ಮುಂಬೈನಲ್ಲಿ ಭಯೋತ್ಪಾದಕ ನಿಗ್ರಹ ದಳದಿಂದ ಇಬ್ಬರ ಬಂಧನ !

ರತ್ನಾಗಿರಿಯಲ್ಲಿ ಕಾನೂನುಬಾಹಿರವಾಗಿ ಅಂತರರಾಷ್ಟ್ರೀಯ ಸಂಪರ್ಕ ಕೇಂದ್ರವನ್ನು ನಡೆಸುತ್ತಿರುವ ಪ್ರಕರಣ

ಮುಂಬಯಿ – ಕಾನೂನುಬಾಹಿರ ಅಂತರಾಷ್ಟ್ರೀಯ ಸಂಪರ್ಕ ಕೇಂದ್ರವನ್ನು ನಡೆಸುತ್ತಿರುವ ಸಂಶಯದ ಮೇರೆಗೆ ಪೊಲೀಸರು ರತ್ನಾಗಿರಿಯಿಂದ ಇಬ್ಬರನ್ನು ಬಂಧಿಸಿದ್ದಾರೆ. ಭಯೋತ್ಪಾದಕ ನಿಗ್ರಹ ದಳದಿಂದ ದೊರೆತ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ. ದೇಶವಿರೋಧಿ ಕಾರ್ಯಗಳಿಗಾಗಿ ಅಂತರರಾಷ್ಟ್ರೀಯ ಸಂಪರ್ಕ ಕೇಂದ್ರ ಕಾರ್ಯ ಮಾಡುತ್ತಿತ್ತೇ ಎಂಬ ದೃಷ್ಟಿಯಿಂದ ಪರಿಶೀಲನೆ ಮಾಡಲಾಗುತ್ತಿದೆ.

‘ರತ್ನಾಗಿರಿಯಿಂದ ಅಂತರರಾಷ್ಟ್ರೀಯ ಸಂಪರ್ಕ ಮಾಡಲಾಗುತ್ತಿದೆ’, ಎಂಬ ಮಾಹಿತಿಯು ಮುಂಬಯಿ ಭಯೋತ್ಪಾದಕ ನಿಗ್ರಹ ದಳಕ್ಕೆ ದೊರೆತಿತ್ತು. ಅನಂತರ ರತ್ನಾಗಿರಿಯ ಆಠವಾಡ ಬಜಾರ್ ನಲ್ಲಿನ ಮೊಬೈಲ್ ಮಾರಾಟ ಮಾಡುವ ಅಂಗಡಿಯ ಮಾಲಿಕ ಅಲಂಕಾರ್ ಅರವಿಂದ ವಿಚಾರೆ ಇವನನ್ನು ಬಂಧಿಸಲಾಗಿತ್ತು. ಈ ಅಂಗಡಿಯಲ್ಲಿ ಸಂಪರ್ಕದ ಸರ್ವರನ್ನು ಅಳವಡಿಸಲಾಗಿತ್ತು. ಈ ಸರ್ವರ್ ನಿಂದಲೇ ಅಂತರರಾಷ್ಟ್ರೀಯ ಸಂಪರ್ಕವು ನಡೆಯುತ್ತಿತ್ತು. ಇದಕ್ಕಾಗಿ ಒಂದು ಸಂಸ್ಥೆಯ ಸಹಾಯ ಪಡೆಯಲಾಗಿತ್ತು. ದಳಕ್ಕೆ ದೊರೆತ ಮಾಹಿತಿಯಂತೆ ಈ ಅಂತರರಾಷ್ಟ್ರೀಯ ‘ಕಾಲಿಂಗ್’ಗಾಗಿ ಸರ್ವರ್ ನ್ನು ರತ್ನಾಗಿರಿಯಲ್ಲಿ ಮತ್ತು ‘ಕಾಲಿಂಗ್’ಸೆಂಟರನ್ನು ವಾಂದ್ರೆಯ ಒಂದು ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ‘ಈ ಅಂತರಾಷ್ಟ್ರೀಯ ಸಂಪರ್ಕವು ‘ವೈಪ್’ (VOIP) ಮೂಲಕ ನಡೆಯುತ್ತಿತ್ತು’. ‘ಭಯೋತ್ಪಾದಕ ಕೃತ್ಯಗಳಿಗಾಗಿ ಯಾವಾಗಲೂ ಈ ಪದ್ಧತಿಯನ್ನು ಬಳಸಲಾಗುತ್ತದೆ’ ಎಂದು ತಂತ್ರಜ್ಞರು ಹೇಳುತ್ತಾರೆ. ಈ ಪ್ರಕರಣದಲ್ಲಿನ ಸೂತ್ರಧಾರ ಫೈಜಲ್ ರಜ್ಜಾಕ ಅಲೀ ರಜ್ಜಾಕ ಸಿದ್ದಿಕಿ (ಪನವೆಲ್, ನವಿ ಮುಂಬೈ) ಇವನನ್ನು ರತ್ನಗಿರಿಯಲ್ಲಿ ಸಾಳವಿ ಬಸ್ ನಿಲ್ದಾಣದಿಂದ ಬಂಧಿಸಲಾಗಿದೆ. ಅಲಂಕಾರ ವಿಚಾರೆ ಮತ್ತು ಫೈಜಲ್ ಸಿದ್ದಿಕಿ ಇವರಿಬ್ಬರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ನೋಂದಾಯಿಸಲಾಗಿದೆ.