ಸಾಮಾಜಿಕ ಜಾಲತಾಣದಲ್ಲಿ ಶ್ರೀಗಣೇಶನ ಹೆಸರಿನ ಪಾಸ ಪೋರ್ಟ್ ಪ್ರಸಾರ ಮಾಡಿ ಶ್ರೀಗಣೇಶನ ವಿಡಂಬನೆ !

‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಶ್ರೀಗಣೇಶನ ಆಗಮನ ಆಗಲಿದೆ’, ಎಂಬ ಸಂಕಲ್ಪನೆಯನ್ನು ಇಟ್ಟುಕೊಂಡು ಶ್ರೀಗಣೇಶನ ಚಿತ್ರ ಇರುವ ಪಾಸ್ ಪೋರ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀಗಣೇಶ ದೇವರನ್ನು ಅಪಮಾನಿಸುತ್ತಿರುವ ಘಟನೆಯು ಬೆಳಕಿಗೆ ಬಂದಿದೆ.

ತಾಲಿಬಾನ್ ನ್ನು ಸಮರ್ಥಿಸುವ ‘ಪೋಸ್ಟ್’ ಅಥವಾ ಹೇಳಿಕೆಗಳನ್ನು ನೀಡುವವರ ಮೇಲೆ ಕಾರ್ಯಾಚರಣೆ ಮಾಡಲಾಗುವುದು ! – ಮಧ್ಯಪ್ರದೇಶ ಸರಕಾರ

ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.

‘ಮರ್ಯಾದೆಯನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು !’(ಅಂತೆ) – ಟ್ವಿಟರ್

ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ

‘ಯೂಟ್ಯೂಬ್’ನಿಂದಲೂ ತಾಲಿಬಾನ್ ಖಾತೆಗಳ ಮೇಲೆ ನಿಷೇಧ

ಫೇಸ್‌ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್‌ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು.

ಕೊರೋನಾ ಮಹಾಮಾರಿ ಮತ್ತು ಮರಣಪ್ರಾಯ ಅಪಪ್ರಚಾರ !

‘ಭಾರತದಲ್ಲಿ ಕೊರೊನಾದ ಹೊರತು ಇನ್ನೊಂದು ಮಹಾಮಾರಿ ಹರಡಿದೆ, ಅದೇ ಸುಳ್ಳು ವಾರ್ತೆಗಳ ಮಹಾಮಾರಿ ! ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಸುಳ್ಳು ಹಾಗೂ ಅಯೋಗ್ಯ ವಾರ್ತೆಗಳನ್ನು ಹಬ್ಬಿಸಲಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಭಯಭೀತರಾಗಿದ್ದಾರೆ.

ಒಂದು ತಿಂಗಳಲ್ಲಿ ಭಾರತದ ೨೦ ಲಕ್ಷ ಅಕೌಂಟ್ ಬಂದ್ ಮಾಡಿದ `ವಾಟ್ಸ್ಅಪ್ ‘ !

ಕೇಂದ್ರ ಸರಕಾರದ ನೂತನ `ಮಾಹಿತಿ ತಂತ್ರಜ್ಞಾನ’ ಕಾನೂನಿನ ಅಡಿಯಲ್ಲಿ ತಿಂಗಳ ವರದಿಯನ್ನು ಸಲ್ಲಿಸುವ ನಿಯಮದ ಪ್ರಕಾರ ‘ವಾಟ್ಸ್ಅಪ್ ‘ ಭಾರತದಲ್ಲಿ ತನ್ನ ಮೊದಲನೇ ತಿಂಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯ ಪ್ರಕಾರ ‘ವಾಟ್ಸ್ಅಪ್’ ಮೇ ೧೫ ರಿಂದ ಜೂನ್ ೧೫ ೨೦೨೧ ಈ ಕಾಲಾವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದ ೨೦ ಲಕ್ಷ ಅಕೌಂಟ್‍ಗಳ ಮೇಲೆ ನಿಷೇಧ ಹೇರಿದೆ.

ಪಾಕಿಸ್ತಾನದಲ್ಲಿ ಬಲವಂತವಾಗಿ ೬೦ ಹಿಂದೂಗಳ ಮತಾಂತರ !

ಕಳೆದ ೭೪ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಈ ರೀತಿಯಲ್ಲಿ ಸಾವಿರಾರು ಹಿಂದೂಗಳು ಮತಾಂತರಗೊಂಡಿದ್ದಾರೆ. ಆದ್ದರಿಂದಲೇ ಅಲ್ಲಿಯ ಹಿಂದೂಗಳ ಜನಸಂಖ್ಯೆ ಈಗ ಶೇ. ೨ ರಷ್ಟು ಉಳಿದಿದೆ ಹಾಗೂ ಭಾರತದಲ್ಲಿ ಕಳೆದ ೭೪ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩ ರಷ್ಟರಿಂದ ೧೪ ರಷ್ಟು ಆಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಟ್ವಿಟರ್ ನಿಂದ ದೂರು ನಿವಾರಣೆ ಅಧಿಕಾರಿಯೆಂದು ವಿನಯ ಪ್ರಕಾಶ್ ಇವರ ನೇಮಕ

ಕೇಂದ್ರ ಸರಕಾರವು ನೂತನವಾಗಿ ಜಾರಿಗೆ ತಂದಿರುವ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಆರಂಭದಲ್ಲಿ ಟ್ವಿಟರ್ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಟ್ವಿಟರ್ ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿತ್ತು. ಅದಕ್ಕನುಸಾರ ದೂರು ನಿವಾರಣೆ ಅಧಿಕಾರಿಯನ್ನು ನೇಮಿಸಲಾಗಿದೆ.

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಗಾಂಧಿ ಕುಟುಂಬದವರು ದೇಶದ ಹಾನಿಯನ್ನು ಎಷ್ಟು ಮಾಡಿದರೋ ಅಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಹ ಮಾಡಿಲ್ಲ ! – ಚಲನಚಿತ್ರ ನಿರ್ಮಾಪಕ ಅಶೋಕ ಪಂಡಿತ್

ರಾಹುಲ್ ಗಾಂಧಿ, ನಿಮ್ಮ ಪಕ್ಷವು ವಿಭಜನವಾದಿ ಗಿಲಾನಿಯ ಚಿಕಿತ್ಸೆಗಾಗಿ ದೆಹಲಿಯ ಪಂಚತಾರಾ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಗಿಲಾನಿಯು ಸಾವಿರಾರು ಕಾಶ್ಮೀರಿ ಹಿಂದೂಗಳ ಸಾವಿಗೆ ಕಾರಣಕರ್ತರಾಗಿದ್ದರು. ಶತ್ರುವನ್ನು ಬೆಂಬಲಿಸುವುದು ಇದು ನಿಮ್ಮ ರಕ್ತದಲ್ಲಿಯೇ ಇದೆ.