ಯುಗಾದಿಯಂದು ಶುಭ ಸಂಕಲ್ಪ ಮಾಡೋಣ !

ಯುಗಾದಿಯು ಹಿಂದೂಗಳ ನವವರ್ಷಾರಂಭದ ದಿನವಾಗಿದೆ. ಹೊಸ ವರ್ಷದ ಆರಂಭದ ದಿನ ಮುಂದಿನ ವರ್ಷವಿಡಿ ಮಾಡಬೇಕಾದ ಕೃತಿಗಳ ಸಂಕಲ್ಪ ಮಾಡುತ್ತಾರೆ. ಯುಗಾದಿಯ ಶುಭಮುಹೂರ್ತದಲ್ಲಿ ನಮ್ಮ ಪ್ರಕೃತಿಗನುಸಾರ ಮಾಡಿದ ಸಂಕಲ್ಪ ದೈವೀ ಊರ್ಜೆಯಿಂದಾಗಿ ನಿಶ್ಚಿತವಾಗಿಯೂ ಫಲಪ್ರದವಾಗುತ್ತದೆ. ಈ ನಿಮಿತ್ತ ನಾವು ಕೆಲವು ಸಂಕಲ್ಪಗಳನ್ನು ನಿಶ್ಚಿಯಿಸಿ ವರ್ಷಾರಂಭದ ಲಾಭವನ್ನು ಪಡೆಯಬಹುದು.

ಸಂಕಲನಕಾರರು : ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ

೧. ಮಾತೃಭಾಷೆಯಲ್ಲಿ ವ್ಯವಹರಿಸುವುದು

ಸಂಸ್ಕೃತವು ಅತ್ಯಂತ ಸಾತ್ತ್ವಿಕ ಭಾಷೆಯಾಗಿದೆ. ನಾವು ಮಾತೃಭಾಷೆ ಮಾತನಾಡುವಾಗಲೂ ಆಂಗ್ಲ ಶಬ್ದಗಳನ್ನು ಹೇರಳವಾಗಿ ಬಳಸುತ್ತೇವೆ. ಆದುದರಿಂದಲೇ ಮಾತೃಭಾಷೆಯ ಅಭಿಮಾನವನ್ನಿಟ್ಟುಕೊಂಡು ಶುದ್ಧ ಮಾತೃಭಾಷೆಯಲ್ಲಿಯೇ ವ್ಯವಹರಿಸಲು ನಿಶ್ಚಯಿಸೋಣ.

೨. ಸಂಚಾರವಾಣಿಯಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಡೆಗಟ್ಟೋಣ

ಭಾರತದಲ್ಲಿ ಸಂಚಾರವಾಣಿ (ಸ್ಮಾರ್ಟ್ ಫೋನ್) ಬಳಸುವ ಯುವ ಪೀಳಿಗೆ ಮತ್ತು ಇತರರು ಸಂಚಾರವಾಣಿಯನ್ನು ಬಳಸುವುದರಲ್ಲಿ ದಿನದಲ್ಲಿ ಸರಾಸರಿ ೫ ಗಂಟೆಗಳಿಗಿಂತಲೂ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಇಷ್ಟು ಸಮಯ ಸಂಚಾರವಾಣಿಯನ್ನು ಬಳಸುವುದರಿಂದ, ಅದರಲ್ಲಿ ಸಾಮಾಜಿಕ ಮಾಧ್ಯಮಗಳು, ಯುಟ್ಯೂಬ್‌ನ ಅನಾವಶ್ಯಕ ವಿಡಿಯೋಗಳನ್ನು ನೋಡಿ ಮನಸ್ಸಿಗಾಗುವ ಅಸ್ವಸ್ಥತೆ, ಕಿರಿಕಿರಿಯಿಂದಾಗಿ ದಿನವಿಡಿಯ ಕೆಲಸ ಅಥವಾ ದಿನಚರಿಯ ಮೇಲೆ ಪರಿಣಾಮವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಚಾರವಾಣಿಯ ಅನಾವಶ್ಯಕ ಬಳಕೆಯನ್ನು ತಡೆಗಟ್ಟಲು ನಿರ್ಧರಿಸೋಣ.

೩. ಯೋಗಾಸನಗಳು/ವ್ಯಾಯಾಮ ಮಾಡುವುದು

ನಮ್ಮ ಪ್ರದೇಶದಲ್ಲಿ ಯೋಗಾಸನಗಳು ಮತ್ತು ವ್ಯಾಯಾಮಗಳನ್ನು ಕಲಿಸುವ, ಮಾಡಿಸಿಕೊಳ್ಳುವ ಅನೇಕ ಸಂಸ್ಥೆಗಳು ಕಾರ್ಯನಿರತವಾಗಿವೆ. ಅಲ್ಲಿಗೆ ಹೋಗಿ ಗುಂಪಿನಲ್ಲಿ ಯೋಗಾಸನ ಮತ್ತು ವ್ಯಾಯಾಮ ಮಾಡಿದರೆ ಅದರ ಅಭ್ಯಾಸವಾಗುತ್ತದೆ ಮತ್ತು ಮನಸ್ಸಿನ ಮೇಲೆ ಕ್ರಮಬದ್ಧತೆಯ ಸಂಸ್ಕಾರವೂ ಆಗುತ್ತದೆ. ನಿರೋಗಿಯಾಗಿರುವುದು, ಯುವಕರು ಚೆನ್ನಾಗಿ ಅಭ್ಯಾಸ ಮಾಡುವುದು ಮತ್ತು ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇವುಗಳಿಗಾಗಿ ಸದೃಢ ದೇಹಸಂಪತ್ತನ್ನು ಗಳಿಸಬೇಕು.

ಶ್ರೀ. ಯಜ್ಞೇಶ ಸಾವಂತ

೪. ಅಗ್ನಿಶಾಮಕ ಮತ್ತು ತುರ್ತುಚಿಕಿತ್ಸಾ ತರಬೇತಿ

ಸರಕಾರದಿಂದ ಮತ್ತು ಇತರ ಕೆಲವು ಸಂಸ್ಥೆಗಳಿಂದ ಅಗ್ನಿಶಾಮಕ ಮತ್ತು ತುರ್ತುಚಿಕಿತ್ಸಾ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿನ ಕೆಲವು ತಂತ್ರಗಳನ್ನು ಕಲಿತರೆ ಮನೆಯಲ್ಲಿ ಅಥವಾ ಸುತ್ತಮುತ್ತ ಎಲ್ಲಿಯಾದರೂ ಬೆಂಕಿ ತಗಲಿದರೆ ಅದನ್ನು ನಿಯಂತ್ರಿಸಲು ಬಳಸಬಹುದು. ‘ಫೈಯರ್‌ ಎಕ್ಸ್ಟಿಂಗ್ವಿಶರ್’ ಕೆಲವರ ಮನೆಗಳು, ಕಚೇರಿಗಳು, ವಿಶ್ವವಿದ್ಯಾಲಯಗಳು, ಶಾಲೆಗಳು ಇತ್ಯಾದಿ ಸ್ಥಳಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ; ಆದರೆ ಅದನ್ನು ಹೇಗೆ ಬಳಸಬೇಕು ? ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿದೆ.

೫. ಪ್ರಥಮ ಚಿಕಿತ್ಸೆಗಳ ಮಾಹಿತಿ ಪಡೆಯುವುದು

ಸದ್ಯದ ಧಾವಂತದ ಜೀವನದಲ್ಲಿ ಅನೇಕರಿಗೆ ವಿಶ್ರಾಂತಿ ಪಡೆಯಲೂ ಸಮಯವಿಲ್ಲ. ಸದ್ಯದ ಜೀವನಶೈಲಿ, ಆಹಾರವಿಹಾರ, ಹೊರಗಿನ ಆಹಾರ ಸೇವನೆ ಇತ್ಯಾದಿಗಳಿಂದಾಗಿ ತೀರಾ ಚಿಕ್ಕ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಇತ್ಯಾದಿಗಳಿಂದ ಯುವ ಜನಾಂಗ ಪೀಡಿತವಾಗಿದೆ.ವ್ಯಾಯಾಮಶಾಲೆಯಲ್ಲಿ(ಜಿಮ್‌ನಲ್ಲಿ) ವ್ಯಾಯಾಮ ಮಾಡುವಾಗ, ಆಡುವಾಗ, ಕಲಿಯುವಾಗ, ಪ್ರಯಾಣಿಸುವಾಗ ತಲೆ ಸುತ್ತುವುದು, ಹೃದಯಾಘಾತದಂತಹ ಘಟನೆಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. – ಶ್ರೀ. ಯಜ್ಞೇಶ ಸಾವಂತ ವ್ಯಕ್ತಿಗೆ ಈ ರೀತಿಯ ಶಾರೀರಿಕ ಅಸ್ವಸ್ಥತೆಯ ಅರಿವಾದಾಗ ಅಕ್ಕಪಕ್ಕದಲ್ಲಿ ಅನೇಕ ಜನರಿದ್ದರೂ ಅವರು ಹತಾಶರಾಗಿ ಅಸಹಾಯಕ ಭೂಮಿಕೆಯಿಂದ ನೋಡುವ ದೃಶ್ಯಗಳು ಅನೇಕ ವಿಡಿಯೋಗಳಿಂದ ಗಮನಕ್ಕೆ ಬರುತ್ತದೆ. ಇಲ್ಲಿ ಪ್ರಥಮಚಿಕಿತ್ಸೆಯ ಕೆಲವು ತಂತ್ರಗಳ ಮಾಹಿತಿ ಇದ್ದರೆ ಸಂಬಂಧಿತರಿಗೆ ಸಹಾಯ ಮಾಡಬಹುದು. ಇದಕ್ಕಾಗಿ ಯುವಕರು ಪ್ರಥಮಚಿಕಿತ್ಸೆಯನ್ನು ಕಲಿತುಕೊಳ್ಳಬೇಕು.

೬. ಆಧ್ಯಾತ್ಮಿಕ/ಧಾರ್ಮಿಕ ಸಂಸ್ಥೆಗಳಲ್ಲಿ ಭಾಗವಹಿಸುವುದು

ದೈಹಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಎಲ್ಲ ಬಲಗಳಲ್ಲಿ ಆಧ್ಯಾತ್ಮಿಕ ಬಲವು ಹೆಚ್ಚು ಬಲಿಷ್ಠವಾಗಿರುತ್ತದೆ. ಆಧ್ಯಾತ್ಮಿಕ ಬಲದ ಆಧಾರದಲ್ಲಿ ನಾವು ಅನೇಕ ರಚನಾತ್ಮಕ ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸಬಹುದು. ‘ವ್ಯಕ್ತಿಯಲ್ಲಿ ಗುಣಗಳ ವಿಕಾಸ ಮತ್ತು ದೋಷ-ಅಹಂನ ನಿರ್ಮೂಲನೆ ಮಾಡಿ ಅವನನ್ನು ಈಶ್ವರಸ್ವರೂಪ ಮಾಡುವುದು’ ಭಾರತೀಯ ಸಂಸ್ಕೃತಿಯ ಮುಖ್ಯ ಉದ್ದೇಶವಾಗಿದೆ. ಅದರಿಂದ ಉತ್ತರೋತ್ತರವಾಗಿ ವ್ಯಕ್ತಿಯ ಸರ್ವಾಂಗೀಣ ಪ್ರಗತಿ ಆಗುತ್ತದೆ. ಇದೇ ನಿಜವಾದ ವ್ಯಕ್ತಿತ್ವ ವಿಕಾಸವಾಗಿರುತ್ತದೆ. ಆಧ್ಯಾತ್ಮಿಕ ಬಲದಿಂದ ಕೂಡಿದ ವ್ಯಕ್ತಿಯು ಕೇವಲ ತನಗಾಗಿ ಅಷ್ಟೇ ಅಲ್ಲ, ಆದರೆ ತನ್ನ ಕುಟುಂಬ, ತನ್ನ ಕಾರ್ಯದ ಸ್ಥಳ, ಸಮಾಜ ಹೀಗೆ ಎಲ್ಲ ಸ್ಥಳಗಳಲ್ಲಿ ನೇತೃತ್ವ ವಹಿಸಿ ಅನೇಕರಿಗೆ ಯೋಗ್ಯ ದಿಶೆ ಯನ್ನು ನೀಡಬಹುದು. ಇಂತಹ ವ್ಯಕ್ತಿಯು ಸಮಾಜ ಮತ್ತು ರಾಷ್ಟ್ರಕ್ಕೂ ದಿಶೆಯನ್ನು ನೀಡಲು ಸಮರ್ಥನಿರುತ್ತಾನೆ. ಆಧ್ಯಾತ್ಮಿಕ ಭಾಗದ ವಿಚಾರ ಗುರುಕುಲ ವ್ಯವಸ್ಥೆಯಲ್ಲಷ್ಟೇ ಇತ್ತು; ಆದರೆ ಅದನ್ನು ನಂತರ ನಾಶಪಡಿಸಿದುದರಿಂದ ಈಗ ಆಧ್ಯಾತ್ಮಿಕ ಭಾಗದ ಬಗ್ಗೆ ವಿಚಾರ ಮಾಡುವ ಆವಶ್ಯಕತೆ ಉದ್ಭವಿಸಿದೆ. ನಮ್ಮ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಭಾಗವಹಿಸ ಬಹುದು. ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಅನೇಕ ಧರ್ಮಶಿಕ್ಷಣವರ್ಗಗಳನ್ನು ಪ್ರತ್ಯಕ್ಷ ಮತ್ತು ಆನ್‌ಲೈನ್‌ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಅವುಗಳಲ್ಲಿ ಭಾಗವಹಿಸಬಹುದು.

೭. ಸಾರ್ವಜನಿಕ ಮಂಡಳಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು

ನಮ್ಮ ಪ್ರದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವ, ನವರಾತ್ರ್ಯುತ್ಸವ ಮಂಡಳಿಗಳು ಕಾರ್ಯನಿರ್ವಹಿಸುತ್ತವೆ. ಉತ್ಸವಗಳಿಗಾಗಿ ಅವರಿಗೆ ಕಾರ್ಯಕರ್ತರ ಆವಶ್ಯಕತೆ ಇರುತ್ತದೆ. ಅಲ್ಲಿನ ವ್ಯವಸ್ಥೆಯನ್ನು ಅರಿತುಕೊಂಡರೆ ಹಬ್ಬ-ಉತ್ಸವಗಳ ಲಾಭವನ್ನು ನಾವು ಪಡೆದುಕೊಳ್ಳಬಹುದು, ಅಲ್ಲಿ ಸೇವೆಯನ್ನು ಮಾಡಿ ಅನೇಕ ಗುಣ-ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ, ಹಾಗೆಯೇ ಮಂಡಳಿಗಳ ಮೂಲಕ ಸಂಘಟನೆಯ ಕಾರ್ಯವೂ ನೆರವೇರುತ್ತದೆ. ಕೇವಲ ಫೇಸ್‌ಬುಕ್, ವಾಟ್ಸ್‌ಯಾಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಳನ್ನು ರಚಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಬದಲು ಸಾಧ್ಯವಾದಾಗಲೆಲ್ಲಾ ವೈಯಕ್ತಿಕವಾಗಿ ಒಟ್ಟಿಗೆ ಸೇರುವುದು ಯಾವಾಗಲೂ ಉತ್ತಮ.

೮. ಹವ್ಯಾಸಗಳನ್ನು ಕಾಪಾಡುವುದು

ಗಾಯನ, ವಾದನ, ಚಿತ್ರಕಲೆ, ಕರಕುಶಲ ಕೆಲಸ ಇತ್ಯಾದಿ ಹವ್ಯಾಸಗಳನ್ನು ಬೆಳೆಸಬಹುದು. ಕೆಲವರಿಗೆ ಬೇರೆ ಹವ್ಯಾಸಗಳೂ ಇರುತ್ತವೆ. ಹವ್ಯಾಸಗಳನ್ನು ಬೆಳೆಸಿದರೆ ನಾವು ಮಾಡುತ್ತಿರುವ ಕೆಲಸ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಸಮಯದಲ್ಲಿ ಒತ್ತಡವನ್ನು ನಿವಾರಿಸಲು, ಮನಸ್ಸಿಗೆ ಮನೋರಂಜನೆ ನೀಡಲು ಅವುಗಳನ್ನು ಬಳಸಬಹುದು. ಮನಸ್ಸನ್ನು ಹುರಿದುಂಬಿಸಲೂ ಹವ್ಯಾಸಗಳು ಲಾಭಕಾರಿಯಾಗಿವೆ. ಈಜುವುದನ್ನು ಹವ್ಯಾಸವೆಂದು ಕಲಿತುಕೊಂಡರೆ ಅದರಿಂದ ತುರ್ತು ಪರಿಸ್ಥಿತಿಯಲ್ಲಿ ಮತ್ತು ನೆರೆಯ ಪರಿಸ್ಥಿತಿಯಲ್ಲಿ ಲಾಭವಾಗುತ್ತದೆ.

೯. ಸರಕಾರಿ ಕರೆಗಳ ಬಗ್ಗೆ ಗಮನವಿಡುವುದು

ತುರ್ತು ಪರಿಸ್ಥಿತಿಯಲ್ಲಿ ಸರಕಾರ ರಕ್ತದಾನ, ಪ್ರತ್ಯಕ್ಷ ಮನುಷ್ಯಬಲದ ಸಹಾಯಕ್ಕಾಗಿ ಕರೆ ನೀಡುತ್ತದೆ. ಇಂತಹ ಕರೆಗಳಿಗೆ ಗಮನ ಕೊಡುವುದರಿಂದ ಭಾಗವಹಿಸಲು ಸಾಧ್ಯವಿದ್ದವರು ವಿಭಿನ್ನ ಅನುಭವವನ್ನು ಪಡೆಯುತ್ತಾರೆ ಮತ್ತು ಸಮಾಜಕ್ಕಾಗಿ ಏನಾದರೂ ಮಾಡಿದ ಬಗ್ಗೆ ಅವರಿಗೆ ಸಮಾಧಾನವೂ ಪ್ರಾಪ್ತವಾಗುತ್ತದೆ.

ಈ ಪಟ್ಟಿ ಬಹಳ ದೊಡ್ಡದಾಗಿದೆ. ಹಿಂದೂಗಳು ನಿರ್ಧರಿಸಿದರೆ ಅವರು ಶುಭಸಂಕಲ್ಪದ ನೆಪದಲ್ಲಿ ಅನೇಕ ರೀತಿಯಲ್ಲಿ ಮಾಡಬಹುದು. ಇವುಗಳಲ್ಲಿನ ಕೇವಲ ಕೆಲವು ಕೃತಿಗಳನ್ನು ಮಾಡಿದರೂ, ಅವರಿಗೆ ಒಂದು ಮಾರ್ಗ ಸಿಗುತ್ತದೆ ಮತ್ತು ಜೀವನದಲ್ಲಿನ ಅಮೂಲ್ಯ ಸಮಯ ಶಿಕ್ಷಣ, ನೌಕರಿ, ಕೆಲಸ ಇವುಗಳ ಹೊರತಾಗಿ ಇಂತಹ ವಿಷಯಗಳನ್ನು ಕಲಿಯಲು ಉಪಯೋಗಿಸಿದರೆ ಅವರಿಗೆ ಸಮಾಧಾನವೂ ಸಿಗುತ್ತದೆ.

– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೧.೪.೨೦೨೪)