ಕರ್ಣಾವತಿಯಲ್ಲಿ ೨೦೦೮ ರಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೯ ಜನರು ತಪ್ಪಿತಸ್ಥರು ಹಾಗೂ ೨೮ ಜನರ ಖುಲಾಸೆ

ಈ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು, ಎಂದು ಸರಕಾರ ಬೇಡಿಕೆ ಸಲ್ಲಿಸಬೇಕು !

ಕರ್ಣಾವತಿ (ಗುಜರಾತ) – ಇಲ್ಲಿ ೨೦೦೮ ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ೭೭ ಜನರಲ್ಲಿ ೪೯ ಜನರನ್ನು ತಪ್ಪಿತಸ್ಥರೆಂದು ನಿರ್ಧಸಲಾಸಿದೆ ಹಾಗೂ ೨೮ ಜನರ ಖುಲಾಸೆ ಗೊಳಿಸಲಾಗಿದೆ. ನಗರದಲ್ಲಿ ೨೦ ಸ್ಥಳಗಳಲ್ಲಿ ನಡೆದ ೨೧ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ೧ ಸಾವಿರ ೧೧೭ ಸಾಕ್ಷಿದಾರರ ಹೇಳಿಕೆ ಪಡೆಯಲಾಗಿದೆ. ಈ ಸ್ಫೋಟದಲ್ಲಿ ೫೬ ಜನರು ಸಾವನ್ನಪ್ಪಿದ್ದರು ಹಾಗೂ ೨೪೬ ಜನರು ಗಂಭೀರವಾಗಿ ಗಾಯಗೊಂಡಿದ್ದರು.