ಅಮೃತಸರ (ಪಂಜಾಬ್)ದ ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ !

ಪಂಜಾಬಿನ ಅಮೃತಸರ ನಗರದ ಬಳಿ ಇರುವ ಒಂದು ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ (ವಾಯು ಸಂಚಾರ ಮಾಡುವ ಯಂತ್ರ) ಮಾಧ್ಯಮದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಗಳನ್ನು ಕಳಿಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ಟಿಫಿನ್ ಬಾಂಬ್ (ಊಟದ ಡಬ್ಬಿಯಲ್ಲಿ ಇಡಲಾದ ಬಾಂಬ್) ಇವೆ.

ದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಕ್ತಪಾತದ ಸಿದ್ಧತೆಯಲ್ಲಿ ಭಯೋತ್ಪಾದಕರು !

ದೇಶದ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವಾಗ ಭದ್ರತೆಯ ದೃಷ್ಟಿಯಲ್ಲಿಯೂ ಎಚ್ಚರಿಕೆಯನ್ನು ನಿರ್ವಹಿಸಲಾಗುತ್ತಿದೆ. ಭಯೋತ್ಪಾದಕರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಭಯೋತ್ಪಾದಕರಿಗೆ ಒದಗಿಸಲಾಗುವ ಹಣಕಾಸು ಹಾಗೂ ತಾಂತ್ರಿಕ ಸಹಾಯವನ್ನು ತಡೆಗಟ್ಟಲು ಪ್ರಯತ್ನಿಸುವೆವು !

ಆಗಸ್ಟ್ 19 ರಂದು ಜಯಶಂಕರರು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.

ತ್ರಿಪುರಾದಲ್ಲಿ ಭಯೋತ್ಪಾದಕರ ಆಕ್ರಮಣದಲ್ಲಿ ಇಬ್ಬರು ಸೈನಿಕರು ಹುತಾತ್ಮರು!

ರಾಜ್ಯದ ಧಲಾಯಿ ಜಿಲ್ಲೆಯ ಬಾಂಗ್ಲಾದೇಶ ಗಡಿಯ ಹತ್ತಿರ ಇರುವ ಗಡಿ ಸುರಕ್ಷಾ ದಳದ ಚೌಕಿಯ ಮೇಲೆ ಆತಂಕವಾದಿಗಳು ನಡೆಸಿದ ಆಕ್ರಮಣದಲ್ಲಿ ಸೀಮಾ ಸುರಕ್ಷಾ ದಳದ ಇಬ್ಬರು ಸೈನಿಕರು ಹುತಾತ್ಮರಾದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ಗೆ ಸಹಾಯ ಮಾಡಲು ಹೋದ ಪಾಕಿಸ್ತಾನದ ಮದರಸಾಗಳ ಯುವಕರನ್ನು ಕೊಲ್ಲಲ್ಪಡುತ್ತಿದ್ದಾರೆ !

ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.

ಅಪಘಾನಿಸ್ತಾನದಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲಿನ ಗೋಲಿಬಾರಿನಲ್ಲಿ ಸುರಕ್ಷಾ ಕರ್ಮಚಾರಿಯ ಮೃತ್ಯು

ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್‌ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ.

ಭಯೋತ್ಪಾದಕರಿಂದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚು !

ರಾಜ್ಯದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚನ್ನು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ರಾಜ್ಯದ ೧೪ ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಳೆದ ವಾರದಲ್ಲಿ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಸ್ಪೋಟಕ ಸಹಿತ ಬಂಧಿಸಿದ್ದರು.

ಜಿಹಾದಿ ಉಗ್ರಗಾಮಿಗಳಿಂದ ಜಮ್ಮುವಿನ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತ್ರ !

ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಅಫ್ಘಾನಿಸ್ತಾನದ ತಾಲಿಬಾನ್ ನಿಯಂತ್ರಿತ ಪ್ರದೇಶಕ್ಕೆ ಸ್ಥಳಾಂತರವಾಗುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು!

ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಿಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಇವು ತಮ್ಮ ನೆಲೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸಿವೆ, ಎಂದು ಅಫ್ಘಾನಿಸ್ತಾನ ಸರಕಾರವು ಭಾರತಕ್ಕೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಲು ತಿಳಿಸಿದೆ.

ಕಾಶ್ಮೀರದಲ್ಲಿ ನಡೆದ ಘರ್ಷಣೆಯಲ್ಲಿ ಲಷ್ಕರ್-ಎ-ತೋಯಿಬಾದ ಇಬ್ಬರು ಉಗ್ರರ ಸಾವು

ಜುಲೈ ೨೨ ರಂದು ಸೊಪೋರಾ ಪ್ರದೇಶದ ವಾರಪೋರಾ ಗ್ರಾಮದಲ್ಲಿ ಸೇನೆ ಮತ್ತು ಉಗ್ರರ ನಡುವೆ ರಾತ್ರಿವಿಡಿ ನಡೆದ ಘರ್ಷಣೆಯಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯ ‘ಲಷ್ಕರ್-ಎ-ತೋಯಿಬಾ’ಕ್ಕೆ ಸೇರಿದ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.