ಒರಿಸ್ಸಾದ ಒಂದು ಗ್ರಾಮದ ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನು ಗ್ರಾಮಸ್ಥರು ಮೌಖಿಕ ಹಾಗೂ ಲಿಖಿತ ಪರೀಕ್ಷೆ ತೆಗೆದುಕೊಂಡರು !

೮ ಅಭ್ಯರ್ಥಿಯರ ಪೈಕಿ ಕೇವಲ ೩ ಅಭ್ಯರ್ಥಿಗಳು ಉತ್ತೀರ್ಣ !

ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರ ಮತದಾರರಲ್ಲಿ ಈ ರೀತಿಯ ಜಾಗೃತಿ ಮೂಡಿರುವುದು ಶ್ಲಾಘನೀಯವಾಗಿದೆ. ಆದರೂ ಇದು ಕೇವಲ ಒಂದು ಗ್ರಾಮದಲ್ಲಿ ಮಾತ್ರ ಆಗಿದೆ, ಇದು ಭಾರತೀಯರಿಗೆ ಲಜ್ಜಾಸ್ಪದ !

ರಾವೂರಕೆಲ (ಓರಿಸ್ಸಾ) – ಓರಿಸ್ಸಾ ರಾಜ್ಯದ ಪಂಚಾಯಿತಿ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಸಂದರ್ಭದಲ್ಲಿ ಸುಂದರಗಡ ಜಿಲ್ಲೆಯ ಮಾಲುಪಾಡಾ ಗ್ರಾಮಸ್ಥರು ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಒಂದು ಲಿಖಿತ ಹಾಗೂ ಮೌಖಿಕ ಪರೀಕ್ಷೆ ತೆಗೆದುಕೊಳ್ಳಲಾಯಿತು. ಈ ಪರೀಕ್ಷೆಯ ಉದ್ದೇಶ ‘ಈ ಅಭ್ಯರ್ಥಿಗಳು ನಾಗರೀಕರ ಸಮಸ್ಯೆ ದೂರ ಮಾಡಲು ಎಷ್ಟು ಗಂಭೀರವಾಗಿದ್ದರೆ ?, ಇದನ್ನು ತಿಳಿದುಕೊಳ್ಳುವುದಾಗಿತ್ತು’, ಈ ಪರೀಕ್ಷೆಯಲ್ಲಿ ಅನೇಕ ಅಭ್ಯರ್ಥಿಗಳು ಗ್ರಾಮಸ್ಥರ ಪ್ರಶ್ನೆಗೆ ಉತ್ತರ ನೀಡುವಾಗ ಹೈರಾಣಾಗಿರುವರುವುದು ಕಂಡುಬಂದಿತು. ಒಟ್ಟು ೮ ಅಭ್ಯರ್ಥಿಯಲ್ಲಿ ೫ ಅಭ್ಯರ್ಥಿಗಳು ಅನುತ್ತೀರ್ಣರಾಗಿ ಕೇವಲ ಮೂರು ಜನರು ಉತ್ತೀರ್ಣರಾದರು. ಇಲ್ಲಿ ಫೆಬ್ರುವರಿ ೧೮ ರಂದು ಚುನಾವಣೆ ನಡೆಯಲಿದೆ. ಮಾಲುಪಾಡಾ ಇದು ಆದಿವಾಸಿಗಳ ಗ್ರಾಮವಾಗಿದ್ದು ಅಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಕಂಡು ಬಂದಿಲ್ಲ. ಗ್ರಾಮಸ್ಥರು ಇಲ್ಲಿ ಒಂದು ಸಮಿತಿಯ ಸ್ಥಾಪನೆ ಮಾಡಿದ್ದಾರೆ. ಈ ಸಮಿತಿಯ ಪ್ರತಿ ವಾರಕ್ಕೆ ಒಂದು ಸಾರಿ ಸಭೆ ನಡೆಯುತ್ತದೆ ಮತ್ತು ಅದರಲ್ಲಿ ಗ್ರಾಮದ ಸಮಸ್ಯೆಗಳ ಮೇಲೆ ಉಪಾಯ ಮಾಡಲು ಚರ್ಚಿಸಲಾಗುತ್ತದೆ. ಇದರಲ್ಲಿ ಸರಪಂಚರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಮಿತಿಯ ಸರಪಂಚ ಪದಕ್ಕಾಗಿ ಸ್ಪರ್ಧಿಸುವ ಅಭ್ಯರ್ಥಿಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

ಗ್ರಾಮಸ್ಥರು ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಗಳು

೧. ಸರಪಂಚ ಸ್ಥಾನಕ್ಕಾಗಿ ಅಭ್ಯರ್ಥಿಯಾಗಲು ಹಿಂದಿನ ನಿಮ್ಮ ಐದು ಉದ್ದೇಶಗಳು ಹೇಳಿ ?

೨. ಸರಪಂಚ ಆದನಂತರ ನೀವು ೫ ವರ್ಷಗಳಲ್ಲಿ ಯಾವ ಯಾವ ಕೆಲಸ ಮಾಡುವಿರಿ ?

೩. ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಮಾಡಿರುವ ಜನಸೇವೆಯ ೫ ಕೆಲಸಗಳನ್ನು ಹೇಳಿರಿ ?

೪. ಈಗ ಮನೆ ಮನೆಗಳಿಗೆ ಹೋಗಿ ಭೇಟಿಯಾಗುತ್ತಿರಿ, ಹಾಗೆ ಚುನಾವಣೆ ಗೆದ್ದ ನಂತರ ಮನೆಮನೆಗಳಿಗೆ ಭೇಟಿಯಾಗುವರೆ ?

೫. ನೀವು ನಿಮ್ಮ ಪಂಚಾಯತಿಯನ್ನು ಹೇಗೆ ಮಾಡಬೇಕೆಂಬ ಕನಸು ಕಂಡಿದ್ದೀರಿ ?

೬. ನಿಮ್ಮ ಪಂಚಾಯತಿಯಲ್ಲಿ ಎಷ್ಟು ವಿಭಾಗಗಳಿವೆ ಮತ್ತು ಅದರ ಜನಸಂಖ್ಯೆ ಎಷ್ಟು ?