ಪ್ರಧಾನಿ ಮೋದಿಯವರಿಂದ ಆನ್‌ಲೈನ್ ಮೂಲಕ ಸೋಮನಾಥ ದೇವಾಲಯದ ನವೀಕರಣದ ಉದ್ಘಾಟನೆ

ಭಯೋತ್ಪಾದನೆಯು ದೀರ್ಘ ಕಾಲದ ವರೆಗೆ ಮಾನವೀಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ, ಅದಕ್ಕೆ ಸೋಮನಾಥ ದೇವಸ್ಥಾನವು ಸಂಕೇತವಾಗಿದೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಕರ್ಣಾವತಿ (ಗುಜರಾತ) – ಭಯೋತ್ಪಾದನೆಯಿಂದ ಶ್ರದ್ಧೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಸೋಮನಾಥ ದೇವಾಲಯವು ನಮ್ಮ ಶ್ರದ್ಧೆಯ ಸ್ಫೂರ್ತಿ ಸ್ಥಾನವಾಗಿದೆ. ಸೋಮನಾಥ ದೇವಾಲಯದ ಅಸ್ತಿತ್ವ ನಾಶಮಾಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಅದನ್ನು ಎಷ್ಟು ಬಾರಿ ಕೆಡವಲಾಗಿದೆಯೋ, ಅಷ್ಟೇ ಬಾರಿ ಅದನ್ನು ಪುನರ್ನಿರ್ಮಿಸಲಾಯಿತು. ಭಯೋತ್ಪಾದನೆಯು ಹೆಚ್ಚು ಕಾಲ ಮಾನವೀಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ಅದರ ಅಸ್ತಿತ್ವ ಶಾಶ್ವತವಾಗಲಾರದು, ಇದು ಸೋಮನಾಥ ದೇವಾಲಯದ ಇತಿಹಾಸದಿಂದ ಗಮನಕ್ಕೆ ಬರುತ್ತದೆ, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಗುಜರಾತ ಕರಾವಳಿಯಲ್ಲಿನ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸುವಾಗ ಅವರು ಮಾತನಾಡುತ್ತಿದ್ದರು. ‘ಜಗತ್ತು ಇನ್ನೂ ಭಯೋತ್ಪಾದಕ ವಿಚಾರಗಳಿಂದ ಬಳಲುತ್ತಿದೆ, ಸೋಮನಾಥ ದೇವಾಲಯವು ಸಮೃದ್ಧ ಭಾರತದ ಸಂಕೇತವಾಗಿದೆ’, ಎಂದು ಮೋದಿಯವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ ಶಾ, ಮುಖ್ಯಮಂತ್ರಿ ವಿಜvಯ ರೂಪಾಣಿ ಮತ್ತು ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಇವರೂ ಕೂಡ ಉಪಸ್ಥಿತರಿದ್ದರು.
ಮೋದಿ ಅವರು, ನಾನು ಲೋಕಮಾತಾ ಅಹಲ್ಯಾಬಾಯಿ ಹೋಳಕರ ಅವರನ್ನು ವಂದಿಸುತ್ತೇನೆ. ಅವರು ಕಾಶಿ ವಿಶ್ವನಾಥನಿಂದ ಸೋಮನಾಥದವರೆಗೆ ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದರು. ಸೋಮನಾಥವು ಯುಗಯುಗಗಳಿಂದ ಸದಾಶಿವನ ಭೂಮಿಯಾಗಿ ಉಳಿದಿದೆ. ಹಿಂದೂ ಧರ್ಮಶಾಸ್ತ್ರದಲ್ಲಿ, ಯಾರು ಕಲ್ಯಾಣವನ್ನು ಮಾಡುತ್ತಾನೆಯೋ ಅವನು ಶಿವ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ, ಶಿವನು ನಮ್ಮ ಶ್ರದ್ಧೆಯ ಆಚೆಗಿದ್ದಾನೆ. ಸೋಮನಾಥ ದೇವಾಲಯವು ಸಾವಿರಾರು ವರ್ಷಗಳಿಂದ ನಮ್ಮ ಋಷಿಗಳು ‘ಜ್ಞಾನದ ಕ್ಷೇತ್ರ’ ಎಂದು ಹೇಳಿದ್ದಾರೆ. ಇಂದು, ಈ ದೇವಾಲಯವು ಇಡೀ ಜಗತ್ತಿಗೆ ಸವಾಲನ್ನು ನೀಡುತ್ತಾ, ‘ಅಸತ್ಯವು ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ನೀಡಿದೆ.

೭೧ ಅಡಿ ಪಾರ್ವತಿ ದೇವಾಲಯವನ್ನು ಸೋಮನಾಥ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗುವುದು !

ಸೋಮನಾಥ ದೇವಾಲಯದ ನವೀಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳನ್ನು ಆರಂಭಿಸಿದರು. ಸೋಮನಾಥ ಸಮುದ್ರ ದರ್ಶನ ಪದಪಥ, ಪ್ರದರ್ಶನ ಕೇಂದ್ರ ಮತ್ತು ಹೊಸ ಅಹಲ್ಯಾಬಾಯಿ ಹೋಳಕರರ ದೇವಾಲಯವನ್ನು ಪ್ರದಾನಿ ಮೋದಿಯವರು ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು. ಹಾಗೆಯೇ ಪಾರ್ವತಿ ದೇವಾಲಯದ ಅಡಿಪಾಯವನ್ನು ಹಾಕಲಾಯಿತು. ಪಾರ್ವತಿ ದೇವಾಲಯವನ್ನು ಬಿಳಿ ಕಲ್ಲಿನಲ್ಲಿ ನಿರ್ಮಿಸಲಾಗುವುದು. ಅದು ೭೧ ಅಡಿ ಎತ್ತರವಿರುತ್ತದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಸೋಮನಾಥ ದೇವಾಲಯದ ಟ್ರಸ್ಟಿಗಳು(ವಿಶ್ವಸ್ಥ) ಆಗಿದ್ದಾರೆ.