ವಿಶೇಷ ಸಂಪಾದಕೀಯ
ಯುಗಾದಿ ! ಯುಗಾದಿ ಎಂದರೆ ಹಿಂದೂಗಳ ಹೊಸ ವರ್ಷದ ಆರಂಭದ ದಿನ ! ಯುಗಾದಿ ಪಾಡ್ಯದಂದು ವರ್ಷದ ಆರಂಭದಲ್ಲಿ ಎಲ್ಲರ ಆಶೀರ್ವಾದ ಪಡೆದುಕೊಂಡು, ನಮ್ಮ ಕರ್ತವ್ಯವನ್ನು ಮಾಡಲು ಪ್ರಾರಂಭಿಸುವುದಿರುತ್ತದೆ. ಇದರಲ್ಲಿ ಅನೇಕ ವಿಷಯಗಳು ಬರುತ್ತವೆ. ಯುಗಾದಿಯು ಋತುಗಳಿಗನುಸಾರ ಪ್ರಚಾರಕ್ಕೆ ಬಂದ ನಮ್ಮ ಹಬ್ಬವಾಗಿದೆ. ಅದರೊಂದಿಗೆ ಅದಕ್ಕೆ ಧಾರ್ಮಿಕ ಹಿನ್ನೆಲೆಯೊಂದಿಗೆ ಪರಿಸರದ ಸಂದರ್ಭವೂ ಇದೆ. ಇದು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ. ಮುಂದೆ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನು ತಾಮಸಿ ರಾವಣನನ್ನು ವಧಿಸಿದ ನಂತರ ವನವಾಸ ಮುಗಿಸಿ ಚೈತ್ರ ಶುಕ್ಲ ಪಾಡ್ಯದ ತಿಥಿಯಂದು ಅಯೋಧ್ಯೆಯನ್ನು ಪ್ರವೇಶಿಸಿದನು. ಆ ಮಂಗಳಕರ ದಿನದಂದು ಸಮಸ್ತ ಅಯೋಧ್ಯಾವಾಸಿಗಳು ಬ್ರಹ್ಮಧ್ವಜ ಸ್ಥಾಪಿಸಿ ಪ್ರಭು ಶ್ರೀರಾಮಚಂದ್ರನನ್ನು ಸ್ವಾಗತಿಸಿದರು. ಪ್ರಭು ಶ್ರೀರಾಮಚಂದ್ರನಿಗೆ ಸಂಬಂಧಿಸಿದ ಮತ್ತೊಂದು ಉಲ್ಲೇಖವೆಂದರೆ ರಾಮನವಮಿಯ ನವರಾತ್ರಿಯು ಇದೇ ತಿಥಿ ಯಂದು ಪ್ರಾರಂಭವಾಗುತ್ತದೆ. ಚಕ್ರವರ್ತಿ ವಿಕ್ರಮಾದಿತ್ಯನು ವಿಕ್ರಮ ಸಂವತ್ಸರವನ್ನು ಇದೇ ತಿಥಿಯಂದು ಪ್ರಾರಂಭಿಸಿದನು, ಹಾಗೆಯೇ ಚಕ್ರವರ್ತಿ ಶಾಲಿವಾಹನನು ಪ್ರಾರಂಭಿಸಿದ ಶಾಲಿವಾಹನ ಶಕವೂ ಇದೇ ತಿಥಿಯಂದು ಆರಂಭವಾಗುತ್ತದೆ. ಮೂರೂವರೆ ಶುಭಮುಹೂರ್ತಗಳಲ್ಲಿ ಯುಗಾದಿಯೂ ಒಂದು ಶುಭಮುಹೂರ್ತವಾಗಿದೆ. ಇಂತಹ ಅನೇಕ ಮಂಗಳಕರ ಕ್ಷಣ ಗಳಿಗೆ ಸಾಕ್ಷಿಯಾಗಿರುವ ಈ ತಿಥಿಯು ಭಾರತೀಯ ಸಂಸ್ಕ್ರತಿಯ ವಿಜಯ ಪತಾಕೆಯಾಗಿದೆ.
ಬ್ರಹ್ಮಧ್ವಜವೆಂದರೆ ವಿಜಯಪತಾಕೆಯಾಗಿದೆ. ಬ್ರಹ್ಮಧ್ವಜವನ್ನು ಸ್ಥಾಪಿಸಿ ವಿಜಯಿವೀರರನ್ನು ಸ್ವಾಗತಿಸುತ್ತಾರೆ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದರ ಮೇಲೆ ಒಳ್ಳೆಯದರ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯ ಈ ಸಂದೇಶವನ್ನು ನೀಡುವ ಬ್ರಹ್ಮಧ್ವಜ ಇದಾಗಿದೆ. ಇಂದು ನಮ್ಮ ಮನೆಯ ಮೇಲೆ ಹೆಮ್ಮೆಯಿಂದ ಸ್ಥಾಪಿಸಲಾದ ಬ್ರಹ್ಮಧ್ವಜವನ್ನು ನೋಡಿದಾಗ ಮನಸ್ಸಿನಲ್ಲಿ ಯಾವ ವಿಚಾರಗಳು ಬರುತ್ತವೆ ? ‘ನಾನು ವ್ಯಕ್ತಿ ಮತ್ತು ಸಮಾಜವೆಂದು ಯಾವುದರ ಮೇಲೆ ವಿಜಯ ಸಾಧಿಸಲು ಬಯಸುತ್ತೇನೆ ? ಯಾವ ನಕಾರಾತ್ಮಕ ಪ್ರವೃತ್ತಿಗಳನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ನನಗಿದೆ ?’ ಇದರ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮತ್ತು ಕೃತಿ ಮಾಡುವುದು ಆವಶ್ಯಕವಾಗಿದೆ. ಇಂದು ನಮ್ಮ ಸುತ್ತಲೂ ಪ್ರತಿಯೊಂದು ಕ್ಷಣವೂ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಆರೋಗ್ಯದಿಂದ ಶಿಕ್ಷಣದ ವರೆಗೆ ಮತ್ತು ಗಡಿಗಳ ಸುರಕ್ಷತೆಯಿಂದ ಪರಿಸರದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಸಮಾಜದಲ್ಲಿನ ಸಜ್ಜನರು ಸಕ್ರಿಯರಾಗಿ ಈ ಬದಲಾವಣೆಗಳನ್ನು ಎದುರಿಸಬೇಕು. ಸಜ್ಜನ ಶಕ್ತಿಯ ಬಲದಿಂದ ಈ ಬದಲಾವಣೆಗಳಿಗೆ ರಚನಾತ್ಮಕ ತಿರುವು ನೀಡಬೇಕು. ಹಿಂದೂಗಳಲ್ಲಿ ಈ ಹೊಸ ವರ್ಷದ ನಿಮಿತ್ತ ಜಾಗೃತಿ ಮೂಡಿಸಲು ಹಿಂದೂ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸುತ್ತಿವೆ. ಅದಕ್ಕೆ ಯಶಸ್ಸು ಕೂಡ ಸಿಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಹೋದಾಗಿನಿಂದ ದೇಶದಲ್ಲಿಯೂ ಸ್ವಲ್ಪ ಮಟ್ಟಿಗೆ ಹಿಂದುತ್ವಕ್ಕೆ ಉತ್ತೇಜನ ಸಿಕ್ಕಿದೆ. ಆದರೆ ಜಗತ್ತಿನಲ್ಲಿ ಇನ್ನೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಈ ಉತ್ತೇಜನ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಅದು ಪೂರ್ಣ ಸ್ಥಿತಿಗೆ ಬರಲು ಹಿಂದೂಗಳು ಬಹಳ ಕಷ್ಟಪಡಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಹಿಂದೂಗಳ ಹಳೆಯ ಗಾಯಗಳು ಮಾಸಲು ಪ್ರಯತ್ನಿಸುತ್ತಿದ್ದಾರೆ. ಆ ರೀತಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಆಗಬೇಕಾಗಿದೆÉ. ಶ್ರೀರಾಮ ಜನ್ಮಭೂಮಿಯ ತೀರ್ಪು ಹಿಂದೂಗಳ ಪರವಾಗಿ ಬಂದ ನಂತರ ಭವ್ಯ ಶ್ರೀರಾಮ ಮಂದಿರವನ್ನು ಸಹ ನಿರ್ಮಿಸಲಾಗಿದೆ. ಶ್ರೀರಾಮನಿಂದ ಅಯೋಧ್ಯೆಯಲ್ಲಿ ‘ಸೂಕ್ಷ್ಮ ರೂಪ’ದಲ್ಲಿ ರಾಮರಾಜ್ಯ ಬಂದಿದೆ.
ಸಂಕಲ್ಪ ಪೂರ್ತಿಗಾಗಿ ಪ್ರಯತ್ನ ಆವಶ್ಯಕ !
ಭಯೋತ್ಪಾದನೆ, ನಕ್ಸಲವಾದ, ಮತಾಂಧರು ಮತ್ತು ಸಮಾಜಘಾತುಕರಿಂದ ಇಂದಿನ ಸಮಾಜ ಭಯಭೀತಗೊಂಡಿದೆ. ಈಗ ‘ದೇಶದಲ್ಲಿ ರಾಮರಾಜ್ಯವನ್ನು ನಿರ್ಮಿಸಬೇಕು’ ಎಂಬ ಸ್ಥಿತಿ ಮೂಡಿಸುವ ಸಂಕಲ್ಪ ಮಾಡುವುದು ಅತಿ ಅವಶ್ಯಕವಾಗಿದೆ. ಸಂಕಲ್ಪ ಮಾಡದೆ ಅಥವಾ ಒಂದು ಗುರಿ ಇಟ್ಟುಕೊಳ್ಳದೆ ಯಾವುದೇ ಕಾರ್ಯಕ್ಕೆ ದಿಕ್ಕು ಸಿಗುವುದಿಲ್ಲ. ಹೀಗಿದ್ದರೂ ಕೇವಲ ಸಂಕಲ್ಪ ಮಾಡಿದರೆ ಸಾಲದು, ಹಿಂದೂಗಳು ಈ ಸಂಕಲ್ಪ ಪೂರ್ಣ ಗೊಳಿಸುವ ದಿಕ್ಕಿನಲ್ಲಿ ಪ್ರಯತ್ನಿಸಬೇಕಾಗುವುದು. ಆದ್ದರಿಂದ ಈಶ್ವರನು ಸಜ್ಜನರಿಗೆ ಯಾವ ಕೌಶಲ್ಯವನ್ನು ನೀಡಿದ್ದಾನೆಯೋ, ಅದಕ್ಕನುಗುಣವಾಗಿ ಪ್ರತಿಯೊಬ್ಬರೂ ಆ ಕೌಶಲ್ಯವನ್ನು ಉಪಯೋಗಿಸಿ ರಾಮರಾಜ್ಯದ ಕಾರ್ಯದಲ್ಲಿ ಕೈಜೋಡಿಸಬೇಕು.
ಸಂಘಟಿತರಾಗುವ ಸಂಕಲ್ಪ ಮಾಡೋಣ !
ಸಮಾಜದಲ್ಲಿ ಲವ್ ಜಿಹಾದ್, ಭೂಮಿ ಜಿಹಾದ್, ಹಲಾಲ್ ಪ್ರಮಾಣಪತ್ರದ ಮೂಲಕ ಆರ್ಥಿಕತೆಯ ಮೇಲಾಗುವ ಆಘಾತಗಳು, ಮತಾಂತರದಂತಹ ಸಮಾಜಘಾತುಕ ವಿಷಯಗಳ ಬಗ್ಗೆ ಮತಾಂಧರಿಗೆ ಮಸೀದಿ ಮತ್ತು ಮದರಸಾಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಸೂಕ್ಷ್ಮದಲ್ಲಿ ನೋಡಿದರೆ ಸಮಾಜದಲ್ಲಿ ಮೇಲಿನ ಎಲ್ಲಾ ಕೆಲಸಗಳು ಎಲ್ಲೆಡೆ ಸಮಾನ ರೀತಿಯಲ್ಲಿ ನಡೆಯುತ್ತಿವೆ. ಯಾವುದೇ ಮುಸಲ್ಮಾನನಿಂದ ಲವ್ ಜಿಹಾದ್, ಮತಾಂತರ ಇಂತಹ ಯಾವುದೇ ಅಪರಾಧವಾದರೆ ಅವನನ್ನು ರಕ್ಷಿಸಲು ಮುಸಲ್ಮಾನರು ಸಂಘಟಿತರಾಗುತ್ತಾರೆ. ಅಪರಾಧಿ ಮುಸಲ್ಮಾನರಿಗೆ ಮದರಸಾ ಮತ್ತು ಮಸೀದಿಗಳಲ್ಲಿ ಆಶ್ರಯ ನೀಡುತ್ತಾರೆ. ಜಿಹಾದಿ ಭಯೋತ್ಪಾದಕರಿಗೆ ಇತರ ಮುಸಲ್ಮಾನರು ಮನೆಯಲ್ಲಿ ಆಶ್ರಯ ನೀಡುತ್ತಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಲು ಅಪರಾಧಿ ಮುಸಲ್ಮಾನರ ಬೆಂಬಲಕ್ಕೆ ಅನೇಕ ಮುಸಲ್ಮಾನ ನ್ಯಾಯವಾದಿಗಳು ತಯಾರಾಗುತ್ತಾರೆ. ಮುಸಲ್ಮಾನರು ಅಪರಾಧಿ ಮುಸಲ್ಮಾನರ ಕುಟುಂಬದ ಉದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಸ್ವಲ್ಪದರಲ್ಲಿ ಮತಾಂಧರ ಪ್ರತಿಯೊಂದು ಅಪರಾಧವನ್ನು ಮುಚ್ಚಿಟ್ಟು ಅವರನ್ನು ರಕ್ಷಿಸಲು ಮುಸಲ್ಮಾನರು ಸಂಘಟಿತರಾಗುತ್ತಾರೆ. ಇದೆಲ್ಲವೂ ಅಧರ್ಮದ ಭಾಗವಾಯಿತು. ಇನ್ನೊಂದು ಕಡೆ ಹಿಂದೂಗಳನ್ನು ನೋಡಿದರೆ ಲವ್ ಜಿಹಾದ್ ಪ್ರಕರಣದಲ್ಲಿ ಸಿಲುಕಿರುವ ಹಿಂದೂ ಯುವತಿಯರನ್ನು ಬಿಡಿಸಲು ೪-೫ ಜನ ಹಿಂದುತ್ವನಿಷ್ಠರನ್ನು ಹೊರತುಪಡಿಸಿ ಯಾರೂ ಸಹಾಯಕ್ಕಾಗಿ ಮುಂದೆ ಬರುವುದಿಲ್ಲ. ಗೋರಕ್ಷಕರ ರಕ್ಷಣೆಗಾಗಿ ಯಾರೂ ಮುಂದೆ ಬರುವುದಿಲ್ಲ. ಯಾವುದೇ ಮತಾಂಧನು ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದರೆ, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದರೆ ಅಥವಾ ಕಾರಣವಿಲ್ಲದೆ ಯಾವುದೇ ಹಿಂದೂಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರೆ ಸಮಾಜದ ಎಷ್ಟು ಹಿಂದೂ ವಕೀಲರು ದೌರ್ಜನ್ಯಕ್ಕೊಳಗಾದ ಹಿಂದೂಗಳನ್ನು ರಕ್ಷಿಸಲು ಸಂಘಟಿತರಾಗುತ್ತಾರೆ ? ಹಿಂದೂಗಳು ಯಾವುದೇ ಅಪರಾಧ ಮಾಡದಿದ್ದರೂ ಪೊಲೀಸರು ಅವರ ಮೇಲೆ ಪ್ರಕರಣ ಗಳನ್ನು ದಾಖಲಿಸುತ್ತಾರೆ. ಇಂತಹ ಸಮಯದಲ್ಲಿಯೂ ಸಮಾಜದ ಹಿಂದೂಗಳು ಸಂಘಟಿತರಾಗಿ ದೌರ್ಜನ್ಯಕ್ಕೊಳಗಾದ ಹಿಂದೂಗಳ ಬೆಂಬಲಕ್ಕೆ ನಿಲ್ಲುವುದಿಲ್ಲ. ಆದ್ದರಿಂದ ಹಿಂದೂಗಳು ಸಮಾಜಘಾತುಕರು ಮತ್ತು ಮತಾಂಧರ ಸಂಘಟಿತ ಪ್ರವೃತ್ತಿಯನ್ನು ಅಭ್ಯಾಸ ಮಾಡಿ ಅದರಂತೆ ಕ್ರಿಯಾಶೀಲರಾಗುವುದು ಅವಶ್ಯಕ ವಾಗಿದೆ. ಅಂದರೆ ಹಿಂದೂಗಳು ಧರ್ಮದ ಪರವಾಗಿ ಕೃತಿ ಮಾಡುವುದು ಆವಶ್ಯಕವಾಗಿದೆ. ಇದಕ್ಕಾಗಿ ಹಿಂದೂಗಳ ರಕ್ಷಣೆಗಾಗಿ ಹಿಂದೂ ನ್ಯಾಯವಾದಿಗಳು ಜಾತಿ-ಭೇದ ಮರೆತು ಪ್ರಕರಣ ದಾಖಲಾದ ಹಿಂದೂಗಳ ಸಹಾಯಕ್ಕೆ ಸಂಘಟಿತರಾಗುವುದು, ಸಮಾಜಘಾತುಕರು ಮತ್ತು ಮತಾಂಧರ ದೌರ್ಜನ್ಯಗಳನ್ನು ಪ್ರತಿಭಟಿಸಲು ಹಿಂದೂಗಳು ಸ್ವರಕ್ಷಣ ತರಬೇತಿ ವರ್ಗಗಳನ್ನು ಪ್ರಾರಂಭಿಸುವುದು, ಧರ್ಮದ ಮೇಲಿನ ಶ್ರದ್ಧೆ ದೃಢವಾಗಲು ಧರ್ಮಶಿಕ್ಷಣವರ್ಗಗಳನ್ನು ಪ್ರಾರಂಭಿಸುವುದು, ದೌರ್ಜನ್ಯಕ್ಕೆ ಒಳಗಾದ ಹಿಂದೂಗಳಿಗೆ (ಅಂದರೆ ದೈಹಿಕ ಗಾಯಗಳಿಂದಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದ ಹಿಂದೂಗಳು) ಸಹಾಯ ಮಾಡಿ ಅವರ ಕುಟುಂಬದವರ ಉದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವುದು, ಹಿಂದೂಗಳಿಗೆ ಚಿಕಿತ್ಸೆ ನೀಡಲು ಆಧುನಿಕ ಹಿಂದೂ ವೈದ್ಯರನ್ನು ಸಂಘಟಿಸಿ ಹಿಂದೂಗಳಿಗೆ ಉಚಿತ ಚಿಕಿತ್ಸೆ ನೀಡುವುದು, ಹಿಂದೂ ಯುವಕರಿಗೆ ಶಿಕ್ಷಣ ನೀಡಲು ಹಿಂದೂ ಶಿಕ್ಷಕರು ಮತ್ತು ಪ್ರಾಧ್ಯಾಪಕರ ಸಂಘಟನೆ ಮಾಡುವುದು, ಹಿಂದೂಗಳ ಮೇಲೆ ಒಳ್ಳೆಯ ಸಂಸ್ಕಾರಗಳಾಗಲು ಮತ್ತು ಹಿಂದೂಗಳು ಸಾಧನೆ ಮಾಡಿ ಅವರ ಆಧ್ಯಾತ್ಮಿಕ ಪ್ರಗತಿಯಾಗಲು ಸಂತರು ಹೇಳಿದಂತೆ ಸಾಧನೆ ಮಾಡುವುದು, ಇಂತಹ ಕೆಲಸಗಳು ಆಗಲು ಹಿಂದೂಗಳು ಯುಗಾದಿಯಂದು ಆ ರೀತಿ ಸಂಕಲ್ಪನೆ ಮಾಡಿ ಪ್ರಯತ್ನಿಸುವುದು ಆವಶ್ಯಕವಾಗಿದೆ.
ಹಿಂದೂ ರಾಷ್ಟ್ರಕ್ಕಾಗಿ ಸಂಘರ್ಷ ಅನಿವಾರ್ಯ !
ಜಗತ್ತಿನಲ್ಲಿ ಯಾವುದೇ ಬದಲಾವಣೆ ಸಹಜವಾಗಿ ಆಗುವು ದಿಲ್ಲ. ಸದ್ಯಕ್ಕೆ ದೇಶದ್ದು ಮಾತ್ರವಲ್ಲ, ಇಡೀ ಜಗತ್ತಿನ ಸ್ಥಿತಿಯೇ, ಚಿಂತಾಜನಕವಾಗಿದೆ. ಜಾಗತಿಕ ಯುದ್ಧದ ಕಾರ್ಮೋಡಗಳು ಕವಿಯುತ್ತಿವೆ. ಸಂತರು ಮತ್ತು ಭವಿಷ್ಯಕಾರರು ಹೇಳಿದಂತೆ ಮೂರನೇ ಮಹಾಯುದ್ಧವಾಗಿ ದೊಡ್ಡ ನರಸಂಹಾರ ನಡೆಯಲಿದೆ. ತದನಂತರ ಧರ್ಮದ ರಾಜ್ಯ ಬರಲಿದೆ ಎಂದಿದ್ದಾರೆ. ಆದ್ದರಿಂದ ಈ ಕಾಲ ದೊಡ್ಡ ಪರೀಕ್ಷೆಯ ಕಾಲವಾಗಿರಲಿದೆ. ಈ ಹಿನ್ನೆಲೆಯಲ್ಲಿ ಕೇವಲ ಬ್ರಹ್ಮಧ್ವಜ ನಿಲ್ಲಿಸಿ ಹೊಸ ವರ್ಷ ಆಚರಿಸಿ ಸುಮ್ಮನಾಗಲು ಸಾಧ್ಯವಿಲ್ಲ. ಈ ಹೊಸ ವರ್ಷ ಸುಖದ ಮತ್ತು ಸಮಾಧಾನದ ವರ್ಷವಾಗಬೇಕು, ಈ ಸ್ಥಿತಿ ಬಹಳ ದೂರವಿದೆ, ಆದರೆ ಈ ವರ್ಷ ಜೀವ ರಕ್ಷಣೆಗಾಗಿ ಹೋರಾಟ ಮಾಡಬೇಕಾಗುವುದು. ಅಂತಹ ಸಂಘರ್ಷ ಮಾಡುವ ಮನಃಸ್ಥಿತಿ ನಿರ್ಮಾಣ ಮಾಡಿ ನಮ್ಮ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬಹುದು, ಎಂಬುದರ ನಿಯೋಜನೆ ಮಾಡಿ ಅದಕ್ಕನುಸಾರ ನಡೆದುಕೊಳ್ಳಬೇಕಾಗುವುದು.
‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತರು ನಾಶವಾಗುವುದಿಲ್ಲ), ಎಂದು ಶ್ರೀಕೃಷ್ಣನು ಹೇಳಿದ್ದಾನೆ. ಆದ್ದರಿಂದ ಹಿಂದೂಗಳೇ, ಭಕ್ತರಾಗಿ ತಮ್ಮನ್ನು, ಸಮಾಜವನ್ನು ಮತ್ತು ದೇಶವನ್ನು ರಕ್ಷಿಸಿರಿ !