ಜಮ್ಮುವಿನಲ್ಲಿನ ಬಿಜೆಪಿ ನಾಯಕನ ಮನೆಯ ಮೇಲಾದ ಗ್ರೆನೆಡ್ ದಾಳಿಯಲ್ಲಿ 3 ವರ್ಷದ ಹುಡುಗನ ಸಾವು

ಜಮ್ಮು ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರನ್ನು ನಾಶ ಮಾಡಲು ಪಾಕ್‍ಅನ್ನು ನಾಶಗೊಳಿಸಿ !

ಜಮ್ಮು (ಜಮ್ಮು-ಕಾಶ್ಮೀರ) – ಇಲ್ಲಿಯ ರಾಜೌರಿ ಪ್ರದೇಶದಲ್ಲಿ ಆಗಸ್ಟ 12 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ. ವೀರ ಸಿಂಹನು ಜಸಬೀರ ಸಿಂಹ ಇವರ ಸೋದರಳಿಯನಾಗಿದ್ದಾನೆ.