಂಪ್ರದಾಯಿಕ ಸಾತ್ತ್ವಿಕ ಹಿಂದೂ ವಸ್ತ್ರ, ಆಭರಣ ಮತ್ತು ಕೇಶರಚನೆ ಇವುಗಳಿಂದ ಅವುಗಳನ್ನು ಧರಿಸುವವರಿಗೆ, ಅವರನ್ನು ನೋಡುವವರ ಮತ್ತು ಅವರ ಸುತ್ತಲಿನ ವ್ಯಕ್ತಿಗಳಿಗೂ ಸಾತ್ತ್ವಿಕತೆ ಹಾಗೂ ಚೈತನ್ಯದ ಲಾಭವಾಗಿ ಎಲ್ಲರ ಸಾತ್ತ್ವಿಕತೆ ಹೆಚ್ಚಾಗಲು ಮತ್ತು ಕೆಟ್ಟ ಶಕ್ತಿಯ ತೊಂದರೆ ಕಡಿಮೆಯಾಗಲು ಸಹಾಯವಾಗುತ್ತದೆ.

೭. ವ್ಯಕ್ತಿಯ ಸುತ್ತಲಿನ ವಾಯುಮಂಡಲ ಸಾತ್ತ್ವಿಕವಾಗುತ್ತದೆ.

೮. ದೇವತೆಗಳ ಚೈತನ್ಯಲಹರಿಗಳು ವಾತಾವರಣದಲ್ಲಿಯೂ ಪ್ರಕ್ಷೇಪಿತವಾಗುತ್ತವೆ.

ಸಾಂಪ್ರದಾಯಿಕ ಸಾತ್ತ್ವಿಕ ಹಿಂದೂ ಉಡುಪು, ಆಭರಣ ಮತ್ತು ಕೇಶರಚನೆಗಳಿಂದ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶೇಕಡ ೧೦೦ ರಷ್ಟು ಆಧ್ಯಾತ್ಮಿಕ ಲಾಭವಾಗುತ್ತದೆ. ಎಲ್ಲಾ ಹಿಂದೂ ಬಂಧು-ಭಗಿನಿಯರಿಗೆ ವಿನಂತಿಯೆಂದರೆ, ಈ ಯುಗಾದಿಗೆ ಹಾಗೂ ವರ್ಷದಲ್ಲಿ ಬರುವ ಎಲ್ಲಾ ಹಿಂದೂ ಹಬ್ಬಗಳನ್ನು ಸಾಂಪ್ರದಾಯಿಕ ಮತ್ತು ಸಾತ್ತ್ವಿಕ ಹಿಂದೂ ಉಡುಪುಗಳನ್ನು ಧರಿಸಿ ಆಚರಿಸೋಣ ಮತ್ತು ಸಾಧ್ಯವಿದ್ದರೆ ಬಂಗಾರ ಬೆಳ್ಳಿಯ ಸಾತ್ತ್ವಿಕ ಸಾಂಪ್ರದಾಯಿಕ ಆಭರಣಗಳನ್ನು ಧರಿಸೋಣ ಮತ್ತು ಜಡೆ, ತುರುಬು ಇವುಗಳಂತಹ ಸಾತ್ತ್ವಿಕ ಕೇಶರಚನೆಯನ್ನು ಮಾಡಿ ದೇವರ ಶುಭಾಶೀರ್ವಾದ ಪಡೆಯೋಣ.

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) ಸನಾತನ ಆಶ್ರಮ, ರಾಮನಾಥಿ, ಗೋವಾ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.