ಕೆಲವು ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ !

ಭಯೋತ್ಪಾದಕರ ಕಾರ್ಯಾಚರಣೆಗಳಿಂದ ಅಂತರಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಲಿದೆ. ಕೆಲವು ದೇಶಗಳು ‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದವು, ಆದರೆ ಈಗ ಆ ಸಂಕಲ್ಪವು ದುರ್ಬಲವಾಗಿದೆ. ಈ ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ.

ಪ್ರಧಾನಿ ಮೋದಿಯವರಿಂದ ಆನ್‌ಲೈನ್ ಮೂಲಕ ಸೋಮನಾಥ ದೇವಾಲಯದ ನವೀಕರಣದ ಉದ್ಘಾಟನೆ

ಭಯೋತ್ಪಾದನೆಯಿಂದ ಶ್ರದ್ಧೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಸೋಮನಾಥ ದೇವಾಲಯವು ನಮ್ಮ ಶ್ರದ್ಧೆಯ ಸ್ಫೂರ್ತಿ ಸ್ಥಾನವಾಗಿದೆ. ಸೋಮನಾಥ ದೇವಾಲಯದ ಅಸ್ತಿತ್ವ ನಾಶಮಾಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಅದನ್ನು ಎಷ್ಟು ಬಾರಿ ಕೆಡವಲಾಗಿದೆಯೋ, ಅಷ್ಟೇ ಬಾರಿ ಅದನ್ನು ಪುನರ್ನಿರ್ಮಿಸಲಾಯಿತು.

ಖಲಿಸ್ತಾನಿ ಭಯೋತ್ಪಾದಕರಿಂದ ಪಂಜಾಬನಲ್ಲಿಯ ಧಾರ್ಮಿಕ ಸ್ಥಳಗಳ ಮೇಲೆ ಆಕ್ರಮಣ ನಡೆಸುವ ಹುನ್ನಾರ

ಪಾಕಿನ ಗುಪ್ತಚರ ದಳ ಐ.ಎಸ್.ಐ.ಯು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲಸಾ ಇಂಟರನ್ಯಾಷನಲ್‌ನೊಂದಿಗೆ ಕೈಜೋಡಿಸಿ ಪಂಜಾಬನಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ನಾಯಕರ ಮೇಲೆ ದಾಳಿ ಮಾಡುವ ಹುನ್ನಾರ ಮಾಡುತ್ತಿದೆ.

‘ಮರ್ಯಾದೆಯನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು !’(ಅಂತೆ) – ಟ್ವಿಟರ್

ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ

‘ಯೂಟ್ಯೂಬ್’ನಿಂದಲೂ ತಾಲಿಬಾನ್ ಖಾತೆಗಳ ಮೇಲೆ ನಿಷೇಧ

ಫೇಸ್‌ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್‌ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು.

‘ತಾಲಿಬಾನವು ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯಸ್ಥಾನವನ್ನಾಗಿ ಮಾಡಬಾರದು !’(ಅಂತೆ) – ತಾಲಿಬಾನ್ ಜೊತೆ ಸ್ನೇಹ ಸಂಬಂಧವನ್ನು ಸ್ಥಾಪಿಸಲು ಚೀನಾ ಟೊಳ್ಳು ಎಚ್ಚರಿಕೆ

ನೀವು (ತಾಲಿಬಾನ್) ಶಾಂತಿಯಿಂದ ರಾಜ್ಯ ಮಾಡಿ; ಆದರೆ ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯ ಸ್ಥಾನವನ್ನಾಗಿ ಮಾಡದಿರಿ, ಎಂದು ಟೊಳ್ಳು ಎಚ್ಚರಿಕೆಯನ್ನು ಚೀನಾವು ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿನ ಆಪತ್ಕಾಲಿನ ಸಭೆಯಲ್ಲಿ ಹೇಳಿದೆ.

ಮುಂಬೈನಲ್ಲಿ ಭಯೋತ್ಪಾದಕ ನಿಗ್ರಹ ದಳದಿಂದ ಇಬ್ಬರ ಬಂಧನ !

ಕಾನೂನುಬಾಹಿರ ಅಂತರಾಷ್ಟ್ರೀಯ ಸಂಪರ್ಕ ಕೇಂದ್ರವನ್ನು ನಡೆಸುತ್ತಿರುವ ಸಂಶಯದ ಮೇರೆಗೆ ಪೊಲೀಸರು ರತ್ನಾಗಿರಿಯಿಂದ ಇಬ್ಬರನ್ನು ಬಂಧಿಸಿದ್ದಾರೆ. ಭಯೋತ್ಪಾದಕ ನಿಗ್ರಹ ದಳದಿಂದ ದೊರೆತ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.

ಪಠಾಣಕೋಟ (ಪಂಜಾಬ್) ವಾಯುದಳದ ನೆಲೆಯ ಮೇಲೆ ದಾಳಿ ಮಾಡಲು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರು ! – ಇಬ್ಬರು ವಿದೇಶಿ ಪತ್ರಕರ್ತರ ಪುಸ್ತಕದಲ್ಲಿ ಹೇಳಿಕೆ

ಇಂತಹ ಭ್ರಷ್ಟ ಮತ್ತು ದೇಶದ್ರೋಹಿ ಪೊಲೀಸ್ ಅಧಿಕಾರಿಗಳನ್ನು ಗಲ್ಲಿಗೇರಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?

ಅಮೃತಸರದಲ್ಲಿ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಟ್ ಪತ್ತೆ !

ರಂಜಿತ ಎವೆನ್ಯುಬೆಂಬ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಡ ಪತ್ತೆಯಾದ ನಂತರ ಪೊಲೀಸ್ ಮತ್ತು ಬಾಂಬ್ ಶೋಧಕ – ನಾಶಕ ದಳದವರು ಆ ಗ್ರಾನೈಡಅನ್ನು ನಿಷ್ಕ್ರಿಯಗೊಳಿಸಿದರು.

ಜಮ್ಮುವಿನಲ್ಲಿನ ಬಿಜೆಪಿ ನಾಯಕನ ಮನೆಯ ಮೇಲಾದ ಗ್ರೆನೆಡ್ ದಾಳಿಯಲ್ಲಿ 3 ವರ್ಷದ ಹುಡುಗನ ಸಾವು

ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ.