ಖಲಿಸ್ತಾನಿ ಭಯೋತ್ಪಾದಕರಿಂದ ಪಂಜಾಬನಲ್ಲಿಯ ಧಾರ್ಮಿಕ ಸ್ಥಳಗಳ ಮೇಲೆ ಆಕ್ರಮಣ ನಡೆಸುವ ಹುನ್ನಾರ

ಐ.ಎಸ್.ಐ. ನಿಂದ ಸಹಾಯ

ಅಮೃತಸರ(ಪಂಜಾಬ) – ಪಾಕಿನ ಗುಪ್ತಚರ ದಳ ಐ.ಎಸ್.ಐ.ಯು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲಸಾ ಇಂಟರನ್ಯಾಷನಲ್‌ನೊಂದಿಗೆ ಕೈಜೋಡಿಸಿ ಪಂಜಾಬನಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ನಾಯಕರ ಮೇಲೆ ದಾಳಿ ಮಾಡುವ ಹುನ್ನಾರ ಮಾಡುತ್ತಿದೆ. ಎಂಬ ಮಾಹಿತಿಯನ್ನು ಬಂಧಿತ ಖಲಿಸ್ತಾನಿ ಭಯೋತ್ಪಾದಕ ಸಮಿ ಮತ್ತು ಅಮೃತ ಪಾಲ ಸಿಂಹ ಇಬ್ಬರು ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾರೆ. ಈ ಭಯೋತ್ಪಾದಕರ ಸಹಚರರು ಪಂಜಾಬನ ನಗರಗಳಾದ ಅಮೃತಸರ, ಹೋಶಿಯಾರಪುರ, ಜಾಲಂಧರ ಮತ್ತು ಲುಧಿಯಾನ ಮುಂತಾದ ಕಡೆಗಳಲ್ಲಿ ಅಡಗಿ ಕೊಂಡಿದ್ದಾರೆ. (ಜಿಹಾದಿ ಭಯೋತ್ಪಾದಕರ ನಂತರ ಈಗ ಖಲಿಸ್ತಾನಿಗಳು ಸಹ ಹಿಂದೂಗಳ ಧಾರ್ಮಿಕ ಸ್ಥಳ ಮತ್ತು ಅವರ ನಾಯಕರನ್ನು ಗುರಿ ಮಾಡುವರು ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)