‘ಮರ್ಯಾದೆಯನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು !’(ಅಂತೆ) – ಟ್ವಿಟರ್

ಟ್ವಿಟರ್‌ನಿಂದ ತಾಲಿಬಾನಿಗಳ ಖಾತೆ ಮುಂದುವರಿಕೆ !

ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹ ಇವರ ಖಾತೆ ಮಾತ್ರ ನಿಷ್ಕ್ರೀಯ!

ತಾಲಿಬಾನ್ ಇದೊಂದು ಭಯೋತ್ಪಾದಕ ಸಂಘಟನೆಯಾಗಿದ್ದರಿಂದ ಅದರ ಭಯೋತ್ಪಾದಕ ಖಾತೆಯನ್ನು ಬಂದ್ ಮಾಡುವ ಬದಲು ಅದಕ್ಕಾಗಿ ಹೋರಾಡುವ ಸಾಲೇಹನ ಖಾತೆಯನ್ನು ಬಂದ್ ಮಾಡಿ ಟ್ವಿಟರ್ ತನ್ನ ಮಾನವತಾ ವಿರೋಧಿ ಮಾನಸಿಕತೆಯನ್ನು ತೋರಿಸಿದೆ. ಜಗತ್ತಿನಾದ್ಯಂತ ಮಾನವತಾವಾದಿಗಳು ಟ್ವಿಟರ್‌ಅನ್ನೇ ಬಹಿಷ್ಕರಿಸುವ ಸಮಯಬಂದಿದೆ !

ನವದೆಹಲಿ – ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ.

ಟ್ವಿಟರ್ ಸಾಲೆಹನ ಖಾತೆಯನ್ನು ಸ್ಥಗಿತಗೊಳಿಸಿದ್ದರೂ, ಎಷ್ಟೋ ತಾಲಿಬಾನಿ ಭಯೋತ್ಪಾದಕರ ಟ್ವಿಟರ್ ಖಾತೆ ಇನ್ನೂ ನಡೆಯುತ್ತಿದೆ. ಇದರ ಮೇಲೆ ನಿಷೇಧ ಹೇರಿಲ್ಲ. ತಾಲಿಬಾನ್ ವಕ್ತಾರರಾದ ಜಬಿಹುಲ್ಲಾಹ ಮುಜಾಹಿದ್‌ನ ಖಾತೆ ಇನ್ನೂ ನಡೆಯುತ್ತಿದ್ದು ಅದರಲ್ಲಿ ಆತನಿಗೆ ೩ ಲಕ್ಷಕ್ಕೂ ಹೆಚ್ಚು ಅನುಯಾಯಿ(ಫಾಲೊವರ್ಸ್)ಗಳಿದ್ದಾರೆ. ಇನ್ನೋರ್ವ ವಕ್ತಾರರಾದ ಸುಹೈಲ್ ಶಾಹೀನ್ ಇವನ ಖಾತೆಯೂ ನಡೆಯುತ್ತಿದ್ದು ಅದಕ್ಕೂ ೩ ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳು ಇದ್ದಾರೆ ಹಾಗೂ ಯುಸುಫ್ ಅಹಮದಿನ ಖಾತೆಯಲ್ಲಿ ೬೦ ಸಾವಿರ ಅನುಯಾಯಿಗಳಿದ್ದಾರೆ. ಟ್ವಿಟರ್, ನಾವು ತಾಲಿಬಾನ್ ಖಾತೆಯ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದೇವೆ. ಅವರು ಮರ್ಯಾದೆಯನ್ನು ಮೀರಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಫೆಸ್‌ಬುಕ್ ಹಾಗೂ ಯುಟ್ಯುಬ್ ಇವು ತಾಲಿಬಾನ್‌ನ ಖಾತೆಯ ಮೇಲೆ ‘ತಾಲಿಬಾನಿ ಭಯೋತ್ಪಾದಕ ಸಂಘಟನೆಯಾಗಿದೆ’, ಎಂದು ಹೇಳುತ್ತಾ ಈ ಮೊದಲೇ ನಿಷೇಧ ಹೇರಿದೆ.