‘ಹಿಜಾಬ್ ಅನ್ನು ಧರಿಸದಿರುವುದರಿಂದಲೇ ಜಗತ್ತಿನಲ್ಲಿನ ಅತ್ಯಂತ ಹೆಚ್ಚು ಬಲಾತ್ಕಾರಗಳು ಭಾರತದಲ್ಲಿ ಆಗುತ್ತವೆ !’ – ಕಾಂಗ್ರೆಸ್ ನೇತಾರ ಜಮೀರ ಅಹಮದ

‘ಇಸ್ಲಾಮಿನಲ್ಲಿ ಹಿಜಾಬ ಅಂದರೆ ಪರದೆ. ವಯಸ್ಸಿಗೆ ಬಂದನಂತರ ಹುಡುಗಿಯರು ಹಿಜಾಬ ಧರಿಸಿ ತಮ್ಮ ಸೌಂದರ್ಯವನ್ನು ಅಡಗಿಸಿಡಬೇಕು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಬಲಾತ್ಕಾರಗಳು ಭಾರತದಲ್ಲಿ ನಡೆಯುತ್ತವೆ. ಇದರ ಕಾರಣವೇನು ? ಆ ಮಹಿಳೆಯು ತನ್ನ ಮುಖವನ್ನು ಅಡಗಿಸುವುದಿಲ್ಲ’, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಜಮೀರ ಅಹಮದರವರು ನೀಡಿದ್ದಾರೆ.

ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಒಡೆಯರ್ ಎಕ್ಸಪ್ರೆಸ್ ಎಂದು ಬದಲಾಯಿಸಿ ! – ಮೈಸೂರಿನ ಭಾಜಪದ ಶಾಸಕ ಪ್ರತಾಪ್ ಸಿಂಹರವರ ಬೇಡಿಕೆ

ಭಾಜಪದ ಶಾಸಕ ಪ್ರತಾಪ ಸಿಂಹ ಇವರು ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಬದಲಿಸಿ ಒಡೆಯರ ಎಕ್ಸಪ್ರೆಸ್ ಮಾಡುವಂತೆ ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಇವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಒರಿಸ್ಸಾದ ಒಂದು ಗ್ರಾಮದ ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನು ಗ್ರಾಮಸ್ಥರು ಮೌಖಿಕ ಹಾಗೂ ಲಿಖಿತ ಪರೀಕ್ಷೆ ತೆಗೆದುಕೊಂಡರು !

ಓರಿಸ್ಸಾ ರಾಜ್ಯದ ಪಂಚಾಯಿತಿ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಸಂದರ್ಭದಲ್ಲಿ ಸುಂದರಗಡ ಜಿಲ್ಲೆಯ ಮಾಲುಪಾಡಾ ಗ್ರಾಮಸ್ಥರು ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಒಂದು ಲಿಖಿತ ಹಾಗೂ ಮೌಖಿಕ ಪರೀಕ್ಷೆ ತೆಗೆದುಕೊಳ್ಳಲಾಯಿತು.

ಮಥುರಾದ ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿನ ಜನಸಂದಣಿಯಿಂದ ಉಸಿರುಗಟ್ಟಿ ವೃದ್ಧ ಭಕ್ತನ ಸಾವು

ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿ ಫೆಬ್ರವರಿ 12 ರಂದು ಏಕಾದಶಿಯ ದಿನ ಲಕ್ಷ್ಮಣ ಎಂಬ 65 ವಯಸ್ಸಿನ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಮಂದಿರ ವ್ಯವಸ್ಥಾಪನೆಯ ಅವರು ಮಾತ್ರ `ಪ್ರಸ್ತುತ ನಮ್ಮ ಹತ್ತಿರ ಯಾವುದೇ ಭಕ್ತನ ಸಾವಿನ ಮಾಹಿತಿ ಇಲ್ಲ’, ಎಂದು ಹೇಳಿದ್ದಾರೆ.

ಅಯೋಧ್ಯೆಯ ಶ್ರೀರಾಮಮಂದಿರದ ಮಾರ್ಗದಲ್ಲಿರುವ ವೃತ್ತಕ್ಕೆ ಲತಾಮಂಗೇಶ್ಕರ್ ಇವರ ಹೆಸರು ನೀಡುವೆವು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಘೋಷಣೆ

ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.

ಹಿಜಾಬ್ ಪ್ರಕರಣ ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ ! – ಸರ್ವೋಚ್ಚ ನ್ಯಾಯಾಲಯದ ಸಲಹೆ

ಕರ್ನಾಟಕದ ಹಿಜಾಬ್ ಪ್ರಕರಣದ ಬಗ್ಗೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಫೆಬ್ರುವರಿ ೧೧ ರಂದು ಪುನಃ ವಿಚಾರಣೆ ನಡೆಯಿತು. ‘ನಾವು ಯೋಗ್ಯ ಸಮಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಸುವೆವು.

ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಕೆಲವು ಜನರು ಹಿಜಾಬ್‌ನ ಪರವಾಗಿದ್ದಾರೆ, ಕೆಲವರು ಟೋಪಿಯ ಪರವಾಗಿದ್ದಾರೆ, ಹಾಗೂ ಇನ್ನೂ ಕೆಲವರು ಬೇರೆ ವಿಷಯದ ಪರವಾಗಿದ್ದಾರೆ. ಈ ದೇಶ ಒಂದು ಸಂಘ ಆಗಿದೆಯೇ ಅಥವಾ ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ? ಎಲ್ಲಕ್ಕೂ ಮಿಗಿಲಾಗಿ ಏನು ಇದೆ ದೇಶ ಅಥವಾ ಧರ್ಮ ? ಇದು ಆಶ್ಚರ್ಯಕರವಾಗಿದೆ.

ಸ್ಪೇನ್.ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯವಿಲ್ಲ

ಸ್ಪೇನ್ ಸರಕಾರವು ದೇಶದಲ್ಲಿ ಮಾಸ್ಕ ಧರಿಸಲು ಕಡ್ಡಾಯವಿಲ್ಲವೆಂದು ಘೋಷಿಸಿದೆ, ಈ ಮಾಹಿತಿ ಆರೋಗ್ಯ ಮಂತ್ರಿ ಕ್ಯಾರೋಲಿನಾ ಡಾರಿಯಾಸ ಇವರು ನೀಡಿದರು. ಈ ಪ್ರಸ್ತಾವಕ್ಕೆ ಮಂತ್ರಿಮಂಡಲ ಸಮ್ಮತಿ ನೀಡಿದೆ.

ಕರ್ಣಾವತಿಯಲ್ಲಿ ೨೦೦೮ ರಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೯ ಜನರು ತಪ್ಪಿತಸ್ಥರು ಹಾಗೂ ೨೮ ಜನರ ಖುಲಾಸೆ

೨೦೦೮ ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ೭೭ ಜನರಲ್ಲಿ ೪೯ ಜನರನ್ನು ತಪ್ಪಿತಸ್ಥರೆಂದು ನಿರ್ಧಸಲಾಸಿದೆ ಹಾಗೂ ೨೮ ಜನರ ಖುಲಾಸೆ ಗೊಳಿಸಲಾಗಿದೆ.

‘ಮಂಗಳಸೂತ್ರವು ಹಿಂದೂ ಮಹಿಳೆಯರ ಗುರುತಾಗಿರುವಂತೆಯೇ ಹಿಜಾಬ್ ಮುಸಲ್ಮಾನ ಮಹಿಳೆಯರ ಗುರುತಾಗಿದೆ !’ – ಕಾಂಗ್ರೆಸ್‌ನ ಶಾಸಕ ಟಿ.ಎನ್. ಪ್ರತಾಪನ್

ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !