ಹಿಜಾಬ್ ಪ್ರಕರಣ ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ ! – ಸರ್ವೋಚ್ಚ ನ್ಯಾಯಾಲಯದ ಸಲಹೆ

ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ನವದೆಹಲಿ – ಕರ್ನಾಟಕದ ಹಿಜಾಬ್ ಪ್ರಕರಣದ ಬಗ್ಗೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಫೆಬ್ರುವರಿ ೧೧ ರಂದು ಪುನಃ ವಿಚಾರಣೆ ನಡೆಯಿತು. ‘ನಾವು ಯೋಗ್ಯ ಸಮಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಸುವೆವು. ನೀವು ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ’, ಎಂದು ನ್ಯಾಯಾಲಯವು ಹೇಳಿದೆ. ಈ ಮೊದಲು ನ್ಯಾಯಾಲಯ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ವಿರುದ್ಧ, ಅಂದರೆ ತೀರ್ಪು ಬರೋವರೆಗೂ ಧಾರ್ಮಿಕ ಉಡುಪುಗಳು ಮೇಲೆ ನಿಷೇಧ ಹೇರುವ ನಿರ್ಣಯ ವಿರುದ್ಧ ಕಾಂಗ್ರೆಸ್ ನಾಯಕ ಬಿ.ವಿ. ಶ್ರೀನಿವಾಸ ರಾವ್ ಇವರು ಅರ್ಜಿ ದಾಖಲಿಸಿದ್ದರು.

ನ್ಯಾಯಾಧೀಶ ಎನ್.ವಿ. ರಮಣ ಇವರ ನ್ಯಾಯಪೀಠವು ಅರ್ಜಿದಾರರಿಗೆ, ಈ ಪ್ರಕರಣ ದೊಡ್ಡಪ್ರಮಾಣದಲ್ಲಿ ಹಬ್ಬಿಸದಿರಿ. ನೀವು ಇದನ್ನು ರಾಷ್ಟ್ರೀಯ ವಿಷಯವಾಗಿ ಮಾಡದಿರಿ. ನೀವು ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಕಾದು ನೋಡಿ. ನಾವು ಎಲ್ಲಾ ನಾಗರೀಕರ ಮೂಲಭೂತ ಅಧಿಕಾರದ ರಕ್ಷಣೆಗಾಗಿ ಕುಳಿತಿದ್ದೇವೆ. ಈ ಪ್ರಕರಣದಲ್ಲಿ ಯೋಗ್ಯ ಸಮಯದಲ್ಲಿ ನಮ್ಮಿಂದ ಹಸ್ತಕ್ಷೇಪ ಮಾಡಲಾಗುವುದು. ಈ ಬಗ್ಗೆ ಯೋಗ್ಯ ಸಮಯದಲ್ಲಿ ವಿಚಾರಣೆ ನಡೆಸಲಾಗುವುದು. ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಅದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.