ಕಾಸಗಂಜ (ಅಯೋಧ್ಯೆ) – ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು. ಆ ಸಮಯದಲ್ಲಿ ಉಪಸ್ಥಿತವಿರುವ ಪ್ರಧಾನಿ ಮೋದಿಯವರು ಈ ಘೋಷಣೆಯನ್ನು ಸ್ವಾಗತಿಸಿದರು. `ಲತಾ ಮಂಗೇಶ್ಕರ್ ಇವರ ಸ್ಮರಣಾರ್ಥ ಒಂದು ಅಕಾಡಮಿ ಮಾಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ’, ಎಂದೂ ಸಹ ಯೋಗಿ ಆದಿತ್ಯನಾಥ್ ಅವರು ಹೇಳಿದರು.
PM Modi hails Yogi govt’s move to name a ‘chowk’ in Ayodhya after late Lata Mangeshkar https://t.co/I0tH7peTms
— Republic (@republic) February 11, 2022
ಈ ಸಮಯದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ರಾಮಭಕ್ತ ಲತಾಜಿಯವರು ಶ್ರೀರಾಮನ ಬಗ್ಗೆ ಅನೇಕ ಭಕ್ತಿಗೀತೆಗಳು ಅವರ ದೈವೀ ಸ್ವರದಲ್ಲಿ ಅಜರಾಮರಗೊಳಿಸಿದ್ದಾರೆ. ಆದ್ದರಿಂದ ಲತಾಜಿಯ ಹೆಸರು ಶ್ರೀರಾಮಮಂದಿರದ ಮಾರ್ಗದ ವೃತ್ತಕ್ಕೆ ಇಟ್ಟರೆ ಅಪೂರ್ವ ಯೋಗವೇ ಆಗಲಿದೆ ಎಂದು ಹೇಳಿದರು.