ಮಥುರಾದ ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿನ ಜನಸಂದಣಿಯಿಂದ ಉಸಿರುಗಟ್ಟಿ ವೃದ್ಧ ಭಕ್ತನ ಸಾವು

ಮಂದಿರದಲ್ಲಿ ಜನಸಂದಣಿ ಆಗದೆ ಇರುವ ಹಾಗೆ, ಮಂದಿರ ವ್ಯವಸ್ಥಾಪನೆಯವರು ಎಚ್ಚರಿಕೆ ವಹಿಸಬೇಕು !- ಸಂಪಾದಕರು 

ಶ್ರೀ ಬಾಂಕೆ ಬಿಹಾರಿ ಮಂದಿರ

ಮಥೂರಾ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿ ಫೆಬ್ರವರಿ 12 ರಂದು ಏಕಾದಶಿಯ ದಿನ ಲಕ್ಷ್ಮಣ ಎಂಬ 65 ವಯಸ್ಸಿನ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಮಂದಿರ ವ್ಯವಸ್ಥಾಪನೆಯ ಅವರು ಮಾತ್ರ `ಪ್ರಸ್ತುತ ನಮ್ಮ ಹತ್ತಿರ ಯಾವುದೇ ಭಕ್ತನ ಸಾವಿನ ಮಾಹಿತಿ ಇಲ್ಲ’, ಎಂದು ಹೇಳಿದ್ದಾರೆ. ಶ್ರೀ ಬಾಂಕೆ ಬಿಹಾರಿ ಮಂದಿರದ ಭಕ್ತನ ಸಾವು ಘಟಿಸುವುದು ಇದು ಮೊದಲನೆಯ ಘಟನೆಯಲ್ಲ. ಈ ಮೊದಲು ಈ ರೀತಿಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಅದರಲ್ಲಿ ಜನಸಂದಣಿಯಿಂದ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಮಂದಿರದಲ್ಲಿ ಪ್ರಚಂಡ ಜನಸಂದಣಿ ಇರುವುದರಿಂದ ಮತ್ತು ಯೋಗ್ಯ ವ್ಯವಸ್ಥೆ ಇಲ್ಲದಿರುವುದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಏಕಾದಶಿಯ ದಿನದಂದು ಮಥುರಾದಲ್ಲಿ ಅಷ್ಟೆಯಲ್ಲದೇ ದೂರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ದರ್ಶನಕ್ಕಾಗಿ ಬರುತ್ತಿರುತ್ತಾರೆ.

ಮೃತರ ಸಂಬಂಧಿಕರು, ಯಾವಾಗ ಅವರು ಪ್ರಾರ್ಥನೆ ಮಾಡಲು ಮಂದಿರದ ಒಳಗೆ ತಲುಪಿದರು, ಆಗ ಬಹಳ ಜನಸಂದಣಿ ಇತ್ತು. ಆದ್ದರಿಂದ ಲಕ್ಷ್ಮಣ ಇವರ ಉಸಿರುಗಟ್ಟಿತು. ಅವರಿಗೆ ತಕ್ಷಣ ಅಲ್ಲಿಂದ ಹೊರಕರೆತರಲಾಯಿತು; ಆದರೆ ಮಂದಿರದ ಹೊರಗೆ ಬರುವಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಡಾಕ್ಟರರು ಅವರನ್ನು ಮೃತಪಟ್ಟಿದ್ದಾರೆಂದು ಹೇಳಿದರು.