‘ಯೂಟ್ಯೂಬ್’ನಿಂದಲೂ ತಾಲಿಬಾನ್ ಖಾತೆಗಳ ಮೇಲೆ ನಿಷೇಧ

ತಾಲಿಬಾನ್ ಮೂಲತಃ ಭಯೋತ್ಪಾದಕ ಸಂಘಟನೆಯಾಗಿರುವಾಗ, ಈ ಮೊದಲು ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ ಅದರ ಖಾತೆಗಳನ್ನು ನಿಷೇಧಿಸಿಲ್ಲ ಅಥವಾ ಅವುಗಳನ್ನು ತೆರೆಯುವುದನ್ನು ತಡೆಯಲು ಏಕೆ ಪ್ರಯತ್ನಿಸಿಲ್ಲ ? ಈಗ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ ನಿಷೇಧಿಸುವುದು ಅಂದರೆ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತಾಗಿದೆ.

ನವ ದೆಹಲಿ : ಫೇಸ್‌ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್‌ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು. ಒಂದು ವೇಳೆ ಇಂತಹ ಖಾತೆಗಳು ಇದ್ದರೆ, ಅವರು ಇಲ್ಲಿಯವರೆಗೆ ಅವುಗಳನ್ನು ಏಕೆ ನಿಷೇಧಿಸಿಲ್ಲ, ಎಂಬುದನ್ನು ಹೇಳಬೇಕು ! – ಸಂಪಾದಕರು) ‘ತಾಲಿಬಾನ್ ಗೆ ಉತ್ತೇಜಿಸುವ ಮಾಹಿತಿಯನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಲಾಗುವುದು’. ಎಂದು ಫೇಸ್‌ಬುಕ್ ತಿಳಿಸಿದೆ.