‘ತಾಲಿಬಾನವು ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯಸ್ಥಾನವನ್ನಾಗಿ ಮಾಡಬಾರದು !’(ಅಂತೆ) – ತಾಲಿಬಾನ್ ಜೊತೆ ಸ್ನೇಹ ಸಂಬಂಧವನ್ನು ಸ್ಥಾಪಿಸಲು ಚೀನಾ ಟೊಳ್ಳು ಎಚ್ಚರಿಕೆ

ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನ ಚೀನಾದ ಸ್ನೇಹಿತ ಆಗಿದೆ. ತಾಲಿಬಾನರ ಜೊತೆ ಸ್ನೇಹದ ಸಂಬಂಧವಿರಲಿದೆ ಎಂದೂ ಕೂಡಾ ಚೀನಾ ಹೇಳಿತ್ತು, ಹೀಗಿರುವಾಗ ಈ ಎಚ್ಚರಿಕೆಗೆ ಅರ್ಥವೇನು ? ಅಂತರರಾಷ್ಟ್ರೀಯ ಸಮೂಹವು ಚೀನಾದ ಈ ಹೇಳಿಕೆಯ ಮೇಲೆ ಎಂದಿಗೂ ವಿಶ್ವಾಸ ಇಡಬಾರದು !

ನ್ಯೂಯಾರ್ಕ್ (ಅಮೇರಿಕಾ) – ನೀವು (ತಾಲಿಬಾನ್) ಶಾಂತಿಯಿಂದ ರಾಜ್ಯ ಮಾಡಿ; ಆದರೆ ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯ ಸ್ಥಾನವನ್ನಾಗಿ ಮಾಡದಿರಿ, ಎಂದು ಟೊಳ್ಳು ಎಚ್ಚರಿಕೆಯನ್ನು ಚೀನಾವು ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿನ ಆಪತ್ಕಾಲಿನ ಸಭೆಯಲ್ಲಿ ಹೇಳಿದೆ. ಚೀನಾವು ಭದ್ರತಾ ಪರಿಷತ್ತಿನ ಉಪ ಖಾಯಂ ಪ್ರತಿನಿಧಿ ಗೆಂಗ ಶುಅಂಗ ಇವರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ದಿನದ ಮೊದಲು ಚೀನಾ ತಾಲಿಬಾನದೊಂದಿಗೆ ‘ಸ್ನೇಹ ಸಂಬಂಧ’ ಇಡುವುದಾಗಿ ಹೇಳಿದ್ದು ಮತ್ತು ಅದರ ಮರುದಿನವೇ ಈ ಹೇಳಿಕೆ ನೀಡಿದೆ.

ಗೆಂಗ್ ಶುಆಂಗ

೧. ಗೆಂಗ್ ಶುಆಂಗರವರು ಇದರ ಬಗ್ಗೆ ಮಾತನಾಡುವಾಗ ಮುಂದಿನಂತೆ ಹೇಳಿದರು – ಎಲ್ಲಾ ದೇಶಗಳ ಅಂತರರಾಷ್ಟ್ರೀಯ ಕಾನೂನು ಮತ್ತು ಸುರಕ್ಷಾ ಪರಿಷತಿನ ಠರಾವಿಗೆ ಅನುಗುಣವಾಗಿ ಸ್ವಂತದ ಜವಾಬ್ದಾರಿಯನ್ನು ಪೂರ್ಣಮಾಡಬೇಕು. ಇಸ್ಲಾಮಿಕ್ ಸ್ಟೇಟ್, ಅಲ ಕಾಯದಾಯಂತಹ ಭಯೋತ್ಪಾದಕದೊಂದಿಗೆ ಹೋರಾಡಲು ಒಮ್ಮತದಿಂದ ಕೆಲಸ ಮಾಡಬೇಕು. ಅಲ್ ಕಾಯದಾ ಪೂರ್ವ ತುರ್ಕಸ್ತಾನದಲ್ಲಿ ಮತ್ತೆ ಸಕ್ರಿಯವಾಗುವ ಸಾಧ್ಯತೆ ಇದೆ, ಆದ್ದರಿಂದ ಆ ಕಡೆ ವಿಶೇಷ ಗಮನ ಕೊಡುವ ಅವಶ್ಯಕತೆ ಇದೆ.

೨. ‘ಈಸ್ಟ್ ತುರ್ಕಸ್ತಾನ ಇಸ್ಲಾಮಿಕ್ ಮೂವ ಮೆಂಟ್’ ಇದು ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಕಾಯಿದಾದ ಒಂದು ಶಾಖೆಯಾಗಿದೆ ಮತ್ತು ಅದು ಚೀನಾದ ಉಘುರ ಮುಸಲ್ಮಾನ ಬಹುಸಂಖ್ಯಾತರಿರುವ ಶಿಂಜಿಯಾಂಗ ಪ್ರಾಂತ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ.