ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ತಮಿಳುನಾಡುವಿನ ದೇವಸ್ಥಾನಗಳಲ್ಲಿ ಹಿಂದೂಯೇತರಿಗೆ ಪ್ರವೇಶ ನಿರಾಕರಿಸುವಂತೆ ಅರ್ಜಿ ದಾಖಲು

ಚೆನ್ನೈ (ತಮಿಳುನಾಡು) – ಕೆಲವು ಜನರು ಹಿಜಾಬ್‌ನ ಪರವಾಗಿದ್ದಾರೆ, ಕೆಲವರು ಟೋಪಿಯ ಪರವಾಗಿದ್ದಾರೆ, ಹಾಗೂ ಇನ್ನೂ ಕೆಲವರು ಬೇರೆ ವಿಷಯದ ಪರವಾಗಿದ್ದಾರೆ. ಈ ದೇಶ ಒಂದು ಸಂಘ ಆಗಿದೆಯೇ ಅಥವಾ ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ? ಎಲ್ಲಕ್ಕೂ ಮಿಗಿಲಾಗಿ ಏನು ಇದೆ ದೇಶ ಅಥವಾ ಧರ್ಮ ? ಇದು ಆಶ್ಚರ್ಯಕರವಾಗಿದೆ. ಭಾರತ ಇದು ಜಾತ್ಯತೀತ ದೇಶವಾಗಿದೆ. ಪ್ರಸ್ತುತ ಹಿಜಾಬ್‌ನ ವಿವಾದದಿಂದ ಏನೂ ಸಿಗುವುದಿಲ್ಲ; ಆದರೆ ಧರ್ಮದ ಹೆಸರಿನಲ್ಲಿ ದೇಶದ ವಿಭಜನೆ ಮಾಡುವ ಪ್ರಯತ್ನ ನಡೆಯುತ್ತಿದೆ ಇದೊಂದು ಆಘಾತಕಾರಿಯಾಗಿದೆ. ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಮಂದಿರದಲ್ಲಿ ಹಿಂದೂಯೇತರಿಗೆ ಮತ್ತು ವಿದೇಶಿ ನಾಗರೀಕರಿಗೆ ಪ್ರವೇಶ ನಿರಾಕರಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೇಳಿದರು.

‘ಕೆಲವು ಶಕ್ತಿಗಳು ಸಮವಸ್ತ್ರದ ವಿವಾದ ನಿರ್ಮಿಸಿದ್ದಾರೆ. ಈ ವಿವಾದ ಈಗ ದೇಶಾದ್ಯಂತ ಹರಡಿದೆ’, ಎಂದೂ ಕೂಡ ನ್ಯಾಯಾಲಯವು ಹೇಳಿತು. ತ್ರಿಚಿ ಇಲ್ಲಿಯ ಕಾರ್ಯಕರ್ತರು ರಂಗರಾಜನ್ ನರಸಿಂಹನ್ ಇವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ಇದರಲ್ಲಿ, ದೇವಸ್ಥಾನದಲ್ಲಿಯೂ ವಿಶೇಷ ಉಡುಪು ಜಾರಿಗೊಳಿಸಬೇಕು. ಹಿಂದೂ ಭಕ್ತರು ತಿಲಕ, ಟಿಕಲಿ, ಭಸ್ಮ, ಪಂಚೆ, ಸೀರೆ, ಸಲವಾರ್ ಹಾಕಿಕೊಳ್ಳಬೇಕು. ಇದರಿಂದ ನಾಸ್ತಿಕರಿಗೆ ದೇವಸ್ಥಾನದಲ್ಲಿ ಪ್ರವೇಶ ಮಾಡುವುದನ್ನು ತಡೆಯಬಹುದು. ಹಿಂದೂಯೇತರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಿದ್ದರಿಂದ ದೇವಸ್ಥಾನದ ಪಾವಿತ್ರ್ಯ ಹಾಳಾಗುತ್ತದೆ.

೧. ನ್ಯಾಯಾಲಯವು, ನ್ಯಾಯಾಲಯವು ಭಕ್ತರಿಗೆ ವಿಶೇಷ ಉಡುಪು ತೊಡುವ ಆದೇಶ ಕಡ್ಡಾಯದ ಆದೇಶ ನೀಡಬೇಕು ಮತ್ತು ಹಿಂದೂರೇತರಿಗೆ ಸಂಪೂರ್ಣ ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ಪ್ರವೇಶ ನೀಡುವುದನ್ನು ತಡೆಯಬೇಕು. ಪ್ರತಿಯೊಂದು ದೇವಸ್ಥಾನದಲ್ಲಿ ಬೇರೆಬೇರೆ ಉಡುಪು ಧರಿಸಿ ಪ್ರವೇಶಿಸಲಾಗುತ್ತದೆ ಹಾಗೂ ವಿಧಿ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ವಿಶೇಷ ಉಡುಪು ಇರದೆ ನೀವು ಫಲಕದ ಮೇಲೆ ವಿಶೇಷ ಉಡುಪು ತೊಡುವ ಬೇಡಿಕೆ ಹೇಗೆ ಮಾಡಬಹುದು ?, ಎಂಬ ಅರ್ಜಿದಾರರಿಗೆ ಕೇಳಲಾಗಿದೆ.

೨. ಈ ಸಮಯದಲ್ಲಿ ಮಹಾನ್ಯಾಯವಾದಿ ಆರ್. ಷಣಮುಗಸುಂದರಂ ಇವರು ನ್ಯಾಯಾಲಯಕ್ಕೆ, ಪ್ರತಿಯೊಂದು ದೇವಸ್ಥಾನ ತನ್ನದೇ ಆದ ಪರಂಪರೆಯ ಪಾಲನೆ ಮಾಡುತ್ತದೆ. ದೇವಸ್ಥಾನದ ಧ್ವಜ ಹಾಕಲಾಗುತ್ತದೆ, ಆ ಸ್ಥಳದವರೆಗೆ ಹಿಂದೂರೇತರಿಗೆ ಹೋಗುವ ಅನುಮತಿ ನೀಡಲಾಗುತ್ತದೆ. ಮದ್ರಾಸ್ ಉಚ್ಚ ನ್ಯಾಯಾಲಯ ಈ ಮೊದಲು ದೇವಸ್ಥಾನಗಳಲ್ಲಿ ವಿಶೇಷ ಉಡುಪು ಕಡ್ಡಾಯ ಮಾಡುವ ಅರ್ಜಿಯನ್ನು ತಿರಸ್ಕರಿಸಿತ್ತು.

೩. ಎರಡನ್ನೂ ಆಲಿಸಿದ ನ್ಯಾಯಾಲಯವು ದೇವಸ್ಥಾನದಲ್ಲಿ ವಿಶೇಷ ಉಡುಪು ಧರಿಸದೇ ಬರುವ ಘಟನೆಯ ಛಾಯಾಚಿತ್ರ ಸಹಿತ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಲು ಅರ್ಜಿದಾರರಿಗೆ ತಿಳಿಸಿದರು.