ಕೆಲವು ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ !

ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ಭಾರತದ ವಿದೇಶ ಮಂತ್ರಿ ಎಸ್. ಜಯಶಂಕರ ಇವರಿಂದ ಪಾಕ್ ಮತ್ತು ಚೀನಾದ ಹೆಸರು ಹೇಳದೆ ಟೀಕೆ !

ಹೀಗೆ ಅಂತರರಾಷ್ಟ್ರೀಯ ಸಭೆಯಲ್ಲಿ ಭಾರತವು ಪಾಕ್ ಮತ್ತು ಚೀನಾದ ಹೆಸರುಗಳನ್ನು ಹೇಳಲು ಏಕೆ ಹಿಂಜರಿಯುತ್ತದೆ ? ‘ಶತ್ರು ರಾಷ್ಟ್ರಗಳ ಹೆಸರು ತೆಗೆದುಕೊಳ್ಳಲು ಹಿಂದೇಟು ಹಾಕುವ ಹಿಂದೆ ಇವರ ಉದ್ದೇಶವೇನಿರಬಹುದು ?’ ಎಂಬ ಪ್ರಶ್ನೆಯು ಜನತೆಯ ಮನಸ್ಸಿನಲ್ಲಿ ಉದ್ಭವಿಸಿದರೆ ಅದರಲ್ಲಿ ಆಶ್ಚರ್ಯವೇನಿದೆ ?

ನ್ಯೂಯಾರ್ಕ್ (ಅಮೇರಿಕಾ) – ಭಯೋತ್ಪಾದಕರ ಕಾರ್ಯಾಚರಣೆಗಳಿಂದ ಅಂತರಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಲಿದೆ. ಕೆಲವು ದೇಶಗಳು ‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದವು, ಆದರೆ ಈಗ ಆ ಸಂಕಲ್ಪವು ದುರ್ಬಲವಾಗಿದೆ. ಈ ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ. ಇವುಗಳಿಗೆ ಸ್ವಾತಂತ್ರ್ಯ ನೀಡುವ ಅವಶ್ಯಕತೆ ಇಲ್ಲ ಎಂದು ಭಾರತದ ವಿದೇಶ ಮಂತ್ರಿ ಎಸ್. ಜಯಶಂಕರ ಇವರು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ಉಚ್ಚಮಟ್ಟದ ಸಭೆಯನ್ನು ಸಂಬೋಧಿಸುವಾಗ ಹೇಳಿದರು.

ಎಸ್. ಜಯಶಂಕರ್ ಇವರು ಮುಂದುವರಿದು ಹೀಗೆಂದರು,

1. ಭಯೋತ್ಪಾದನೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದರಿಂದಾದ ಹಾನಿಯಿಂದಾಗಿ ಭಾರತದ ಮೇಲೆ ಆಳವಾದ ಪರಿಣಾಮವಾಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ವಂಶಿಕ ಗುಂಪನ್ನು ಜೋಡಿಸಬಾರದು.

2. ಎಲ್ಲ ವಿಧದ ಭಯೋತ್ಪಾದನೆಯನ್ನು ನಿಷೇಧಿಸಬೇಕಿದೆ. ಅದು ಯಾವುದೇ ರೀತಿಯಲ್ಲಿ ನ್ಯಾಯಯುತವಾಗಿರಲು ಸಾಧ್ಯವಿಲ್ಲ.

3. ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಸಂಘಟನೆಯು ಆರ್ಥಿಕ ಸ್ರೋತಗಳನ್ನು ಇನ್ನೂ ಭದ್ರಗೊಳಿಸಿದೆ. ಹತ್ಯೆಯ ಭಕ್ಷೀಸನ್ನು ಈಗ ‘ಬಿಟ್-ಕಾಯಿನ್ ‘ನ ರೂಪದಲ್ಲಿ ನೀಡಲಾಗುತ್ತಿದೆ.

‘ಬಿಟ್ ಕಾಯಿನ್’ಅಂದರೆ ಏನು ?

ಬಿಟ್ ಕಾಯಿನ್, ಲೈಟ್ ಕಾಯಿನ್, ಟ್ರಿಪಲ್, ಎಥೆರಿಯಂ ಮತ್ತು ಜೆಡ್ ಕ್ಯಾಶ್ ಎಂಬ ಹೆಸರಿನ ‘ಕ್ರಿಪ್ಟೋಕರೆನ್ಸಿ’ ಗಳು ಪ್ರಸಿದ್ಧವಾಗಿವೆ. ಕ್ರಿಪ್ಟೋಕರೆನ್ಸಿ ಯು ‘ಆಭಾಸದ ಚಲಾವಣೆಯ ನಾಣ್ಯ”ಗಳಾಗಿವೆ. ಚಾಲ್ತಿಯಲ್ಲಿರುವ ನೋಟುಗಳಿಗೆ ಪರ್ಯಾಯವಾಗಿ ಇದು ಡಿಜಿಟಲ್ ಕರೆನ್ಸಿ ಆಗಿದೆ. ಈ ಕರೆನ್ಸಿಯು ಭಾರತೀಯ ರೂಪಾಯಿ, ಅಮೆರಿಕನ್ ಡಾಲರ್ ಅಥವಾ ಬ್ರಿಟೀಷ್ ಪೌಂಡ್ ನಂತೆ ಇರುವುದಿಲ್ಲ. ಯಾವುದೇ ದೇಶದ ಸರಕಾರ ಹಾಗೂ ಬ್ಯಾಂಕ್ ಕರೆನ್ಸಿಯನ್ನು ಮುದ್ರಿಸುವುದಿಲ್ಲ. ಕ್ರಿಪ್ಟೋಕರೆನ್ಸಿ ಯು ಆನ್ಲೈನ್ನಲ್ಲಿ ಉಪಲಬ್ಧವಿರುತ್ತದೆ. ಜಗತ್ತಿನಲ್ಲಿ ರೂಪಾಯಿ, ಡಾಲರ್, ಯುರೋ, ಪೌಂಡ್ ಹೀಗೆ ವಿವಿಧ ಚಲಾವಣೆಯ ನಾಣ್ಯಗಳಿವೆ, ಹಾಗೆಯೇ ಜಗತ್ತಿನಾದ್ಯಂತ ವಿವಿಧ ಕ್ರಿಪ್ಟೋಕರೆನ್ಸಿಗಳಿವೆ. ಇದರಲ್ಲಿ ಬಿಟ್ ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಯನ್ನು ಸುಮಾರು ಒಂದು ದಶಕದ ಹಿಂದೆ ಆರಂಭಿಸಲಾಗಿತ್ತು. ಫೇಸ್ಬುಕ್ ತನ್ನ ‘ಲಿಬ್ರ’ ಎಂಬ ಹೆಸರಿನ ಕ್ರಿಪ್ಟೋಕರೆನ್ಸಿಯನ್ನು ಆರಂಭಿಸುವ ಸಿದ್ಧತೆ ನಡೆಸುತ್ತಿದೆ.