ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದಕ್ಕಾಗಿ ಕ್ರಿಕೆಟಿಗ ಹರಭಜನ್ ಸಿಂಗ್‍ರಿಂದ ಕ್ಷಮೆಯಾಚನೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್‍ಸಿಂಗ್ ಭಿಂದ್ರನವಾಲೆ ಅವರ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿ ನೀಡುವ ಪೋಸ್ಟನ್ನು ಮಾಡಿದ್ದರಿಂದ ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹರಭಜನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾದರು. ಹರಭಜನ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದರು.

ಟ್ವಿಟರ್ ಭಾರತದೊಂದಿಗೆ ಸಂಪೂರ್ಣವಾಗಿ ಕಟಿಬದ್ಧವಾಗಿದೆ ಮತ್ತು ಇರಲಿದೆ !

ಟ್ವಿಟರ್ ಭಾರತದೊಂದಿಗೆ ಸಂಪೂರ್ಣ ಕಟಿಬದ್ಧವಾಗಿದೆ ಮತ್ತು ಇರಲಿದೆ. ಹೊಸ ನಿಯಮಗಳು ಮತ್ತು ಸೂಚನೆಗಳನ್ನು ಅನುಸರಿಸಲು ನಾವು ಸರ್ವತೋಮುಖವಾಗಿ ಪ್ರಯತ್ನಿಸುತ್ತೇವೆ. ಆ ದಿಕ್ಕಿನಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ನಾವು ಕಾನೂನುರೀತ್ಯಾ ವರದಿಯನ್ನು ಸಹ ನೀಡಿದ್ದೇವೆ. ಭಾರತ ಸರಕಾರದೊಂದಿಗೆ ನಮ್ಮ ಸಂವಾದವನ್ನು ಮುಂದುವರಿಸುತ್ತೇವೆ ಎಂದು ಮೃದುಧೋರಣೆಯ ನಿಲುವನ್ನು ಟ್ವಿಟರ್ ಕೇಂದ್ರ ಸರಕಾರವು ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ತೆಗೆದುಕೊಂಡಿದೆ.

ಗೂಗಲ್ ಮತ್ತು ಫೇಸ್‍ಬುಕ್‍ನಂತಹ ಬಹುರಾಷ್ಟ್ರೀಯ ಸಂಸ್ಥೆಗಳಿಗೆ `ಜಾಗತಿಕ ತೆರಿಗೆ’ ವಿಧಿಸಲಾಗುವುದು

ಗೂಗಲ್, ಫೇಸ್‍ಬುಕ್ ಮತ್ತು ಆಪಲ್‍ನಂತಹ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ‘ಜಾಗತಿಕ ತೆರಿಗೆ’ ವಿಧಿಸಲು `ಜಿ 7′ (ಕೆನಡಾ, ಅಮೇರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್) ಇತ್ತೀಚಿನ ಸಮೂಹದ ಸಭೆಯಲ್ಲಿ ಒಪ್ಪಿಕೊಂಡಿವೆ. ಜೂನ್ ೧೧ ರಿಂದ ೧೩ ರವರೆಗೆ ಮತ್ತೊಂದು ಸಭೆ ನಡೆಯಲಿದ್ದು, ಇದರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು.

ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರು !

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇವರು ತಮ್ಮ ‘ಇನ್‍ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮದಲ್ಲಿ ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಆತನನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ.

ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ತೆಗೆದುಹಾಕಲಾಗಿದ್ದ ‘ಬ್ಲೂ ಟಿಕ್’ ಅನ್ನು ಮತ್ತೆ ಸೇರಿಸಿದ ಟ್ವಿಟರ್ !

ಹೇಗೆ ವಿರೋಧದ ನಂತರ ಟ್ವಿಟರ್ ನಿಂದ ‘ಬ್ಲೂ ಟಿಕ್’ ಅನ್ನು ಮರು ಹಾಕಲಾಗುತ್ತದೆಯೋ, ಅದೇರೀತಿ ಹಿಂದೂ ಸಂಘಟನೆಗಳ ಫೇಸ್‍ಬುಕ್ ಪುಟಗಳನ್ನು ನಿರ್ಬಂಧ ಹೇರಿದ ಫೇಸ್‍ಬುಕ್‍ನ ವಿರುದ್ಧವೂ ಹಿಂದೂಗಳು ಧ್ವನಿ ಎತ್ತಬೇಕು ಮತ್ತು ಅದರ ಮೇಲೆ ಒತ್ತಡ ಹೇರುವ ಮೂಲಕ, ಆ ಪುಟಗಳನ್ನು ಮರುಪ್ರಾರಂಭಿಸಲು ಫೇಸ್‍ಬುಕ್ ಅನ್ನು ಒತ್ತಾಯಿಸಬೇಕು ! ಅಲ್ಲದೆ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಫೇಸ್‍ಬುಕ್‍ಗೆ ಪಾಠಕಲಿಸಬೇಕು !

ಟ್ವಿಟರ್ ಗೆ ಕೇಂದ್ರ ಸರಕಾರದಿಂದ ಕೊನೆಯ ಎಚ್ಚರಿಕೆ ! 

ಕೇಂದ್ರ ಸರಕಾರವು ‘ಟ್ವಿಟರ್’, ‘ಫೇಸ್‍ಬುಕ್’ ಮತ್ತು ಇತರ ವಿದೇಶಿ ಸಾಮಾಜಿಕ ಮಾಧ್ಯಮಗಳ ಮನಬಂದಂತೆ ವರ್ತಿಸುವ ಮತ್ತು ಮೊಂಡುತನದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ನೂಲಿನಂತೆ ನೇರಗೊಳಿಸಬೇಕು ಎಂದು ಹಿಂದೂಗಳಿಗೆ ಮತ್ತು ಅವರ ಸಂಘಟನೆಗಳಿಗೆ ಅನಿಸುತ್ತದೆ !

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಅದೇರೀತಿ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ನ ಪುಟಗಳ ಮೇಲೆ ನಿರ್ಬಂಧ !

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಸನಾತನ ಪ್ರಭಾತ’ ಮತ್ತು ಸನಾತನ ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ ‘ಸನಾತನ ಶಾಪ್’ ನ ಫೇಸ್‌ಬುಕ್ ಪುಟಗಳನ್ನು ಬಂದ್ ಮಾಡಲಾಗಿದೆ (ಅನ್‌ಪಬ್ಲಿಶ್). ವಿಶೇಷವೆಂದರೆ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಇವುಗಳ ಪುಟಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.